India vs Australia 2020, 1st ODI: ಬೌಲಿಂಗ್-ಬ್ಯಾಟಿಂಗ್​ನಲ್ಲಿ ವಿಜೃಂಭಿಸಿದ ಆಸ್ಟ್ರೇಲಿಯಾ

| Updated By: ganapathi bhat

Updated on: Nov 29, 2020 | 9:35 AM

ಭಾರತ-ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ನಡೆದ ಕ್ರಿಕೆಟ್ ಪಂದ್ಯದಲ್ಲಿ ರನ್​ಗಳ ಹೊಳೆಯೇ ಹರಿಯಿತು. ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ 374 ರನ್​ ಬೆನ್ನಟ್ಟುವ ಕಠಿಣ ಸವಾಲನ್ನು ಭಾರತದ ಎದುರು ಇಟ್ಟಿತ್ತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಭಾರತವು ಮೊದಲ 5 ಓವರ್​ನಲ್ಲಿ 50 ರನ್ ಗಳಿಸಿದ ರೀತಿ ನೋಡಿದಾಗ ಪ್ರಬಲ ಹೋರಾಟ ನೀಡುವ ಸೂಚನೆ ಸಿಕ್ಕಿತ್ತು. ಆದರೆ 50 ಓವರ್ ಮುಗಿಯುವ ಹೊತ್ತಿಗೆ ಭಾರತಕ್ಕೆ 8 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಲು ಮಾತ್ರವೇ ಸಾಧ್ಯವಾಯಿತು. ಆದರೆ ಮಾಯಂಕ್ […]

India vs Australia 2020, 1st ODI: ಬೌಲಿಂಗ್-ಬ್ಯಾಟಿಂಗ್​ನಲ್ಲಿ ವಿಜೃಂಭಿಸಿದ ಆಸ್ಟ್ರೇಲಿಯಾ
ಅರ್ಧ ಶತಕ ಪೂರೈಸಿದ ಶಿಖರ್ ಧವನ್​ಗೆ ಹಾರ್ದಿಕ್ ಪಾಂಡ್ಯ ಅಭಿನಂದನೆ
Follow us on

ಭಾರತ-ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ನಡೆದ ಕ್ರಿಕೆಟ್ ಪಂದ್ಯದಲ್ಲಿ ರನ್​ಗಳ ಹೊಳೆಯೇ ಹರಿಯಿತು. ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ 374 ರನ್​ ಬೆನ್ನಟ್ಟುವ ಕಠಿಣ ಸವಾಲನ್ನು ಭಾರತದ ಎದುರು ಇಟ್ಟಿತ್ತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಭಾರತವು ಮೊದಲ 5 ಓವರ್​ನಲ್ಲಿ 50 ರನ್ ಗಳಿಸಿದ ರೀತಿ ನೋಡಿದಾಗ ಪ್ರಬಲ ಹೋರಾಟ ನೀಡುವ ಸೂಚನೆ ಸಿಕ್ಕಿತ್ತು. ಆದರೆ 50 ಓವರ್ ಮುಗಿಯುವ ಹೊತ್ತಿಗೆ ಭಾರತಕ್ಕೆ 8 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಲು ಮಾತ್ರವೇ ಸಾಧ್ಯವಾಯಿತು.

ಆದರೆ ಮಾಯಂಕ್ ಅಗರ್​ವಾಲ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್​ ಹೆಚ್ಚು ಕ್ರೀಸ್​ನಲ್ಲಿ ನಿಲ್ಲದೆ ಪೆವಿಲಿಯನ್​ಗೆ ಮರಳಿದರು. ತಾಳ್ಮೆಯ ಆಟಕ್ಕೆ ಮೊರೆ ಹೋದ ಶಿಖರ್​ ಧವನ್​ ವಿಕೆಟ್​ ಪತನ ಪರ್ವದ ಎದುರು ಹೆಬ್ಬಂಡೆಯಂತೆ ನಿಂತರು. ಇವರ ಜೊತೆಗೆ ನಿಂತು ಬೀಸು ಆಟವಾಡಿದ ಹಾರ್ದಿಕ್ ಪಾಂಡ್ಯ 76 ಬಾಲ್​ಗಳಲ್ಲಿ 90 ರನ್ ಸಿಡಿಸಿ ಗೆಲುವಿನ ಆಶಾಕಿರಣ ಮೂಡಿಸಿದರು.

ಇವರಿಬ್ಬರೂ ಪೆವಿಲಿಯನ್​ ಹಾದಿ ಹಿಡಿದ ನಂತರ ಬಾಲಂಗೋಚಿಗಳಿಂದ ಹೆಚ್ಚೇನೂ ನಿರೀಕ್ಷಿಸುವಂತಿರಲಿಲ್ಲ. ಇದ್ದುದರಲ್ಲಿ ರವೀಂದ್ರ ಜಡೇಜ ಪರವಾಗಿಲ್ಲ ಎನ್ನುವಂತೆ ಆಡಿದರು.

