AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India Cricket Schedule 2021-23: ಭಾರತೀಯ ಸೀನಿಯರ್ ಆಟಗಾರರಿಗೆ ಬಿಡುವಿಲ್ಲದ ಶೆಡ್ಯೂಲ್ ಪ್ರಕಟಿಸಿದ ಬಿಸಿಸಿಐ

2020ರಲ್ಲಿ ನಡೆಯಬೇಕಿದ್ದ ಪ್ರಮುಖ ಕ್ರಿಕೆಟ್ ಟೂರ್ನಿಗಳಾದ ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ ಈ ವರ್ಷಕ್ಕೆ ಮುಂದೂಡಲ್ಪಟ್ಟಿರುವುದರಿಂದ ಪ್ರಸಕ್ತ ವರ್ಷದ ಕ್ರಿಕೆಟ್ ಶೆಡ್ಯೂಲ್​ನಲ್ಲಿ ಭಾರತೀಯ ಆಟಗಾರರಿಗೆ ಬಿಡುವಿಲ್ಲದಂಥ ಸ್ಥಿತಿಯನ್ನು ನಿರ್ಮಿಸಿದೆ.

India Cricket Schedule 2021-23: ಭಾರತೀಯ ಸೀನಿಯರ್ ಆಟಗಾರರಿಗೆ ಬಿಡುವಿಲ್ಲದ ಶೆಡ್ಯೂಲ್ ಪ್ರಕಟಿಸಿದ ಬಿಸಿಸಿಐ
ಬಿಸಿಸಿಐ
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on:Feb 06, 2021 | 8:44 PM

Share

ಕೊವಿಡ್-19 ಪಿಡುಗು ದೇಶದಲ್ಲಿ ಎಬ್ಬಿಸಿದ ಭಾರಿ ಪ್ರಮಾಣದ ಕೋಲಾಹಲದಿಂದ ಭಾರತದ 2020ರ ಕ್ರಿಕೆಟ್ ಶೆಡ್ಯೂಲ್ ಏರುಪೇರುಗೊಂಡಿತು. ಅದೃಷ್ಟವಶಾತ್ ಸಾಂಕ್ರಾಮಿಕ ಸೋಂಕಿನ ಉಪಟಳ ಈಗ ಬಹಳಷ್ಟು ಮಟ್ಟಿಗೆ ತಗ್ಗಿದ್ದು ಲಸಿಕೆಗಳೂ ಲಭ್ಯವಾಗಿವೆ. 2020ರಲ್ಲಿ ನಡೆಯಬೇಕಿದ್ದ ಪ್ರಮುಖ ಕ್ರಿಕೆಟ್ ಟೂರ್ನಿಗಳಾದ ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ ಈ ವರ್ಷಕ್ಕೆ ಮುಂದೂಡಲ್ಪಟ್ಟಿರುವುದರಿಂದ ಪ್ರಸಕ್ತ ವರ್ಷದ ಕ್ರಿಕೆಟ್ ಶೆಡ್ಯೂಲ್​ನಲ್ಲಿ ಭಾರತೀಯ ಆಟಗಾರರಿಗೆ ಬಿಡುವಿಲ್ಲದಂಥ ಸ್ಥಿತಿಯನ್ನು ನಿರ್ಮಿಸಿದೆ.

ಕೊವಿಡ್-19 ಪ್ರಭಾವ ತಗ್ಗಿದ ನಂತರ ಭಾರತದಲ್ಲಿ ಶುರುವಾಗಿರುವ ಚಟುವಟಿಕೆಗಳಲ್ಲಿ ಹೆಚ್ಚುಕಡಿಮೆ ಸೀನಿಯರ್ ಮತ್ತು ಜ್ಯೂನಿಯರ್ ಆಟಗಾರರು ತೊಡಗಿಸಿಕೊಂಡಿರುವಂತೆಯೇ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯು (ಬಿಸಿಸಿಐ) ಸೀನಿಯರ್ ರಾಷ್ಟ್ರೀಯ ತಂಡದ ಎರಡು ವರ್ಷಗಳ ಶೆಡ್ಯೂಲನ್ನು ಪ್ರಕಟಿಸಿದೆ. 2021ರಿಂದ 2023ರವರೆಗೆ ಬಿಸಿಸಿಯ ಪ್ರಕಟಿಸಿರುವ ಶೆಡ್ಯೂಲ್ ಹಿರಿಯರ ರಾಷ್ಟ್ರೀಯ ಟೀಮಿನ ಸದಸ್ಯರನ್ನು ಎರಡು ವರ್ಷಗಳ ಕಾಲ ಸಂಪೂರ್ಣವಾಗಿ ಬ್ಯುಸಿಯಾಗಿಡಲಿದೆ.

