India vs Australia Test Series: ಸಂಕಷ್ಟದಲ್ಲಿ ಟೀಂ ಇಂಡಿಯಾ: ಪ್ರಮುಖ ಐದು ವಿಕೆಟ್​​ ಪತನ

|

Updated on: Jan 11, 2021 | 9:25 AM

ಸದ್ಯ ಟೀಂ ಇಂಡಿಯಾ 272 ರನ್​ಗಳಿಗೆ ಐದು ವಿಕೆಟ್​ ಕಳೆದುಕೊಂಡಿದೆ. ಭಾರತಕ್ಕೆ ಗೆಲ್ಲಲು 135ರನ್​ಗಳ ಅವಶ್ಯಕತೆ ಇದೆ. ಇನ್ನು, ಉಳಿದ ಓವರ್​ಗಳಲ್ಲಿ ಟೀಂ ಇಂಡಿಯಾ ವಿಕೆಟ್​ ಕಾಯ್ದುಕೊಳ್ಳಬೇಕಿದೆ. ಇಲ್ಲವಾದರೆ, ಸೋಲು ಸುತ್ತಿಕೊಳ್ಳೋದು ಖಚಿತ.

India vs Australia Test Series: ಸಂಕಷ್ಟದಲ್ಲಿ ಟೀಂ ಇಂಡಿಯಾ: ಪ್ರಮುಖ ಐದು ವಿಕೆಟ್​​ ಪತನ
ರಿಷಬ್​ ಪಂತ್
Follow us on

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಪ್ರಮುಖ ಐದು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಟೀಂ ಇಂಡಿಯಾಗೆ ಗೆಲ್ಲಲು ಇನ್ನೂ 135 ರನ್​ಗಳ ಅವಶ್ಯಕತೆ ಇದೆ.

ಆಸ್ಟ್ರೇಲಿಯಾ ನೀಡಿದ 407 ರನ್​ಗಳ ಬೃಹತ್​ ಮೊತ್ತ ಬೆನ್ನತ್ತಿದ ಭಾರತ ಉತ್ತಮ ಆರಂಭ ಕಂಡಿತ್ತು. 71 ರನ್​ಗೆ ಮೊದಲ ವಿಕೆಟ್​ ಬಿದ್ದರೆ, 92 ರನ್​ಗೆ ಎರಡನೇ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ತುತ್ತಾಗಿತ್ತು. ರೋಹಿತ್​  ಆಟ ಅರ್ಧ ಶತಕ (52) ಬಾರಿಸಲಷ್ಟೇ ಸೀಮಿತವಾದರೆ, ಶುಭ್​ಮನ್​ ಗಿಲ್ಲ 31ರನ್​ಗೆ ಔಟ್​ ಆದರು. ನಾಯಕ ಅಂಜಿಕ್ಯ ರಹಾನೆ ಕೇವಲ 4 ರನ್​ಗ ಬಾರಿಸಿ ಪೆವಿಲಿಯನ್​ ಸೇರಿದರು.

ನಂತರ ಒಂದಾದ ರಿಷಬ್​ ಪಂತ್​ ಹಾಗೂ ಪೂಜಾರ ಜೋಡಿ ಆಸ್ಟ್ರೇಲಿಯಾ ಬೌಲರ್​​ಗಳ ಬೆವರಿಳಿಸಲು ಶುರು ಮಾಡಿತ್ತು. ಈ ಜೋಡಿ 148 ರನ್​ಗಳ ಜೊತೆಯಾಟ ನೀಡಿ ಟೀಂ ಇಂಡಿಯಾಗೆ ಆಸರೆ ಆಯಿತು. ಶತಕದ ಸನಿಹದಲ್ಲಿದ್ದ ರಿಷಬ್​ ಪಂತ್​ 97ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದರು.

ಸದ್ಯ ಟೀಂ ಇಂಡಿಯಾ 272 ರನ್​ಗಳಿಗೆ ಐದು ವಿಕೆಟ್​ ಕಳೆದುಕೊಂಡಿದೆ. ಭಾರತಕ್ಕೆ ಗೆಲ್ಲಲು 135ರನ್​ಗಳ ಅವಶ್ಯಕತೆ ಇದೆ. ಇನ್ನು, ಉಳಿದ ಓವರ್​ಗಳಲ್ಲಿ ಟೀಂ ಇಂಡಿಯಾ ವಿಕೆಟ್​ ಕಾಯ್ದುಕೊಳ್ಳಬೇಕಿದೆ. ಇಲ್ಲವಾದರೆ, ಸೋಲು ಸುತ್ತಿಕೊಳ್ಳೋದು ಖಚಿತ.

ಇನ್ನು, ರವೀಂದ್ರ ಜಡೇಜಾ ಇಂದಿನ ಪಂದ್ಯದಲ್ಲಿ ಆಡೋದು ಅನುಮಾನ ಎನ್ನಲಾಗಿತ್ತು. ಈಗ ಅದು ಖಚಿತವಾಗಿದೆ. ಆರನೇ ವಿಕೆಟ್​ಗೆ ಜಡೇಜಾ ಕಣಕ್ಕೆ ಇಳಿಯಬೇಕಿತ್ತು. ಆದರೆ, ಆರ್​. ಅಶ್ವಿನ್​ ಕಣಕ್ಕೆ ಇಳಿದಿದ್ದಾರೆ.

India vs Australia Test Series | ಜನಾಂಗೀಯ ನಿಂದನೆ ಪ್ರಕರಣ: ಟೀಂ ಇಂಡಿಯಾದ ಕ್ಷಮೆಯಾಚಿಸಿದ ಕ್ರಿಕೆಟ್ ಆಸ್ಟ್ರೇಲಿಯಾ

Published On - 9:24 am, Mon, 11 January 21