ಮಾಯಂಕ್ ಅಗರ್​ವಾಲ್ (22), ವಿರಾಟ್​ ಕೊಹ್ಲಿ (21), ಶ್ರೇಯಸ್ ಅಯ್ಯರ್ (2) ಕೆ.ಎಲ್.ರಾಹುಲ್ (12), ಶಿಖರ್​ ಧವನ್ (74), ಹಾರ್ದಿಕ್ ಪಾಂಡ್ಯ (90), ರವೀಂದ್ರ ಜಡೇಜ (25) ವಿಕೆಟ್ ಒಪ್ಪಿಸಿದ್ದಾರೆ.

ಕರಾರುವಾಕ್ ಬೌಲಿಂಗ್​ನಿಂದ ಭಾರತದ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕಿದ ಆಸ್ಟ್ಟೇಲಿಯಾದ ಬೌಲರ್ ಆಡಂ ಝಂಪಾ, 10 ಓವರ್​ಗಳಲ್ಲಿ ಕೇವಲ 54 ರನ್ ನೀಡಿ, 4 ವಿಕೆಟ್ ತಮ್ಮದಾಗಿಸಿಕೊಂಡರು.

ಭಾರತದ ಪರ ಬ್ಯಾಟಿಂಗ್ ಆರಂಭಿಸಿದ ಮಾಯಂಕ್ ಅಗರ್​ವಾಲ್ ಮತ್ತು ಶಿಖರ್​ ಧವನ್ ಉತ್ತಮ ಅಡಿಪಾಯ ಹಾಕಿದರು.

ಇತಿಹಾಸ ಬರೆದ ಸ್ಮಿತ್, ಫಿಂಚ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ 6 ವಿಕೆಟ್​ ನಷ್ಟಕ್ಕೆ 374 ರನ್ ಪೇರಿಸಿತ್ತು. ಒಂದೇ ಇನ್ನಿಂಗ್ಸ್​ನಲ್ಲಿ ಸ್ಮಿತ್ ಮತ್ತು ಫಿಂಚ್​ ಶತಕ ಬಾರಿಸಿ, ಇತಿಹಾಸ ಬರೆದರು. ಟಾಸ್​ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ನಾಯಕನ ನಿರ್ಧಾರವನ್ನು ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್​ಗಳು ತಮ್ಮ ಬೀಸಾಟದ ಬ್ಯಾಟಿಂಗ್​ ವೈಖರಿಯಿಂದ ಅದ್ಭುತವಾಗಿ ಸಮರ್ಥಿಸಿಕೊಂಡರು.

ಆರಂಭಿಕ ಆಟಗಾರ ಆರನ್ ಫಿಂಚ್ 124 ಬಾಲ್​ಗಳಲ್ಲಿ 114 ರನ್ ಪೇರಿಸಿದರು. ಡೇವಿಡ್ ವಾರ್ನರ್ (69) ಔಟಾದ ನಂತರ ಕ್ರೀಸ್​ಗೆ ಬಂದ ಸ್ಟೀವ್​ ಸ್ಮಿತ್ 66 ಎಸೆತಗಳಲ್ಲಿ 105 ರನ್ ಬಾರಿಸಿದರು. ಗ್ಲಿನ್ ಮ್ಯಾಕ್ಸ್​ವೆಲ್ ಕೇವಲ 19 ಎಸೆತಗಳಲ್ಲಿ 45 ರನ್ ಗಳಿಸಿದರೆ ಅಲೆಕ್ಸ್ ಕಾರೆ 13 ಎಸೆಗಳಲ್ಲಿ 17 ರನ್ ಗಳಿಸಿ ನಾಟೌಟ್ ಆಗಿ ಉಳಿದರು.

10 ಓವರ್​ಗೆ 89 ರನ್ ನೀಡಿ, 1 ವಿಕೆಟ್ ಪಡೆದ ಯಜುವೇಂದ್ರ ಚಾಹಲ್​ ದುಬಾರಿ ಎನಿಸಿದರು. ಮೊಹಮದ್ ಶಮಿ 10 ಓವರ್​ಗೆ 3 ವಿಕೆಟ್ ಪಡೆದು ಪರಿಣಾಮಕಾರಿ ಎನಿಸಿದರು. ಜಸ್​ಪ್ರೀತ್ ಬೂಮ್ರಾ 73 ರನ್ (1 ವಿಕೆಟ್), ನವದೀಪ್ ಸೈನಿ 83 ರನ್ (1 ವಿಕೆಟ್), ರವೀಂದ್ರ ಜಡೇಜ 63 ರನ್ ನೀಡಿದರು. ಜಡೇಜ ಬೌಲಿಂಗ್ ಚೆನ್ನಾಗಿತ್ತು. ಆದರೆ ವಿಕೆಟ್ ಬೀಳಲಿಲ್ಲ.

 

 

 

 

Published On - 9:22 am, Sun, 29 November 20