ಮುಸ್ಲಿಂ ಆದರೂ ರಾಮನ ಭಕ್ತ, ರಾಮ ಕೋಟಿ ಬರೆದು ಸರ್ವಧರ್ಮ ಸಮನ್ವಯ ಸಾರುತಿರುವ ಶಿಕ್ಷಕ

ಕೋಲಾರ: ಆತನದ್ದು ಧರ್ಮಕ್ಕೂ ಮಿಗಿಲಾದ ಭಕ್ತಿ, ಆತನ ಧಾರ್ಮಿಕ ಚಿಂತನೆ, ಸರ್ವಧರ್ಮ ಪ್ರಾರ್ಥನೆ ಅದೆಷ್ಟೋ ಜನರಿಗೆ ಸ್ಪೂರ್ತಿ. ಮುಸ್ಲಿಂ ರಾಮ ಭಕ್ತನೊರ್ವ ಶ್ರೀರಾಮ ಕೋಟಿ ಬರೆಯುತ್ತಾ ಶ್ರೀರಾಮನ ಜಪದಿಂದಲೇ ತಮ್ಮ ಜೀವನದ ಅಂತ್ಯಕ್ಕೆ ಬಂದು ಸೇರಿದ್ದಾರೆ. ಶ್ರೀರಾಮನು ಸರ್ವ ಧರ್ಮ ಸೌಹಾರ್ಧತೆಯ ಪ್ರತಿರೂಪ ಅನ್ನೋದಕ್ಕೆ ಇಲ್ಲಿದೆ ಒಂದು ಉದಾಹರಣೆ. ಭದ್ರಾಚಲಂನಲ್ಲಿ ರಾಮನಿಗೆ ಸೋತ ಶಿಕ್ಷಕ: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಮಾಗೊಂದಿ ಗ್ರಾಮದ ನಿವಾಸಿ ಪಾಚಾಸಾಬ್​ ಎಂಬ ರಾಮ ಭಕ್ತ ಪುಸ್ತಕಗಳಲ್ಲಿ ಕೋಟಿ ಕೋಟಿ ಶ್ರೀರಾಮ ನಾಮ […]

ಮುಸ್ಲಿಂ ಆದರೂ ರಾಮನ ಭಕ್ತ, ರಾಮ ಕೋಟಿ ಬರೆದು ಸರ್ವಧರ್ಮ ಸಮನ್ವಯ ಸಾರುತಿರುವ ಶಿಕ್ಷಕ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Nov 30, 2020 | 9:55 AM

ಕೋಲಾರ: ಆತನದ್ದು ಧರ್ಮಕ್ಕೂ ಮಿಗಿಲಾದ ಭಕ್ತಿ, ಆತನ ಧಾರ್ಮಿಕ ಚಿಂತನೆ, ಸರ್ವಧರ್ಮ ಪ್ರಾರ್ಥನೆ ಅದೆಷ್ಟೋ ಜನರಿಗೆ ಸ್ಪೂರ್ತಿ. ಮುಸ್ಲಿಂ ರಾಮ ಭಕ್ತನೊರ್ವ ಶ್ರೀರಾಮ ಕೋಟಿ ಬರೆಯುತ್ತಾ ಶ್ರೀರಾಮನ ಜಪದಿಂದಲೇ ತಮ್ಮ ಜೀವನದ ಅಂತ್ಯಕ್ಕೆ ಬಂದು ಸೇರಿದ್ದಾರೆ. ಶ್ರೀರಾಮನು ಸರ್ವ ಧರ್ಮ ಸೌಹಾರ್ಧತೆಯ ಪ್ರತಿರೂಪ ಅನ್ನೋದಕ್ಕೆ ಇಲ್ಲಿದೆ ಒಂದು ಉದಾಹರಣೆ.

