ಇಂದಿರಾ ಕ್ಯಾಂಟೀನ್​ನಲ್ಲಿ ಪೌರ ಕಾರ್ಮಿಕರಿಗೆ ‘ಹುಳಗಳ ಪಲಾವ್’ ಸಪ್ಲೆ!

|

Updated on: Oct 28, 2019 | 12:14 PM

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಆಡಳಿದಲ್ಲಿದ್ದಾಗ ಬಡವರಿಗೆ ಆಸರೆಯಾಗಲೆಂದು ಜಾರಿಗೊಳಿಸಿದ್ದ ಇಂದಿರಾ ಕ್ಯಾಂಟೀನ್ ವ್ಯವಸ್ಥೆಯಲ್ಲಿ ಈಗ ಹುಳಗಳು ಸರಿದಾಡುತ್ತಿವೆ. ರಾಮಮೂರ್ತಿನಗರ ವಾರ್ಡ್ ನ ಪೌರ ಕಾರ್ಮಿಕರ ಊಟದಲ್ಲಿ ಪಲಾವ್ ನಲ್ಲಿ‌ ಹುಳಗಳು ಕಂಡುಬಂದಿರುವ ಆರೋಪ ಕೇಳಿಬಂದಿದೆ. ನಗರವನ್ನ ಸ್ವಚ್ಛ ಮಾಡುವ ಪೌರ ಕಾರ್ಮಿಕರಿಗೇ ಶುದ್ಧವಾದ ಊಟ ಒದಗಿಸುವಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಾಹಕರು ಎಡವಿದ್ದಾರೆ. ಅಷ್ಟೇ ಅಲ್ಲ, ಅರ್ಧಂಬರ್ದ ಬೆಂದಿರುವ ಪಲಾವ್ ಅನ್ನು ನೀಡಿದ್ದಾರೆ. ಅದೂ ಹಬ್ಬದ ದಿನವಾದ ಇಂದು ಬೆಳಿಗ್ಗೆ ಇಂದಿರಾ ಕ್ಯಾಂಟೀನ್ನಿಂದ ಬಂದಿರೋ ಪಲಾವ್ ಇದಾಗಿದೆ. ಇದು […]

ಇಂದಿರಾ ಕ್ಯಾಂಟೀನ್​ನಲ್ಲಿ ಪೌರ ಕಾರ್ಮಿಕರಿಗೆ ಹುಳಗಳ ಪಲಾವ್ ಸಪ್ಲೆ!
Follow us on

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಆಡಳಿದಲ್ಲಿದ್ದಾಗ ಬಡವರಿಗೆ ಆಸರೆಯಾಗಲೆಂದು ಜಾರಿಗೊಳಿಸಿದ್ದ ಇಂದಿರಾ ಕ್ಯಾಂಟೀನ್ ವ್ಯವಸ್ಥೆಯಲ್ಲಿ ಈಗ ಹುಳಗಳು ಸರಿದಾಡುತ್ತಿವೆ. ರಾಮಮೂರ್ತಿನಗರ ವಾರ್ಡ್ ನ ಪೌರ ಕಾರ್ಮಿಕರ ಊಟದಲ್ಲಿ ಪಲಾವ್ ನಲ್ಲಿ‌ ಹುಳಗಳು ಕಂಡುಬಂದಿರುವ ಆರೋಪ ಕೇಳಿಬಂದಿದೆ.

ನಗರವನ್ನ ಸ್ವಚ್ಛ ಮಾಡುವ ಪೌರ ಕಾರ್ಮಿಕರಿಗೇ ಶುದ್ಧವಾದ ಊಟ ಒದಗಿಸುವಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಾಹಕರು ಎಡವಿದ್ದಾರೆ. ಅಷ್ಟೇ ಅಲ್ಲ, ಅರ್ಧಂಬರ್ದ ಬೆಂದಿರುವ ಪಲಾವ್ ಅನ್ನು ನೀಡಿದ್ದಾರೆ. ಅದೂ ಹಬ್ಬದ ದಿನವಾದ ಇಂದು ಬೆಳಿಗ್ಗೆ ಇಂದಿರಾ ಕ್ಯಾಂಟೀನ್ನಿಂದ ಬಂದಿರೋ ಪಲಾವ್ ಇದಾಗಿದೆ.

ಇದು ಒಂದು ದಿನದ ಗೋಳು ಅಲ್ಲ. ದಿನ ನಿತ್ಯ ಇದೇ ರೀತಿಯ ಊಟ ಸಪ್ಲೇಯಾಗುತ್ತಂತೆ! ಅಧಿಕಾರಿಗಳ ಗಮನಕ್ಕೆ ಬಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಬಿಎಂಪಿ ಪೌರ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published On - 12:12 pm, Mon, 28 October 19