ಫ್ರೀಡೌನ್ ಬಳಿಕ ಹೆಚ್ಚಾಯ್ತು ಕೊರೊನಾ ಕೇಸ್, ಕೇಂದ್ರ ಗೃಹ ಇಲಾಖೆಯಿಂದ ರಾಜ್ಯಗಳಿಗೆ ಖಡಕ್ ಲೆಟರ್!
ದೆಹಲಿ: ಮನೆಯಿಂದ ಹೊರಗೆ ಹೆಜ್ಜೆ ಇಟ್ರು ಸುತ್ತಿಕೊಳ್ತಿದೆ.. ಎಲ್ಲಿಂದ.. ಯಾವಾಗ.. ಯಾರ ನಂಟಿನಿಂದ ಗಂಟು ಹಾಕಿಕೊಳ್ತಿದೆ ಗೊತ್ತೇ ಆಗ್ತಿಲ್ಲ. ಲಾಕ್ಡೌನ್ ರಿಲೀಫ್ ಕೊಟ್ಮೇಲಂತೂ ಕೊರೊನಾ ರಣಕೇಕೆ ಹಾಕ್ತಿದೆ. ಫ್ರೀಡೌನ್ ಮಾಡಿ ಕಂಗೆಟ್ಟಿರೋ ಕೇಂದ್ರ ಸರ್ಕಾರ ಮತ್ತೆ ಲಾಕ್ಡೌನ್ ಮಾಡೋ. ಕೊರೊನಾ ಕಂಟ್ರೋಲ್ಗೆ ಹೊಸ ಗೈಡ್ಲೈನ್ಸ್ ಜಾರಿಯಾಗೋ ಸುಳಿವು ಸಿಕ್ಕಿದೆ. ಆದೇ, ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಅಜಯ್ ಬಲ್ಲಾ ಬರೆದಿರೋ ಇಂಪಾರ್ಟೆಂಟ್ ಲೆಟರ್. ‘ಕ್ರೂರಿ’ ಕಂಟ್ರೋಲ್ಗೆ ಕೇಂದ್ರದಿಂದ ಹೊಸ ಗೈಡ್ಲೈನ್ಸ್! ಯೆಸ್.. ಎರಡುವರೆ ತಿಂಗಳ ಲಾಕ್ಡೌನ್ನಿಂದ ಜನರು ಖುಷಿಯಾಗಿ […]
ದೆಹಲಿ: ಮನೆಯಿಂದ ಹೊರಗೆ ಹೆಜ್ಜೆ ಇಟ್ರು ಸುತ್ತಿಕೊಳ್ತಿದೆ.. ಎಲ್ಲಿಂದ.. ಯಾವಾಗ.. ಯಾರ ನಂಟಿನಿಂದ ಗಂಟು ಹಾಕಿಕೊಳ್ತಿದೆ ಗೊತ್ತೇ ಆಗ್ತಿಲ್ಲ. ಲಾಕ್ಡೌನ್ ರಿಲೀಫ್ ಕೊಟ್ಮೇಲಂತೂ ಕೊರೊನಾ ರಣಕೇಕೆ ಹಾಕ್ತಿದೆ. ಫ್ರೀಡೌನ್ ಮಾಡಿ ಕಂಗೆಟ್ಟಿರೋ ಕೇಂದ್ರ ಸರ್ಕಾರ ಮತ್ತೆ ಲಾಕ್ಡೌನ್ ಮಾಡೋ. ಕೊರೊನಾ ಕಂಟ್ರೋಲ್ಗೆ ಹೊಸ ಗೈಡ್ಲೈನ್ಸ್ ಜಾರಿಯಾಗೋ ಸುಳಿವು ಸಿಕ್ಕಿದೆ. ಆದೇ, ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಅಜಯ್ ಬಲ್ಲಾ ಬರೆದಿರೋ ಇಂಪಾರ್ಟೆಂಟ್ ಲೆಟರ್.