ಭದ್ರಾಚಲಂನಲ್ಲಿ ರಾಮನಿಗೆ ಸೋತ ಶಿಕ್ಷಕ: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಮಾಗೊಂದಿ ಗ್ರಾಮದ ನಿವಾಸಿ ಪಾಚಾಸಾಬ್​ ಎಂಬ ರಾಮ ಭಕ್ತ ಪುಸ್ತಕಗಳಲ್ಲಿ ಕೋಟಿ ಕೋಟಿ ಶ್ರೀರಾಮ ನಾಮ ಬರೆದಿದ್ದಾರೆ. 1923 ರಲ್ಲಿ ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಪಾಚಾಸಾಬ್​, ಅವತ್ತಿಗೆ ಕನ್ನಡದಲ್ಲಿ 8ನೇ ತರಗತಿಯನ್ನ ಇಂಗ್ಲೀಷ್ ಭಾಷೆಯಲ್ಲಿ ವ್ಯಾಸಂಗ ಮಾಡಿರುವವರು. ಹಿಂದೂಗಳ ಆರಾದ್ಯ ದೈವ ಕಲಿಯುಗದ ಮಹಾ ಪುರುಷ ಶ್ರೀರಾಮನ ಜಪ ಮಾಡುತ್ತಾ, ರಾಮನಿಗೆ ತಮ್ಮ ಭಕ್ತಿಯನ್ನ ಸಮರ್ಪಣೆ ಮಾಡುತ್ತಿದ್ದಾರೆ.

ನಿವೃತ್ತಿಯಾದ ಬಳಿಕ ಪಿಂಚಣಿಯಲ್ಲೇ ಜೀವನ ಸಾಗಿಸುತ್ತಾ ಶ್ರೀರಾಮಕೋಟಿ ಬರೆದುಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಶಿಕ್ಷಕರಾಗಿದ್ದಾಗ 22 ವರ್ಷಗಳ ಹಿಂದೆ ಸ್ನೇಹಿತನೊಂದಿಗೆ ಆಂಧ್ರದ ಭದ್ರಾಚಲಂ ದೇವಾಲಯಕ್ಕೆ ಹೋಗಿದ್ದಾಗ, ಅಲ್ಲಿ ಒಬ್ಬ ಸಾಧು ಶ್ರೀರಾಮ ಕೋಟಿ ಬರೆಯುತ್ತಿದ್ದನ್ನು ಕಂಡು ವಿಚಾರಿಸಿದ ಇವರು ಹಾಗೆ ಬರೆದಲ್ಲಿ ನಿನಗೆ ಒಳ್ಳೆಯದಾಗುತ್ತದೆ ಎಂದಿದ್ದರು.

ಭದ್ರಚಲಂ ಅಥವಾ ಅಯೋಧ್ಯೆಗೆ ಅರ್ಪಿಸುವ ಭಯಕೆ: ಅದರಂತೆ ಪಾಚಾಸಾಬ್ ಸಹ ಶ್ರೀರಾಮ ಕೋಟಿ ಬರೆಯುವುದನ್ನು ಪ್ರಾರಂಭಿಸಿ, ಪುಸ್ತಕದಲ್ಲಿ, ಎಕ್ಕದ ಎಲೆ, ಆಲದ ಎಲೆ, ತಾಮ್ರದ ಹಾಳೆ ಮೇಲೂ ಶ್ರೀರಾಮ ಕೋಟಿ ಬರೆಯುತ್ತಿದ್ದಾರೆ. ಇನ್ನು ಇವರು ಶ್ರೀರಾಮ ಕೋಟಿ ಬರೆಯುತ್ತಿರುವುದರಿಂದ ತನಗೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಯಿತು ಅನ್ನೋದು ಇವರ ಮಾತು. ಸದ್ಯ ಒಂದು ಕೋಟಿ ಶ್ರೀರಾಮ ಜಪ ಬರೆದಿರುವ ಪಾಚಾಸಾಬ್​ ಅದನ್ನು ಅಯೋಧ್ಯೆ ಅಥವಾ ಭದ್ರಾಚಲಂಗೆ ಕೊಟ್ಟು ಸಾರ್ಥಕತೆ ಪಡೆಯಬೇಕು ಅನ್ನೋದು ಅವರ ಆಸೆ.

