
ಕೋಲಾರ: ಕೇರಳದಲ್ಲಿ ಸಿಡಿಮದ್ದು ತುಂಬಿದ್ದ ಆಹಾರ ನೀಡಿ ಗರ್ಭಿಣಿ ಆನೆಯನ್ನ ಕೊಂದ ಘಟನೆ ಮನುಕುಲವನ್ನೇ ಕಲುಕಿತ್ತು. ಆದ್ರೆ ಆ ಘಟನೆಗೆ ತದ್ವಿರುದ್ಧವಾದ ಘಟನೆ ಕೋಲಾರದಲ್ಲಿ ನಡೆಿದಿದೆ. ಗಾಯಗೊಂಡು ನರಳಾಡುತ್ತಿದ್ದ ನಾಗರಹಾವಿನ ರಕ್ಷಣೆ ಮಾಡಿ ಸ್ಥಳೀಯರು ಮಾನವೀಯತೆ ಮೆರೆದಿದ್ದಾರೆ.
ಕೋಲಾರ ನಗರದ ಕಠಾರಿಪಾಳ್ಯ ಬಡಾವಣೆಯಲ್ಲಿ ನಾಗರಕುಂಟೆ ಕಲ್ಯಾಣಿಯ ಪುನಃಶ್ಚೇತನ ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ನೆಲ ಅಗೆಯುವಾಗ, ಮಣ್ಣಿನಲ್ಲಿದ್ದ ನಾಗರಹಾವಿಗೆ ಗಡಾರಿಯಿಂದ ಬಲವಾದ ಪೆಟ್ಟು ಬಿದ್ದಿದೆ. ಗಾಯಗೊಂಡ ನಾಗರಹಾವಿನ ನರಳಾಟ ಕಂಡ ಸ್ಥಳೀಯರು, ಕೋಲಾರದ ಸ್ನೇಕ್ ರವಿಗೆ ವಿಷಯ ತಿಳಿಸಿದ್ದಾರೆ.
ಚೇತರಿಕೆಯಾಗುತ್ತಿದ್ದಂತೆ ಹಾವು ಅಂತರಗಂಗೆ ಬೆಟ್ಟಕ್ಕೆ
ಚೇತರಿಸಿಕೊಂಡ ನಂತರ ಹಾವನ್ನು ಅಂತರಗಂಗೆ ಬೆಟ್ಟ ಪ್ರದೇಶದಲ್ಲಿ ಬಿಟ್ಟು ಮಾನವೀಯತೆ ಮೆರೆದಿದ್ದಾರೆ. ಸ್ನೇಕ್ ರವಿಯ ಈ ಕಾರ್ಯಕ್ಕೆ ಪ್ರಾಣಿ ಪ್ರಿಯರು ಮತ್ತು ಸ್ಥಳೀಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Published On - 5:10 pm, Fri, 12 June 20