ಸಂಸತ್ ಭವನ ಸ್ಥಳಾಂತರ: ಹಿರಿಯ ಕಾಂಗ್ರೆಸ್​ ನಾಯಕ ಬೇಡವೆಂದ್ರು, ಯಾಕೆ?

ದೆಹಲಿ: ಸಂಸತ್ ಭವನ ಸ್ಥಳಾಂತರ ಕುರಿತು ಮಾಜಿ ರಾಜ್ಯಸಭಾ ಸದಸ್ಯ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಡಾ.ಕರಣ್ ಸಿಂಗ್ ಅವರು ಸೋಮವಾರ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ. ಈಗ ಇರುವ ಸುಂದರವಾದ, ವಿಶಿಷ್ಟವಾದ, ವೃತ್ತಾಕಾರದ ಸಂಸತ್ ಭವನ ಬೇರೆಲ್ಲೂ ಇಲ್ಲ. ಮತ್ತೆ ನಾವೆಂದು ಈ ಮಾದರಿಯ ಕಟ್ಟಡ ಕಟ್ಟಲು ಸಾಧ್ಯವಿಲ್ಲ. ಹಳೆಯ ಕಟ್ಟಡ ತ್ಯಜಿಸಿ ಹೊಸ ಆಧುನಿಕ ಕಟ್ಟಡಕ್ಕೆ ಹೋದರೆ ಅದು ಹಳೆಯ ಕಟ್ಟಡದ ವೈಶಿಷ್ಟವನ್ನು ಭರಿಸುವುದಿಲ್ಲ ಎಂದು ಕರಣ್ ಸಿಂಗ್ ತಮ್ಮ ಪತ್ರದಲ್ಲಿ […]

ಸಂಸತ್ ಭವನ ಸ್ಥಳಾಂತರ: ಹಿರಿಯ ಕಾಂಗ್ರೆಸ್​ ನಾಯಕ ಬೇಡವೆಂದ್ರು, ಯಾಕೆ?
Follow us
ಸಾಧು ಶ್ರೀನಾಥ್​
|

Updated on:Oct 29, 2019 | 11:12 AM

ದೆಹಲಿ: ಸಂಸತ್ ಭವನ ಸ್ಥಳಾಂತರ ಕುರಿತು ಮಾಜಿ ರಾಜ್ಯಸಭಾ ಸದಸ್ಯ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಡಾ.ಕರಣ್ ಸಿಂಗ್ ಅವರು ಸೋಮವಾರ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.

ಈಗ ಇರುವ ಸುಂದರವಾದ, ವಿಶಿಷ್ಟವಾದ, ವೃತ್ತಾಕಾರದ ಸಂಸತ್ ಭವನ ಬೇರೆಲ್ಲೂ ಇಲ್ಲ. ಮತ್ತೆ ನಾವೆಂದು ಈ ಮಾದರಿಯ ಕಟ್ಟಡ ಕಟ್ಟಲು ಸಾಧ್ಯವಿಲ್ಲ. ಹಳೆಯ ಕಟ್ಟಡ ತ್ಯಜಿಸಿ ಹೊಸ ಆಧುನಿಕ ಕಟ್ಟಡಕ್ಕೆ ಹೋದರೆ ಅದು ಹಳೆಯ ಕಟ್ಟಡದ ವೈಶಿಷ್ಟವನ್ನು ಭರಿಸುವುದಿಲ್ಲ ಎಂದು ಕರಣ್ ಸಿಂಗ್ ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಅಷ್ಟೇ ಅಲ್ಲದೆ ಪ್ರಸ್ತುತ ಕಟ್ಟಡದಿಂದ ಅನಗತ್ಯ ವಸ್ತುಗಳು ಮತ್ತು ಕಚೇರಿಯನ್ನು ಸ್ಥಳಾಂತರಿಸಲು ಸಾಧ್ಯವಿದೆ. ಅಲ್ಲದೆ ಹೆಚ್ಚಿನ ಸದಸ್ಯರಿಗೆ ಅವಕಾಶ ಕಲ್ಪಿಸಲು ಸಭಾಂಗಣಗಳನ್ನು ವಿಸ್ತರಿಸಲು ನಮಗೆ ಸಾಧ್ಯವಿದೆ. ಹಲವಾರು ವರ್ಷಗಳಿಂದ ಸಂವಿಧಾನ ಸಭೆ ನಡೆಸಿಕೊಂಡು ಬಂದಿರುವ ಸೆಂಟ್ರಲ್ ಹಾಲ್​ಗೆ ಲೋಕಸಭೆಯನ್ನು  ಸ್ಥಳಾಂತರಿಸಿ ಎಂದು ತಿಳಿಸಿದ್ದಾರೆ.