‘ಕ್ರೂರಿ’ ಕಂಟ್ರೋಲ್ಗೆ ಕೇಂದ್ರದಿಂದ ಹೊಸ ಗೈಡ್ಲೈನ್ಸ್! ಯೆಸ್.. ಎರಡುವರೆ ತಿಂಗಳ ಲಾಕ್ಡೌನ್ನಿಂದ ಜನರು ಖುಷಿಯಾಗಿ ಹೆಜ್ಜೆ ಇಡ್ತಿರೋವಾಗ್ಲೇ ಕೊರೊನಾ ಮಹಾಘಾತ ನೀಡ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಕೊರೊನಾ ಆರ್ಭಟಿಸ್ತಿದ್ರೆ, ಜುಲೈನಲ್ಲಿ ಕೊರೊನಾ ವಿಸ್ಫೋಟಗೊಳ್ಳೋ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಈ ಹೊತ್ತಲ್ಲೇ ಕೇಂದ್ರ ಸರ್ಕಾರ ಹೊಸ ಗೈಡ್ಲೈನ್ಸ್ ಜಾರಿ ಮಾಡಿದೆ. ಅದೇನಂದ್ರೆ, ಕೊರೊನಾ ಕಂಟ್ರೋಲ್ಗೆ ರಾತ್ರಿ 9ರಿಂದ ಬೆಳಿಗ್ಗೆ 5ರವರೆಗೆ ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿ ಮಾಡಿ. ಜನ ಸಂಚಾರವನ್ನ ಸಂಪೂರ್ಣವಾಗಿ ತಡೆಯಿರಿ ಅಂತ ರಾಜ್ಯ ಸರ್ಕಾರಗಳಿಗೆ ಖಡಕ್ ಪತ್ರ ರವಾನಿಸಿದೆ. ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ ಅಜಯ್ ಬಲ್ಲಾ ಪತ್ರ ಬರೆದಿದ್ದು, ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ ಮಾಡಿಕೊಡುವಂತೆ ಸೂಚಿಸಿದ್ದಾರೆ.
ದೇಶ ಮತ್ತೆ ಲಾಕ್ ಆಗುತ್ತಾ? ಹೊಸ ಟಿಪ್ಸ್ ಸಿಗುತ್ತಾ? ಇನ್ನು, ದೇಶಾದ್ಯಂತ ಕೊರೊನಾಘಾತ ಹೆಚ್ಚಾಗ್ತಿರೋದು ಪ್ರಧಾನಿ ಮೋದಿ ಕೂಡ ಟೆನ್ಷನ್ ಆಗಿದ್ದಾರೆ. ಕೊರೊನಾ ಕಂಟ್ರೋಲ್ಗೆ ಸ್ಟ್ರಿಕ್ಟ್ ರೂಲ್ಸ್ ಪಾಲೋ ಮಾಡಿ ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಸಿಎಂಗಳಿಗೆ ಖಡಕ್ ಸೂಚನೆ ನೀಡ್ತಾನೆ ಇದ್ದಾರೆ. ಇದೀಗ, ಜೂನ್ 16 ಮತ್ತು 17ರಂದು ಎಲ್ಲಾ ರಾಜ್ಯಗಳ ಸಿಎಂಗಳ ಜತೆ ಪ್ರಧಾನಿ ಮೋದಿ ಮತ್ತೆ ಸಂವಾದ ನಡೆಸಲಿದ್ದಾರೆ. ಕೊರೊನಾ ಕೇಸ್ ಕಡಿಮೆ ಇರುವ ರಾಜ್ಯಗಳ ಜೊತೆ ಜೂನ್ 16ರಂದು ಸಭೆ ನಡೆಸಿದ್ರೆ, ಕೊರೊನಾ ಕೇಸ್ ಹೆಚ್ಚಿರುವ ರಾಜ್ಯಗಳ ಸಿಎಂಗಳ ಜೊತೆ ಜೂ17ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂಚಿಂಚು ಮಾಹಿತಿ ಕಲೆ ಹಾಕಲಿದ್ದಾರೆ.
ಭಾರತದಲ್ಲಿ 3 ಲಕ್ಷ ಗಡಿ ದಾಟಿದ ಹೆಮ್ಮಾರಿ ಸೋಂಕಿತರು! ಇತ್ತ ದೇಶದಲ್ಲಿ ಕೊರೊನಾ ನಂಜಿನ ನಂಟು ಊಹೆಗೂ ನಿಲುಕದಂತೆ ಏರ್ತಾನೆ ಇದೆ. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3 ಲಕ್ಷದ ಗಡಿ ದಾಟಿರೋದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಅದ್ರಲ್ಲೂ ಶಾಕಿಂಗ್ ವಿಷ್ಯ ಅಂದ್ರೆ, ಕೊರೊನಾ ಪೀಡಿತ ವಿಶ್ವದ ರಾಷ್ಟ್ರಗಳ ಪೈಕಿ ಭಾರತ 4ನೇ ಸ್ಥಾನಕ್ಕೇರಿರೋದು ಮತ್ತೊಂದು ಮಹಾಘಾತ ನೀಡಿದಂತಾಗಿದೆ. ನಿನ್ನೆ ಒಂದೇ ದಿನ ಸುಮಾರು 11,106 ಸೋಂಕಿತರು ಪತ್ತೆಯಾಗಿದ್ದು. ಇದುವರೆಗೆ ಭಾರತದಲ್ಲಿ ಒಟ್ಟು 8,890 ಜನ ಕೊರೊನಾಗೆ ಏಟಿಗೆ ಸಾವಿನ ಮನೆ ಸೇರಿದ್ದಾರೆ.
