ಕಾಮಗಾರಿ ವೇಳೆ ಹಾವಿಗೆ ಗಾಯ: ರಕ್ಷಣೆ-ಶುಶ್ರೂಷಣೆ ನಂತ್ರ ಸೀದಾ ಅಂತರಗಂಗೆ ಬೆಟ್ಟಕ್ಕೆ..

ಕೋಲಾರ: ಕೇರಳದಲ್ಲಿ ಸಿಡಿಮದ್ದು ತುಂಬಿದ್ದ ಆಹಾರ ನೀಡಿ ಗರ್ಭಿಣಿ ಆನೆಯನ್ನ ಕೊಂದ ಘಟನೆ ಮನುಕುಲವನ್ನೇ ಕಲುಕಿತ್ತು. ಆದ್ರೆ ಆ ಘಟನೆಗೆ ತದ್ವಿರುದ್ಧವಾದ ಘಟನೆ ಕೋಲಾರದಲ್ಲಿ ನಡೆಿದಿದೆ. ಗಾಯಗೊಂಡು ನರಳಾಡುತ್ತಿದ್ದ ನಾಗರಹಾವಿನ ರಕ್ಷಣೆ ಮಾಡಿ ಸ್ಥಳೀಯರು ಮಾನವೀಯತೆ ಮೆರೆದಿದ್ದಾರೆ. ಕೋಲಾರ ನಗರದ ಕಠಾರಿಪಾಳ್ಯ ಬಡಾವಣೆಯಲ್ಲಿ ನಾಗರಕುಂಟೆ ಕಲ್ಯಾಣಿಯ ಪುನಃಶ್ಚೇತನ ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ನೆಲ ಅಗೆಯುವಾಗ, ಮಣ್ಣಿನಲ್ಲಿದ್ದ ನಾಗರಹಾವಿಗೆ ಗಡಾರಿಯಿಂದ ಬಲವಾದ ಪೆಟ್ಟು ಬಿದ್ದಿದೆ. ಗಾಯಗೊಂಡ ನಾಗರಹಾವಿನ ನರಳಾಟ ಕಂಡ ಸ್ಥಳೀಯರು, ಕೋಲಾರದ ಸ್ನೇಕ್ ರವಿಗೆ ವಿಷಯ […]

ಕಾಮಗಾರಿ ವೇಳೆ ಹಾವಿಗೆ ಗಾಯ: ರಕ್ಷಣೆ-ಶುಶ್ರೂಷಣೆ ನಂತ್ರ ಸೀದಾ ಅಂತರಗಂಗೆ ಬೆಟ್ಟಕ್ಕೆ..
Follow us
ಸಾಧು ಶ್ರೀನಾಥ್​
|

Updated on:Jun 12, 2020 | 5:15 PM

ಕೋಲಾರ: ಕೇರಳದಲ್ಲಿ ಸಿಡಿಮದ್ದು ತುಂಬಿದ್ದ ಆಹಾರ ನೀಡಿ ಗರ್ಭಿಣಿ ಆನೆಯನ್ನ ಕೊಂದ ಘಟನೆ ಮನುಕುಲವನ್ನೇ ಕಲುಕಿತ್ತು. ಆದ್ರೆ ಆ ಘಟನೆಗೆ ತದ್ವಿರುದ್ಧವಾದ ಘಟನೆ ಕೋಲಾರದಲ್ಲಿ ನಡೆಿದಿದೆ. ಗಾಯಗೊಂಡು ನರಳಾಡುತ್ತಿದ್ದ ನಾಗರಹಾವಿನ ರಕ್ಷಣೆ ಮಾಡಿ ಸ್ಥಳೀಯರು ಮಾನವೀಯತೆ ಮೆರೆದಿದ್ದಾರೆ.

ಕೋಲಾರ ನಗರದ ಕಠಾರಿಪಾಳ್ಯ ಬಡಾವಣೆಯಲ್ಲಿ ನಾಗರಕುಂಟೆ ಕಲ್ಯಾಣಿಯ ಪುನಃಶ್ಚೇತನ ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ನೆಲ ಅಗೆಯುವಾಗ, ಮಣ್ಣಿನಲ್ಲಿದ್ದ ನಾಗರಹಾವಿಗೆ ಗಡಾರಿಯಿಂದ ಬಲವಾದ ಪೆಟ್ಟು ಬಿದ್ದಿದೆ. ಗಾಯಗೊಂಡ ನಾಗರಹಾವಿನ ನರಳಾಟ ಕಂಡ ಸ್ಥಳೀಯರು, ಕೋಲಾರದ ಸ್ನೇಕ್ ರವಿಗೆ ವಿಷಯ ತಿಳಿಸಿದ್ದಾರೆ.

ಚೇತರಿಕೆಯಾಗುತ್ತಿದ್ದಂತೆ ಹಾವು ಅಂತರಗಂಗೆ ಬೆಟ್ಟಕ್ಕೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸ್ನೇಕ್ ರವಿ, ಗಾಯಗೊಂಡಿದ್ದ ನಾಗರಹಾವನ್ನು ಪಶು ಆಸ್ಪತ್ರೆಗೆ ಕೊಂಡೊಯ್ದು ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ. ಪೆಟ್ಟು ಬಿದ್ದ ಹಾವಿನ ಹೊಟ್ಟೆಗೆ ಪಶು ವೈದ್ಯರಿಂದ ಸ್ಟಿಚ‌ಸ್​ ಹಾಕಿಸಿ, ತಮ್ಮ ಮನೆಗೇ ಕೊಂಡೊಯ್ದು ಪೋಷಣೆ ಮಾಡಿದ್ದಾರೆ.

ಚೇತರಿಸಿಕೊಂಡ ನಂತರ ಹಾವನ್ನು ಅಂತರಗಂಗೆ ಬೆಟ್ಟ ಪ್ರದೇಶದಲ್ಲಿ ಬಿಟ್ಟು ಮಾನವೀಯತೆ ಮೆರೆದಿದ್ದಾರೆ. ಸ್ನೇಕ್ ರವಿಯ ಈ ಕಾರ್ಯಕ್ಕೆ ಪ್ರಾಣಿ ಪ್ರಿಯರು ಮತ್ತು ಸ್ಥಳೀಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Published On - 5:10 pm, Fri, 12 June 20

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