ರಾಜ್ಯಸಭೆಯನ್ನು ಲೋಕಸಭಾ ಸಭಾಂಗಣಕ್ಕೆ ಸ್ಥಳಾಂತರಿಸಬಹುದು. ಅದರ ಹಳೆಯ ಸಭಾಂಗಣವನ್ನು ಸದಸ್ಯರಿಗೆ ಕೇಂದ್ರ ಹಾಲ್ ಮಾದರಿಯ ಕೋಣೆಯಾಗಿ ಬಳಸಬಹುದು. ಐತಿಹಾಸಿಕವಾಗಿರುವ ಈ ಭವ್ಯವಾದ ಕಟ್ಟಡವನ್ನು ತ್ಯಜಿಸುವುದಕ್ಕಿಂತ ಇದು ಉತ್ತಮವಾಗಿದೆ. ಈ ರೀತಿ ಮಾಡುವುದರಿಂದ ನಮ್ಮ ಶ್ರೇಷ್ಠ ಸಂವಿಧಾನ ರಚನೆಕಾರರು ಮತ್ತು ಸಂಸದರ ಸ್ಮರಣೆಯಾಗಿದೆ ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ವೆಂಕಯ್ಯನಾಯ್ಡು ಹೇಳಿದ್ದೇನು? ಆಗಸ್ಟ್​ 5ರಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಸಂಸತ್ತಿನ ಆಧುನೀಕರಣ ಕೈಗೊಳ್ಳುವ ವಿಚಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಬಿಟ್ಟಿದ್ದು, ಸಂಸತ್ ಭವನ ಈಗಾಗಲೇ ತುಂಬ ಹಳೆಯ ಕಟ್ಟಡವಾಗಿದೆ. ಅಲ್ಲದೆ ತನ್ನ ಅಧಿಕಾರಾವಧಿಯಲ್ಲಿ ನಗರಾಭಿವೃದ್ಧಿ ಮತ್ತು ಸಂಸತ್ ವ್ಯವಹಾರಿಕ ಮಂತ್ರಿಗಳೊಡನೆ ಸಂಸತ್ ಕಟ್ಟಡ ಆಧುನೀಕರಣ ಕುರಿತು ಚರ್ಚೆಯಾಗಿದೆ ಎಂದಿದ್ದರು.

ಸಂಸತ್ ಸಾರ್ವಭೌಮತ್ವ ಹಾಗೇ ನಡೆಯಲಿದೆ ಎಂದು ನಾನು ಸಾರ್ವಜನಿಕರಿಗೆ ಭರವಸೆ ನೀಡುತ್ತೇನೆ. ಇದು ದೇಶಗಳ ಪವಿತ್ರ ಸಂಸ್ಥೆಗಳ ಜವಾಬ್ದಾರಿ ಹೆಚ್ಚಿಸಿದೆ ಮತ್ತು ಜನರ ನಿರೀಕ್ಷೆಯನ್ನೂ ಹೆಚ್ಚಿಸಿದೆ. ಸಂಸತ್ ಭವನ ಇನ್ನಷ್ಟು ಸುಂದರವಾಗಿರಲಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದರು.

ಬ್ರಿಟಿಷರ ಆಡಳಿತಾವಧಿಯಲ್ಲಿ ಸಂಸತ್ ಭವನವನ್ನು ನಿರ್ಮಾಣ ಮಾಡಲಾಗಿತ್ತು. 1912-13ರಲ್ಲಿ ಈ ಭವನದ ವಿನ್ಯಾಸವಾಗಿದೆ. 1921ರಲ್ಲಿ ಆರಂಭವಾದ ಕಟ್ಟಡದ ಕಾಮಗಾರಿ 1927ರಲ್ಲಿ ಪೂರ್ಣಗೊಂಡಿತ್ತು.

Published On - 8:02 am, Tue, 29 October 19

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