ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 257 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಆಡುತ್ತಿದೆ. ವಾಷಿಂಗ್ಟನ್ ಸುಂದರ್ 33 ರನ್ ಹಾಗೂ ರವಿಚಂದ್ರನ್ ಅಶ್ವಿನ್ 8 ರನ್ ಗಳಿಸಿ ಕಣದಲ್ಲಿದ್ದಾರೆ. ಈ ಮಧ್ಯೆ ಚೇತೇಶ್ವರ ಪೂಜಾರ ಔಟ್ ಆದ ರೀತಿ ಈಗ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಚರ್ಚೆ ಆಗುತ್ತಿದೆ. ಚೇತೇಶ್ವರ ಅವರದ್ದು ಸಂಪೂರ್ಣ ಬ್ಯಾಡ್ಲಕ್ ಎಂದು ಕೆಲವರು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಎನ್ನುವುದಕ್ಕೆ ಇಲ್ಲಿದೆ ವಿವರ.
ಚೇತೇಶ್ವರ ಪೂಜರ ಅರ್ಧ ಶತಕ ಗಳಿಸುವುದಕ್ಕೂ ಮೊದಲು ತುಂಬಾನೇ ನಿಧಾನ ಗತಿಯಲ್ಲಿ ಆಡುತ್ತಿದ್ದರು. ಅರ್ಧ ಶತಕ ಬಾರಿಸಿದ ನಂತರ ಆಟದ ವೇಗವನ್ನು ಹೆಚ್ಚಿಸಿದರು. 142 ಬಾಲ್ಗಳಿಗೆ 73 ರನ್ ಗಳಿಸಿದ್ದರು. ಇಂದು ಚೇತೇಶ್ವರ ಶತಕ ಬಾರಿಸಿಯೇ ಬಾರಿಸುತ್ತಾರೆ ಎಂಬುದು ಅನೇಕರ ನಂಬಿಕೆ ಆಗಿತ್ತು. ಆದರೆ, 143ನೇ ಬಾಲ್ ಎದುರಿಸಿದ ಚೇತೇಶ್ವರ ಲೆಗ್ ಸೈಡ್ಗೆ ಹೊಡೆಯಲು ಹೋದರು. ಅವರು ಹೊಡೆದ ಶಾಟ್ ಏನೋ ಚೆನ್ನಾಗಿತ್ತು. ಆದರೆ, ಈ ಬಾಲ್ ಶಾರ್ಟ್ ಲೆಗ್ ಫೀಲ್ಡರ್ ಆಲ್ಲಿ ಪೋಪ್ ಹೆಲ್ಮೆಟ್ಗೆ ತಾಗಿತ್ತು.
ಹೆಲ್ಮೆಟ್ಗೆ ತಾಗಿದ ಬಾಲ ನೇರವಾಗಿ ಶಾರ್ಟ್ ಮಿಡ್ ವಿಕೆಟ್ನಲ್ಲಿದ್ದ ರೋರಿ ಬರ್ನ್ಸ್ ಕೈ ಸೇರಿತ್ತು. ಬಾಲ್ ಎಲ್ಲಿಯೂ ನೆಲ ತಾಗದ ಕಾರಣ ಚೇತೇಶ್ವರ ಪೂಜಾರ ಪೆವಿಲಿಯನ್ ತೆರಳಬೇಕಾಯಿತು. ಈ ವಿಡಿಯೋ ಸದ್ಯ ಟ್ವಿಟರ್ನಲ್ಲಿ ಹರಿದಾಡಿದೆ. ಐಸಿಸಿ ಕೂಡ ಪೂಜಾರ ವಿಚಿತ್ರವಾಗಿ ಔಟ್ ಆಗಿದ್ದಾರೆ ಎಂದು ಬರೆದುಕೊಂಡಿದೆ.
Pujara falls!
An unusual dismissal, Pujara's pull shot rebounding off the short leg fielder straight to Burns at short mid-wicket ?
India's No.3 walks back for 73.#INDvENG | https://t.co/gnj5x4GOos pic.twitter.com/K4ZpwCohTt
— ICC (@ICC) February 7, 2021
Pujara was very unlucky. He got out like this after playing so well. ???
Yes, we all want #JusticeForPujara . #INDvENG pic.twitter.com/3UyjOfdrMm
— Ritesh Mahato (@Ritesh_7l) February 7, 2021
Published On - 7:49 pm, Sun, 7 February 21