ಇವರ ಭಕ್ತಿಯಲ್ಲಿದೆ ಸರ್ವಧರ್ಮ ಸಮನ್ವಯದ ಸಾರ: ಸರ್ವಧರ್ಮ ಸಮನ್ವಯ ಸಾರುವುದೇ ನನ್ನ ಗುರಿ ಎನ್ನುವ ಇವರು ಈ ಗ್ರಾಮದಲ್ಲಿ ಒಂದು ರಾಮಾಂಜನೇಯ ದೇವಾಲಯ ನಿರ್ಮಾಣ ಮಾಡುವ ಕನಸು ಕಂಡಿದ್ದಾರೆ. ಪಾಚಾಸಾಬ್ ಗಾಂಧೀಜಿ, ನೆಹರು, ಇಂದಿರಾಗಾಂಧಿ, ಕೆ.ಸಿ.ರೆಡ್ಡಿ, ಎಂ.ವಿ.ಕೃಷ್ಣಪ್ಪರವರೊಂದಿಗೆ ಒಡನಾಡ ಹೊಂದಿದ್ದವರು. ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಅವಧಿಯಲ್ಲಿ ಎಲ್ಲೆಡೆ ಮತ ಹಾಕುವುದು ಹೇಗೆ ಎಂಬುದನ್ನು ಕಲಿಸಿಕೊಡುವ ಕೆಲಸ ಮಾಡುತ್ತಿದ್ದರು. ಗೋವಾ ಸತ್ಯಾಗ್ರಹದಲ್ಲಿ ಕೃಷ್ಣಯ್ಯಶೆಟ್ಟಿರವರ ನೇತೃತ್ವದಲ್ಲಿ ಸ್ವಾತಂತ್ರ್ಯ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ನೆನಪು ಮಾಡಿಕೊಳ್ಳುವ ಪಾಚಾಸಾಬ್​ ಇಂದಿಗೆ ನೆಮ್ಮದಿಯ ಜೀವನ ಮಾಡುತ್ತಿದ್ದೇನೆ ಅಂತಾರೆ.

ಅಷ್ಟೇ ಅಲ್ಲಾ 97 ವರ್ಷ ವಯಸ್ಸಾದರೂ ಆರೋಗ್ಯವಾಗಿದ್ದೇನೆ, ಸಕ್ಕರೆ ಕಾಯಿಲೆ, ಬಿಪಿ, ಯಾವುದೇ ಕಾಯಿಲೆ ಇಲ್ಲ, ಬೇರೆ ಹವ್ಯಾಸಗಳೂ ಇಲ್ಲ. ಮನಸ್ಸಿಗೆ ನೆಮ್ಮದಿ ಸಿಕ್ಕಿದೆ. ಈ ರಾಮ ಕೋಟಿ ಬರೆಯುವುದರಿಂದ ನಾನು ಹೇಳಿದ ಮಾತು ನಡೆಯುತ್ತದೆ ಎನ್ನುತ್ತಾರೆ. ಅದರಂತೆ ಗ್ರಾಮದಲ್ಲೂ ಕೂಡಾ ಪಾಚಾಸಾಬ್​ ಎಲ್ಲರಿಗೂ ಅಚ್ಚುಮೆಚ್ಚು, ಪಾಚಾಸಾಬ್​ ಮಾತು ಅಂದ್ರೆ ಗ್ರಾಮದ ಜನರಿಗೂ ಒಂದು ಹಿತವಚನದಂತೆ.

ಒಟ್ಟಾರೆ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿ ದೈವ ಆರಾಧನೆಗೆ ಧರ್ಮ ಅಡ್ಡಿಯಲ್ಲ ಸರ್ವಧರ್ಮದ ಸಾರವೂ ಒಂದೆ ಎಂದು ಹೇಳುವ ಪಾಚಾಸಾಬ್​ ಅಪ್ಪಟ ಶ್ರೀರಾಮನ ಭಕ್ತ. ಸರ್ವಧರ್ಮ ಸಮನ್ವಯದ ತತ್ವ ಸಾರುತ್ತಿರುವ ಇವರ ಶ್ರೀರಾಮ ಕೋಟಿ ಬರಹ ಶ್ರೀರಾಮನ ಪಾದಕ್ಕಿಟ್ಟು ನಮಸ್ಕರಿಸುವ ಇವರ ಮಹಾದಾಸೆ ಆದಷ್ಟು ಬೇಗ ಈಡೇರಲಿ ಅನ್ನೋದೆ ಎಲ್ಲರ ಆಶಯ. -ರಾಜೇಂದ್ರಸಿಂಹ

Published On - 8:20 am, Mon, 30 November 20

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