ಧಾರವಾಡ ಮಂದಿ ಸರ್ಕಾರವನ್ನೇ ಬದಿಗೊತ್ತಿ, ಸ್ವಂತ ಖರ್ಚಿಂದಲೇ ಕೆರೆ ಅಭಿವೃದ್ಧಿ ಮಾಡಿಬಿಟ್ರು!

ಧಾರವಾಡ : ಎಲ್ಲೆಡೆ ಕೆರೆಗಳ ಒತ್ತುವರಿಯಾಗುತ್ತಿರುವ ಸಂದರ್ಭದಲ್ಲಿ, ಧಾರವಾಡದ ಜನ ಕೆರೆಯನ್ನ ಅಭಿವೃದ್ಧಿ ಪಡಿಸುವ ಮೂಲಕ ನಾಡಿಗೆ ಮಾದರಿಯಾಗಿದ್ದಾರೆ. ಅದೂ ತಮ್ಮ ಸ್ವಂತ ಖರ್ಚಿನಲ್ಲಿ.. ಕೆರೆಗಳ ಒತ್ತುವರಿ ಅಥವಾ ಕೆರೆಗಳ ದಯನೀಯ ಸ್ಥಿತಿ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಕೆಲವೊಮ್ಮೆ ಅಭಿವದ್ಧಿಗಾಗಿ ಕೋಟ್ಯಾಂತರ ರೂಪಾಯಿ ಬಿಡುಗಡೆಯಾಗಿ, ಖರ್ಚೂ ಆಗುತ್ತೆ. ಆದ್ರೆ ಕೆರೆಗಳ ಸ್ಥಿತಿ ಮಾತ್ರ ಯಾವುದೇ ಬದಲಾವಣೆಯಾಗುವುದಿಲ್ಲ. ಆದ್ರೆ ಧಾರವಾಡದ ಜನರು ಸರಕಾರವನ್ನೇ ಬದಿಗೊತ್ತಿ ಕೆರೆ ಅಭಿವೃದ್ಧಿಪಡಿಸಿದ್ದಾರೆ. ಕೊರೊನಾ ಕಾಟದಿಂದ ಲಾಕ್‌ಡೌನ್ ಸಿಕ್ಕಿದ್ದೆ ತಡ..  ಎಲ್ಲೆಡೆ ಲಾಕ್‌ಡೌನ್ ಅಂದುಕೊಂಡು […]

ಧಾರವಾಡ ಮಂದಿ ಸರ್ಕಾರವನ್ನೇ ಬದಿಗೊತ್ತಿ, ಸ್ವಂತ ಖರ್ಚಿಂದಲೇ ಕೆರೆ ಅಭಿವೃದ್ಧಿ ಮಾಡಿಬಿಟ್ರು!
Follow us
ಸಾಧು ಶ್ರೀನಾಥ್​
|

Updated on:Jun 12, 2020 | 7:11 PM

ಧಾರವಾಡ : ಎಲ್ಲೆಡೆ ಕೆರೆಗಳ ಒತ್ತುವರಿಯಾಗುತ್ತಿರುವ ಸಂದರ್ಭದಲ್ಲಿ, ಧಾರವಾಡದ ಜನ ಕೆರೆಯನ್ನ ಅಭಿವೃದ್ಧಿ ಪಡಿಸುವ ಮೂಲಕ ನಾಡಿಗೆ ಮಾದರಿಯಾಗಿದ್ದಾರೆ. ಅದೂ ತಮ್ಮ ಸ್ವಂತ ಖರ್ಚಿನಲ್ಲಿ..

ಕೆರೆಗಳ ಒತ್ತುವರಿ ಅಥವಾ ಕೆರೆಗಳ ದಯನೀಯ ಸ್ಥಿತಿ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಕೆಲವೊಮ್ಮೆ ಅಭಿವದ್ಧಿಗಾಗಿ ಕೋಟ್ಯಾಂತರ ರೂಪಾಯಿ ಬಿಡುಗಡೆಯಾಗಿ, ಖರ್ಚೂ ಆಗುತ್ತೆ. ಆದ್ರೆ ಕೆರೆಗಳ ಸ್ಥಿತಿ ಮಾತ್ರ ಯಾವುದೇ ಬದಲಾವಣೆಯಾಗುವುದಿಲ್ಲ. ಆದ್ರೆ ಧಾರವಾಡದ ಜನರು ಸರಕಾರವನ್ನೇ ಬದಿಗೊತ್ತಿ ಕೆರೆ ಅಭಿವೃದ್ಧಿಪಡಿಸಿದ್ದಾರೆ.

ಕೊರೊನಾ ಕಾಟದಿಂದ ಲಾಕ್‌ಡೌನ್ ಸಿಕ್ಕಿದ್ದೆ ತಡ..  ಎಲ್ಲೆಡೆ ಲಾಕ್‌ಡೌನ್ ಅಂದುಕೊಂಡು ಮನೆಯಲ್ಲಿ ಸೇಫಾಗಿ ಕೂತಿದ್ದವರೇ ಹೆಚ್ಚು. ಆದ್ರೆ, ಧಾರವಾಡದ ಬಸವೇಶ್ವರ ನಗರ, ಗುರುದೇವ ನಗರ, ನಂದಿನಿ ಲೇಔಟ್ ಹಾಗೂ ಶಾಖಾಂಬರಿ ನಗರದ ನಿವಾಸಿಗಳು ತಮ್ಮ ಏರಿಯಾದಲ್ಲಿರುವ ಒಂದು ಎಕರೆ ಐದು ಗುಂಟೆ ವಿಸ್ತೀರ್ಣದ ಕೆರೆ ಅಭಿವೃದ್ಧಿಪಡಿಸಿದ್ದಾರೆ. ಅದೂ ತಮ್ಮ ಸ್ವಂತ ಹಣ ಖರ್ಚು ಮಾಡುವ ಮೂಲಕ.

