ಕೊಪ್ಪಳ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಾವಿನ ಹಿನ್ನೆಲೆ ಡೆತ್ ಅಡಿಟ್ ನಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಕೊಪ್ಪಳ ಕಿಮ್ಸ್ನ ಮೆಡಿಕಲ್ ಸೂಪರಿಟೆಂಡೆಂಟ್ ವೇಣು ಎಂಬುವರಿಂದ ಮಾಹಿತಿ ಬಹಿರಂಗವಾಗಿದ್ದು, ಡಯಾಬಿಟಿಸ್, ಹೈಪರ್ ಟೆನ್ಶನ್ ಹಾಗೂ ಪಾರ್ಶ್ವವಾಯುಗೆ ಒಳಗಾದವರು ಸಾವಿನ ಸಂಖ್ಯೆ ಜಾಸ್ತಿಯಾಗಿದೆ ಎಂದು ಹೇಳಲಾಗುತ್ತಿದೆ. 22 ಜನರ ಡೆತ್ ರಿಪೋರ್ಟ್ ಮಾಡಲಾಗಿದೆ. ಇದರಲ್ಲಿ ವಯಸ್ಕರೇ ಹೆಚ್ಚು ಸಾವನ್ನಪ್ಪಿದ್ದಾರೆ. 30 ರಿಂದ 40 ವರ್ಷದೊಳಗಿನ ಸಾವು ಜಾಸ್ತಿಯಾಗಿದೆ ಎಂದು ವೇಣು ಹೇಳಿದ್ದಾರೆ.
ಡಯಾಬಿಟಿಸ್ ಓವರ್ ಕಂಟ್ರೋಲ್ ಇರುವವರೂ ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ. 30 ವರ್ಷದಿಂದ 40 ವರ್ಷದೊಳಗಿನವರಿಗೆ ಆರ್ಟಿಪಿಸಿ ನೆಗೆಟಿವ್ ಬರತ್ತದೆ. ಸ್ಕ್ಯಾನ್ ಅಲ್ಲಿ ಕೊವಿಡ್ ಲಕ್ಷಣಗಳಿವೆ. ಶ್ವಾಸಕೋಶದ ಸಮಸ್ಯೆ ಶೇಕಡಾ 50 ರಷ್ಟಾದರೆ ಹೊರ ಬರುವ ಸಾಧ್ಯತೆ ಇಲ್ಲ. ನಮ್ಮಲ್ಲಿ ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆ ಇಲ್ಲ ಎಂದು ಹೇಳಿದರು.
ಇಲ್ಲಿವರೆಗೂ 22 ಕೇಸ್ ಅಡಿಟ್ ಮಾಡಲಾಗಿದೆ. ವಯಸ್ಕರು ಲೇಟ್ ಅಡ್ಮಿಶನ್ ಆಗುತ್ತಿದ್ದಾರೆ. ಅದಾಗಲೇ ಅವರ ಶ್ವಾಸಕೋಶ 50 ಪರ್ಸೆಂಟ್ ಇನ್ಫೆಕ್ಷನ್ ಆಗಿರುತ್ತದೆ. ವ್ಯಾಕ್ಸಿನ್ ಹಾಕಿಸಿಕೊಂಡವರಿಗೂ ಸಮಸ್ಯೆ ಆಗಿದೆ. ಆದರೆ ಅವರು ಆಸ್ಪತ್ರೆಗೆ ದಾಖಲಿಸುವ ಅಗತ್ಯ ಇಲ್ಲ. ಇಲ್ಲಿವರೆಗೂ ವ್ಯಾಕ್ಸಿನ್ ಹಾಕಿಸಿಕೊಂಡವರು ಯಾರೂ ಸಾವನ್ನಪ್ಪಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ
(Information on death of Coronavirus is available in Death Audit at koppal)
Published On - 10:02 am, Thu, 6 May 21