ರಕ್ತದ ಮಡುವಿನಲ್ಲಿ ಮಹಿಳೆ ಶವ ಪತ್ತೆ, ಕೌಟುಂಬಿಕ ಕಲಹವೇ 12 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡ್ತಾ?

ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಕೆಲಸ ಮಾಡ್ತಾ ಬ್ಯೂಟಿ ಪಾರ್ಲರ್ ಇಟ್ಕೊಂಡಿದ್ದ ಆಕೆಗೆ ಆತನ ಪರಿಚಯ ಆಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಹನ್ನೆರಡು ವರ್ಷಗಳ ಹಿಂದೆ ಅವರಿಬ್ಬರು ಮದುವೆ ಆಗಿದ್ರು. ಮದುವೆ ನಂತರದಲ್ಲಿ ಸುಂದರ ಸಂಸಾರದ ಪ್ರತೀಕವಾಗಿ ಇಬ್ಬರು ಮಕ್ಕಳು ಸಹ ಇದ್ರು. ಆದ್ರೆ ಅದೇನಾಗಿತ್ತೋ ಏನೋ ಆಕೆ ರಕ್ತದ‌ ಮಡುವಿನಲ್ಲಿ ಬಿದ್ದು ಹೆಣವಾಗಿ ಹೋಗಿದ್ದಾಳೆ.

ರಕ್ತದ ಮಡುವಿನಲ್ಲಿ ಮಹಿಳೆ ಶವ ಪತ್ತೆ, ಕೌಟುಂಬಿಕ ಕಲಹವೇ 12 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡ್ತಾ?
ನೇತ್ರಾವತಿ ಹುಲಗಮ್ಮನವರ ಮತ್ತು ನವೀನ ಹುಲಗಮ್ಮನವರ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Nov 30, 2020 | 8:26 AM

ಹಾವೇರಿ: ಜಿಲ್ಲೆಯ ರಾಣೆಬೆನ್ನೂರಿನ ಮಾರುತಿ ನಗರದಲ್ಲಿ ಭೀಕರ ಘಟನೆಯೊಂದು ಸಂಭವಿಸಿದೆ. ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಕೆಲಸ ಮಾಡ್ತಾ ಬ್ಯೂಟಿ ಪಾರ್ಲರ್ ಇಟ್ಕೊಂಡಿದ್ದ ಮಹಿಳೆ ಶವವಾಗಿ ಪತ್ತೆಯಾಗಿದ್ದಾಳೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೊಂಕೇರಿ ಗ್ರಾಮದ ನಿವಾಸಿ ನೇತ್ರಾವತಿ ಹುಲಗಮ್ಮನವರ. ಹನ್ನೆರಡು ವರ್ಷಗಳ ಹಿಂದೆ ನೇತ್ರಾವತಿ ಬೆಂಗಳೂರಿನ ಗಾರ್ಮೆಂಟ್ಸ್ ಒಂದ್ರಲ್ಲಿ ಕೆಲಸ‌ ಮಾಡ್ತಿದ್ಲಂತೆ. ಜೊತೆಗೆ ಬ್ಯೂಟಿ ಪಾರ್ಲರ್ ಕೂಡ ನಡೆಸ್ತಿದ್ಲಂತೆ. ಆಗ ಅದ್ಹೇಗೋ ರಾಣೆಬೆನ್ನೂರಿನ ನವೀನ ಹುಲಗಮ್ಮನವರ ಎಂಬಾತನ ಜೊತೆಗೆ ಪರಿಚಯ ಆಗಿತ್ತು.

ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ ಹನ್ನೆರಡು ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ರು. ಸುಂದರ ಸಂಸಾರದ ಪ್ರತೀಕವಾಗಿ ಇಬ್ಬರು ಮಕ್ಕಳಿದ್ದಾರೆ. ಆದ್ರೆ ಅದ್ಯಾಕೋ ಕಳೆದ ಕೆಲವು ದಿನಗಳಿಂದ ಇಬ್ಬರ ನಡುವೆ ಕಲಹ ಶುರುವಾಗಿತ್ತಂತೆ. ಆಗ ರಾಜಿ ಪಂಚಾಯ್ತಿ ಮಾಡಿ ಸರಿ ಮಾಡೋಣ ಅಂತಾ ನೇತ್ರಾವತಿ ಮನೆಯವರು ತಿಳಿಸಿದ್ರಂತೆ. ಆದ್ರೆ ಮರುದಿನವೆ ಮಗಳು ಸಾವನ್ನಪ್ಪಿದ್ದಾಳೆ ಅನ್ನೋ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ.

ರಕ್ತದ‌ ಮಡುವಿನಲ್ಲಿ ಮಗಳನ್ನು ನೋಡಿದ ತಾಯಿ ಆಕ್ರಂದನ: ನೇತ್ರಾವತಿ ರಕ್ತದ‌ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಾಳೆ ಅಂತಾ ನೇತ್ರಾವತಿಯ ಪತಿ ನವೀನನ ಗೆಳೆಯ ವಿಷಯ ಮುಟ್ಟಿಸಿದ್ನಂತೆ. ಮನೆಯವರು ರಾಣೆಬೆನ್ನೂರಿನ ಮಗಳ ಮನೆಗೆ ದಾವಿಸಿ ಬಂದು ನೋಡಿದ್ದಾರೆ. ಮಗಳ ಮನೆಯ ಬಾಗಿಲು ತೆಗೆದು ಒಳಗೆ ಹೋಗ್ತಿದ್ದಂತೆ ಮಗಳು ರಕ್ತಸಿಕ್ತವಾಗಿ ಬಿದ್ದಿರೋದು ತಾಯಿಯನ್ನ ಕಂಗಾಲಾಗಿಸಿದೆ.

ನೇತ್ರಾವತಿಯ ಪತಿ ನವೀನನೆ ಪತ್ನಿಯನ್ನ ಕುಡುಗೋಲಿನಿಂದ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ರಾಣೆಬೆನ್ನೂರು ನಗರ ಠಾಣೆ ಪಿಎಸ್ಐ ಪ್ರಭು ಕೆಳಗಿನಮನಿ ಪರಿಶೀಲನೆ ನಡೆಸಿದ್ರು. ನಂತರ ಎಸ್ಪಿ ಕೆ.ಜಿ.ದೇವರಾಜ ಹಾಗೂ ಸಿಪಿಐ ಗೌಡಪ್ಪಗೌಡ ಕೂಡ ಭೇಟಿ ನೀಡಿ ಪರಿಶೀಲನೆ ಮಾಡಿದ್ರು.

ಪ್ರೀತಿಸಿ‌ ಮದುವೆಯಾಗಿ ಹನ್ನೆರಡು ವರ್ಷಗಳ ಕಾಲ ಆಕೆಯೊಂದಿಗೆ ಸಂಸಾರ‌‌ ಮಾಡಿ ಆಕೆಯನ್ನ ಹತ್ಯೆ ಮಾಡಿದ್ದಾನೆ ಅನ್ನೋ ಸುದ್ದಿ ಇಡಿ ನಗರದ ತುಂಬ ಹಬ್ಬಿದೆ. ಪೊಲೀಸರು ಕೂಡ ನೇತ್ರಾವತಿಯ ಪತಿ ನವೀನನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಒಟ್ನಲ್ಲಿ ಪ್ರಕರಣದ‌ ಕುರಿತ ತನಿಖೆ ನಂತರವಷ್ಟೆ ನೇತ್ರಾವತಿಯ ಹತ್ಯೆಗೆ ನಿಜವಾದ ಕಾರಣ ಏನು ಅನ್ನೋದು ಗೊತ್ತಾಗಲಿದೆ.

Published On - 8:08 am, Mon, 30 November 20