ಈ ಭಾಗದ ಜನರು 2012 ರಿಂದಲೂ ಕೆರೆ ಅಭಿವೃದ್ಧಿ ಪಡಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಿ, ಹೋರಾಟ ಮಾಡುತ್ತಲೇ ಬಂದಿದ್ದರು. ಆದರೆ ಸರಕಾರ ಮಾತ್ರ ಯಾವುದೇ ರೀತಿ ಸ್ಪಂದಿಸಿರಲಿಲ್ಲ. ಇದರಿಂದ ಬೇಸತ್ತ ಸ್ಥಳೀಯರು ತಾವೇ ಈ ಕರೆ ಅಭಿವೃದ್ಧಿ ಮಾಡಲು ನಿರ್ಧರಿಸಿದರು. ಇದಕ್ಕೆ ಸರಿಯಾಗಿ ಎಲ್ಲೆಡೆ ಲಾಕ್‌ಡೌನ್‌ ವಿಧಿಸಿದ್ದು ವರವಾಗಿ ಪರಿಣಮಿಸಿದೆ.

ಶ್ರಮಕ್ಕೆ ತಕ್ಕ ಪ್ರತಿಫಲ.. ಮಳೆ ಸುರಿದು ಕೆರೆಯಲ್ಲಿ ನೀರು!   ತಾವೇ ಚಂದಾ ಎತ್ತಿ ಸುಮಾರು ಮುೂರು ಲಕ್ಷ ರೂ. ಗಳನ್ನ ಸಂಗ್ರಹಿಸಿದ್ದಾರೆ. ಹಣ ಸಂಗ್ರಹವಾದ ಮೇಲೆ ಯಂತ್ರಗಳ ಮೂಲಕ ಕೆರೆ ಹೂಳನ್ನು ತೆಗೆಸಿದ್ದಾರೆ. ಇನ್ನುಳಿದ ಕೆಲಸವನ್ನು ತಾವೇ ಶ್ರಮದಾನದ ಮುೂಲಕ ಮಾಡಿ ಮುಗಿಸಿದ್ದಾರೆ. ಪರಿಣಾಮ ಕೇವಲ 10  ದಿನಗಳಲ್ಲಿ ಕೆರೆ ಪುನಃಶ್ಚೇತನವಾಗಿದೆ. ಇವರ ಶ್ರಮಕ್ಕೆ ತಕ್ಕ ಪ್ರತಿಫಲವೆನ್ನುವಂತೆ ಕೆಲ ದಿನಗಳಲ್ಲೇ ಸುರಿದ ಮಳೆಯಿಂದಾಗಿ ಇದೀಗ ಕೆರೆಯಲ್ಲಿ ನೀರು ಸಂಗ್ರಹವಾಗತೊಡಗಿದೆ.

ವಾಯುವಿಹಾರಕ್ಕೆ ಹೆಜ್ಜೆ ಹಾಕುವಾಗ ಹೆಮ್ಮೆಯಿಂದ ಎದೆಯುಬ್ಬಿಸಿ ನಡೆಯುತ್ತಾರೆ ಇಲ್ಲಿನ ಜನ! ಈ ಮುಂಚೆ ಕೆರೆಗೆ ಸೇರುತ್ತಿದ್ದ ಚರಂಡಿ ನೀರನ್ನು ಬೇರೆಡೆ ತಿರುಗಿಸಿದ್ದಾರೆ. ಪರಿಣಾಮ ಹೂಳು ತುಂಬಿ, ಜತೆಗೆ ಚರಂಡಿ ನೀರಿನಿಂದಾಗಿ ಸೊಳ್ಳೆಗಳ ಆಗರವಾಗಿದ್ದ ಕೆರೆ ಈಗ ಝಗಮಗಿಸುತ್ತಿದೆ. ಸ್ಥಳೀಯರ ಮುಂಜಾವು ಮತ್ತು ಸಂಜೆ ವಾಕಿಂಗ್‌ ಮತ್ತು ವಾಯುವಿಹಾರದ ತಾಣವಾಗಿ ಮಾರ್ಪಟ್ಟಿದೆ. ಸರಕಾರದ ಮೇಲೆ ಅವಲಂಬಿತರಾಗದೇ ತಾವೇ ಮನಸ್ಸು ಮಾಡಿದ್ರೆ ಏನು ಮಾಡಬುಹುದು ಎನ್ನುವುದಕ್ಕೆ ಧಾರವಾಡದ ಈ ಜನ ಇತರರಿಗೆ ಮಾದರಿಯಾಗಿದ್ದಾರೆ.

Published On - 7:09 pm, Fri, 12 June 20