ಭಾರತದ 2021 ರ ಕ್ರಿಕೆಟಿಂಗ್ ಶೆಡ್ಯೂಲ್ ಹೀಗಿದೆ:

ಏಪ್ರಿಲ್ ನಿಂದ ಮೇ 2021 ರವರೆಗೆ ಇಂಡಿಯನ್ ಪ್ರಿಮೀಯರ್ ಲೀಗ್

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಜೂನ್​ನಲ್ಲಿ ನಡೆಯಲಿದೆ

ಜೂನ್​ನಿಂದ ಜುಲೈ 2021 ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ (ಜೂನ್) ಭಾರತ ಮತ್ತು ಶ್ರೀಲಂಕಾ ಸರಣಿ (3ಒಡಿಐ, 5 ಟಿ20ಐಗಳು) ಏಷ್ಯಾ ಕಪ್

ಜುಲೈ 2021 ಭಾರತ-ಜಿಂಬಾಬ್ವೆ (3 ಏಕದಿನ)

ಜುಲೈನಿಂದ ಸೆಪ್ಟೆಂಬರ್ 2021 ಇಂಗ್ಲೆಂಡ್ ವಿರುದ್ಧ 5 ಟೆಸ್ಟ್​ಗಳು

ಅಕ್ಟೋಬರ್ 2021 ಭಾರತ-ದಕ್ಷಿಣ ಆಫ್ರಿಕಾ (3 ಒಡಿಐಗಳು 5 ಟಿ20ಐಗಳು)

ಅಕ್ಟೋಬರ್​ನಿಂದ ನವೆಂಬರ್ 2021 ಐಸಿಸಿ ಟಿ20 ವಿಶ್ವಕಪ್

ನವೆಂಬರ್​ನಿಂದ ಡಿಸೆಂಬರ್ 2021 ಭಾರತ-ನ್ಯೂಜಿಲೆಂಡ್ (2 ಟೆಸ್ಟ್, 3ಟಿ20ಐಗಳು) ಭಾರತ-ದಕ್ಷಿಣ ಆಫ್ರಿಕಾ (3 ಟೆಸ್ಟ್, 3ಟಿ20ಐಗಳು)

2022 ನೇ ವರ್ಷಕ್ಕೆ ಭಾರತದ ಕ್ರಿಕೆಟ್ ಶೆಡ್ಯೂಲ್ ಜನೆವರಿಯಿಂದ ಮಾರ್ಚ್ 2022 ಭಾರತ-ವೆಸ್ಟ್ ಇಂಡೀಸ್ (3 ಒಡಿಐ, 3ಟಿ20ಐಗಳು ) ಭಾರತ-ಶ್ರೀಲಂಕಾ (3 ಟೆಸ್ಟ್, 3ಟಿ20ಐಗಳು)

ಏಪ್ರಿಲ್​ನಿಂದ ಮೇ 2022 ಇಂಡಿಯನ್ ಪ್ರಿಮೀಯರ್ ಲೀಗ್ 2022

ಜೂನ್ 2022 ಯಾವುದೇ ಸರಣಿ/ಟೂರ್ನಮೆಂಟ್ ಶೆಡ್ಯೂಲ್ ಆಗಿಲ್ಲ

ಜುಲೈಯಿಂದ ಆಗಸ್ಟ್ 2022 ಭಾರತ-ಇಂಗ್ಲೆಂಡ್ (3ಒಡಿಐ, 3ಟಿ20ಐಗಳು) ಭಾರತ-ವೆಸ್ಟ್ ಇಂಡೀಸ್ (3 ಒಡಿಐ, 3 ಟಿ20ಐಗಳು)

ಸೆಪ್ಟೆಂಬರ್ 2022 ಏಷ್ಯಾ ಕಪ್ (ಸ್ಥಳ ಇನ್ನೂ ನಿರ್ಧಾರವಾಗಿಲ್ಲ)

ಅಕ್ಟೋಬರ್​ನಿಂದ ನವೆಂಬರ್ 2022 ಐಸಿಸಿ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ

ನವೆಂಬರ್​ನಿಂದ ಡಿಸೆಂಬರ್ 2022 ಭಾರತ-ಬಾಂಗ್ಲಾದೇಶ (2 ಟೆಸ್ಟ್, 3ಟಿ20ಐಗಳು) ಭಾರತ-ಶ್ರೀಲಂಕಾ (5 ಒಡಿಐಗಳು)

2023 ವರ್ಷಕ್ಕೆ ಭಾರತೀಯ ಕ್ರಿಕೆಟ್ ತಂಡದ ಶೆಡ್ಯೂಲ್ ಜನೆವರಿ 2023

ಭಾರತ-ನ್ಯೂಜಿಲೆಂಡ್ (3 ಒಡಿಐ ಮತ್ತು 3 ಟಿ20ಐಗಳು)

ಫೆಬ್ರುವರಿಯಿಂದ ಮಾರ್ಚ್​ 2023 ಭಾರತ-ಆಸ್ಟ್ರೇಲಿಯಾ (4 ಟೆಸ್ಟ್ 4ಒಡಿಐ ಮತ್ತು 3 ಟಿ20ಐಗಳು) 2021ರಿಂದ 2023ರವರೆಗೆ ಭಾರತವು ಮೂರು ಐಸಿಸಿ ವಿಶ್ವಕಪ್​ಗಳನ್ನು ಆಡಲಿದೆ-ಎರಡು ಟಿ20 ಮತ್ತು ಒಂದು 50-ಓವರ್​ಗಳ ವಿಶ್ವಕಪ್

India vs England Test Series | ಐಪಿಎಲ್ ಆಡುವಾಗ ಬಹಳಷ್ಟು ಅಂಶಗಳನ್ನು ವಿದೇಶಿ ಆಟಗಾರರೊಂದಿಗೆ ನಾವು ಶೇರ್ ಮಾಡಲ್ಲ: ರಹಾನೆ

Published On - 8:27 pm, Sat, 6 February 21

Follow Us
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್