ಮಹಾರಾಷ್ಟ್ರ ಒಂದರಲ್ಲೇ 1ಲಕ್ಷಕ್ಕೂ ಹೆಚ್ಚು ಸೋಂಕಿತರು! ಇಡೀ ದೇಶಕ್ಕೆ ದೇಶವೇ ಕೊರೊನಾ ಕೂಪಕ್ಕೆ ಬಿದ್ದು ಒದ್ದಾಡ್ತಿದ್ರೆ, ಮರಾಠರ ನಾಡು ಮಹಾರಾಷ್ಟ್ರದಲ್ಲಿ ಕೊರೊನಾ ರಣಕೇಕೆ ಹಾಕ್ತಿದೆ. ಮಹಾರಾಷ್ಟ್ರ ಒಂದರಲ್ಲೇ 1ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಕೂಪಕ್ಕೆ ಬಿದ್ದಿರೋದು ಎಲ್ಲರ ನಿದ್ದೆಗೆಡಿಸಿದೆ. ನಿನ್ನೆ ಒಂದೇ ದಿನ 3493 ಕೇಸ್ಗಳು ಪತ್ತೆಯಾಗಿದ್ದು ಎಲ್ಲರನ್ನು ನಡುಗಿಸಿದೆ. ಹಾಗಿದ್ರೆ ಇತರೆ ರಾಜ್ಯಗಳಲ್ಲಿ ಕೊರೊನಾರ್ಭಟ ಹೇಗಿದೆ ಅನ್ನೋದನ್ನ ನೋಡೋದಾದ್ರೆ.
ಕೊರೊನಾ ರೌದ್ರಾವತಾರ! ಇನ್ನು, ತಮಿಳುನಾಡಿನಲ್ಲಿ 38,716 ಜನರಿಗೆ ಕೊರೊನಾ ಸುತ್ತಿಕೊಂಡಿದ್ರೆ, ದೆಹಲಿಯಲ್ಲಿ 34687, ಗುಜರಾತ್ನಲ್ಲಿ 22032, ರಾಜಸ್ಥಾನದಲ್ಲಿ 11838, ಮಧ್ಯಪ್ರದೇಶದಲ್ಲಿ 10241, ಪಶ್ಚಿಮ ಬಂಗಾಳದಲ್ಲಿ 9768, ಜಮ್ಮು-ಕಾಶ್ಮೀರದಲ್ಲಿ 4574 ಹಾಗೂ ಆಂಧ್ರಪ್ರದೇಶದಲ್ಲಿ 5429 ಜನರಿಗೆ ರಕ್ಕಸ ವೈರಸ್ ದಾಳಿ ಇಟ್ಟಿದೆ.
ಒಟ್ನಲ್ಲಿ, ಚೀನಾದ ಪಾಪದ ಕೂಸು ಹೆಜ್ಜೆಗುರುತಿಗೆ ಇಡೀ ದೇಶವೇ ಬಳಲಿ ಬೆಂಡಾಗಿ ಹೋಗಿದೆ. ಫ್ರೀಡೌನ್ ಕೊಟ್ಮೇಲಂತೂ ಕ್ರೂರಿ ಕೇಕೆ ಹಾಕ್ತಿದ್ದು ಕೇಂದ್ರ ಸರ್ಕಾರ ಹೊಸ ಗೈಡ್ಲೈನ್ಸ್ ಜಾರಿ ಮಾಡಿದೆ. ಇತ್ತ ಪ್ರಧಾನಿ ಮೋದಿ ಜೂನ್ 17ಕ್ಕೆ ಕರ್ನಾಟ ಸೇರಿ ಹಲವು ರಾಜ್ಯಗಳ ಸಿಎಂಗಳ ಜೊತೆ ಸಂವಾದ ನಡೆಸಲಿದ್ದು ದೇಶವನ್ನ ಮತ್ತೆ ಲಾಕ್ ಮಾಡ್ತಾರಾ. ಇಲ್ಲ ಹೊಸದೇನಾದ್ರೂ ಟಿಪ್ಸ್ ಕೊಡ್ತಾರೆ ಅನ್ನೋದು ಕೂತೂಹಲ ಮೂಡಿಸಿದೆ.
Published On - 6:38 am, Sat, 13 June 20