India vs Australia 2020, 3rd ODI | ಕೊನೆಯ ಪಂದ್ಯವನ್ನು13 ರನ್​ಗಳಿಂದ ಗೆದ್ದ ಭಾರತ

| Updated By: ganapathi bhat

Updated on: Dec 04, 2020 | 2:50 PM

ಆಸ್ಟ್ರೇಲಿಯವನ್ನು ಕೊನೆಯ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ 13 ರನ್​ಗಳಿಂದ ಸೋಲಿಸಿದ ಭಾರತ ವ್ಹೈಟ್​ವಾಶ್ ಆಗುವುದನ್ನು ತಪ್ಪಿಸಿಕೊಳ್ಳುವುದರ ಜೊತೆಗೆ ಮುಂಬರುವ ಟಿ20 ಪಂದ್ಯಗಳಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿತು.

India vs Australia 2020, 3rd ODI | ಕೊನೆಯ ಪಂದ್ಯವನ್ನು13 ರನ್​ಗಳಿಂದ ಗೆದ್ದ ಭಾರತ
ಫಿಂಚ್ ವಿಕೆಟ್ ಪಡೆದ ಸಂಭ್ರಮದಲ್ಲಿ ಭಾರತೀಯ ತಂಡ
Follow us on

ಪಂದ್ಯದ ಕೊನೆಯ ಕ್ಷಣಗಳಲ್ಲಿ ಸ್ಥಿಮಿತತೆ ಕಾಯ್ದುಕೊಂಡ ಭಾರತೀಯ ಬೌಲರ್​ಗಳು ಅಸ್ಟ್ರೇಲಿಯಾವನ್ನು ಕೊನೆಯ ಒಂದು ದಿನ ಪಂದ್ಯದಲ್ಲಿ 13 ರನ್​ಗಳಿಂದ ಸೋಲುಣಿಸಲು ನೆರವಾದರು. ಗೆಲ್ಲಲು 303 ರನ್ ಗಳಿಸಬೇಕಿದ್ದ ಆಸ್ಟ್ರೇಲಿಯ 49.3 ಓವರ್​ಗಳಲ್ಲಿ 289 ರನ್​ಗಳಿಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡಿತು.

ಭಾರತದ ಪರ ವೇಗದ ಬೌಲರ್​ಗಳು ಅತ್ಯುತ್ತಮವಾಗಿ ದಾಳಿ ನಡೆಸಿದರು. 51 ರನ್​ಗಳಿಗೆ 3 ವಿಕೆಟ್ ಪಡೆದ ಶಾರ್ದುಲ್ ಠಾಕುರ್ ಅತ್ಯಂತ ಯಶಸ್ವೀ ಬೌಲರ್ ಎನಿಸಿದರೆ, ಜಸ್ಪ್ರೀತ್ ಬುಮ್ರಾ 43 ರನ್​ಗಳಿಗೆ 2 ಮತ್ತು ಇದೇ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸಿದ ನಟರಾಜನ್ 70 ರನ್ ನೀಡಿ ದುಬಾರಿಯೆನಿಸಿದರೂ 2 ವಿಕೆಟ್ ಪಡೆದರು.

ಅತಿಥೇಯರ ಪರ ಬ್ಯಾಟಿಂಗ್​ನಲ್ಲಿ ಮತ್ತೊಮ್ಮೆ ಮಿಂಚಿದ ನಾಯಕ ಆರನ್ ಫಿಂಚ್ 82 ಎಸೆತಗಳಲ್ಲಿ 75ರನ್ ಗಳಿಸಿದರು. ಎರಡನೆ ಪಂದ್ಯದಲ್ಲಿ ಆಕ್ರಮಣಕಾರಿ ಆಟವಾಡಿ ಅರ್ಧ ಶತಕ ಬಾರಿಸಿದ್ದ ಗ್ಲೆನ್ ಮಾಕ್ಸ್​ವೆಲ್ ಮತ್ತೊಮ್ಮೆ ಅದೇ ಧೋರಣೆ ಪ್ರದರ್ಶಿಸಿ ಕೇವಲ 38 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್​ಗಳಿದ್ದ 59 ರನ್ ಬಾರಿಸಿದರು

ಇದಕ್ಕೆ ಮುನ್ನ, ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ,  ವಿರಾಟ್​ ಕೊಹ್ಲಿಯವರ 63 ಮತ್ತು ಆಲ್​ರೌಂಡರ್​ಗಳಾಗಿರುವ ಹಾರ್ದಿಕ್ ಪಾಂಡ್ಯ (ಅಜೇಯ 92) ಮತ್ತು ರವೀಂದ್ರ ಜಡೇಜಾ (ಅಜೇಯ 66) ಅವರ ಜೊತೆಯಾಟದಲ್ಲಿ ಬಂದ 150 ರನ್​ಗಳ ನೆರವಿನಿಂದ ಅತಿಥೇಯರಿಗೆ ಗೆಲ್ಲಲು 303 ರನ್​ಗಳ ಸವಾಲೊಡ್ಡಿತು.

 

Published On - 2:41 pm, Fri, 4 December 20