IPL-2021 ಭಾರತದಲ್ಲಿ ನಡೆಯೋದೇನೋ ಪಕ್ಕಾ: ಆದರೂ, ಪ್ರೇಕ್ಷಕರಿಗೊಂದು ಬ್ಯಾಡ್​ನ್ಯೂಸ್​!

ಮುಂದಿನ ದಿನಗಳಲ್ಲಿ ಕೊರೊನಾ ಸಂಖ್ಯೆ ಮತ್ತೂ ಕಡಿಮೆ ಆಗುವ ನಿರೀಕ್ಷೆ ಇದೆ. ಈ ವೇಳೆ ಭಾರತದಲ್ಲೇ ಐಪಿಎಲ್​ ನಡೆಸೋದು ಸೇಫ್​ ಅನ್ನೋದು ಬಿಸಿಸಿಐ ಅಭಿಪ್ರಾಯ. 

IPL-2021 ಭಾರತದಲ್ಲಿ ನಡೆಯೋದೇನೋ ಪಕ್ಕಾ: ಆದರೂ, ಪ್ರೇಕ್ಷಕರಿಗೊಂದು ಬ್ಯಾಡ್​ನ್ಯೂಸ್​!
ಪ್ರಾತಿನಿಧಿಕ ಚಿತ್ರ
Edited By:

Updated on: Jan 31, 2021 | 5:10 PM

ಕೊರೊನಾ ಸೋಂಕಿನ ಕಾರಣದಿಂದ 2020ರ ಐಪಿಎಲ್​ ಯುಎಇನಲ್ಲಿ ನಡೆದಿತ್ತು. ಆದರೆ, ಈ ಬಾರಿಯ ಐಪಿಎಲ್​ ಭಾರತದಲ್ಲೇ ನಡೆಯಲಿದೆಯಂತೆ! ಆದಾಗ್ಯೂ ಪ್ರೇಕ್ಷಕರಿಗೆ ಒಂದು ಕಹಿ ಸುದ್ದಿ ಇದೆ. ಅದೇನು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

ಐಪಿಎಲ್​ ಭಾರತದಲ್ಲೇ ನಡೆಯುವ ಬಗ್ಗೆ ಬಿಸಿಸಿಐ ಖಜಾಂಚಿ ಅರುಣ್​ ಸಿಂಗ್​ ಮಾತನಾಡಿದ್ದಾರೆ. ಈ ಬಾರಿಯ ಐಪಿಎಲ್​ನ್ನು ನಾವು ಭಾರತದಲ್ಲೇ ನಡೆಸುತ್ತಿದ್ದೇವೆ. ನಾವು ಬೇರೆ ಯಾವುದೇ ಆಯ್ಕೆಯನ್ನು ಇಟ್ಟುಕೊಂಡಿಲ್ಲ. ಕೊರೊನಾ ವಿಚಾರಕ್ಕೆ ಬಂದರೆ ದುಬೈಗಿಂತ ಭಾರತವೇ ಹೆಚ್ಚು ಸುರಕ್ಷಿತವಾಗಿದೆ. ಪರಿಸ್ಥಿತಿ ಹಿಗೆಯೇ ಮುಂದುವರಿಯುತ್ತದೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ ಅವರು.

ಕೊರೊನಾ ವೈರಸ್​ ಪ್ರಕರಣದಲ್ಲಿ ದೇಶದಲ್ಲಿ ಭಾರೀ ಇಳಿಕೆ ಕಂಡಿದೆ. ಈ ಮೊದಲು 80 ಸಾವಿರ ಪ್ರಕರಣಗಳು ನಿತ್ಯ ದೃಢವಾಗುತ್ತಿದ್ದವು. ಆದರೆ, ಈಗ ಈ ಸಂಖ್ಯೆ 14 ಸಾವಿರಕ್ಕೆ ಇಳಿಕೆ ಆಗಿದೆ. ಮುಂದಿನ ದಿನಗಳಲ್ಲಿ ಕೊರೊನಾ ಸಂಖ್ಯೆ ಮತ್ತೂ ಕಡಿಮೆ ಆಗುವ ನಿರೀಕ್ಷೆ ಇದೆ. ಈ ವೇಳೆ ಭಾರತದಲ್ಲೇ ಐಪಿಎಲ್​ ನಡೆಸೋದು ಸೇಫ್​ ಅನ್ನೋದು ಬಿಸಿಸಿಐ ಅಭಿಪ್ರಾಯ.

ಐಪಿಎಲ್​ ಭಾರತದಲ್ಲೇ ನಡೆದರೂ ಮೈದಾನದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡುವ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರವಾಗಿಲ್ಲ. ಮುಂಬರುವ ಇಂಗ್ಲೆಂಡ್​ ಟಿ-20 ಪಂದ್ಯಕ್ಕೆ ಶೇ.50 ಪ್ರೇಕ್ಷಕರಿಗೆ ಅವಕಾಶ ನೀಡೋಕೆ ಬಿಸಿಸಿಐ ಚಿಂತನೆ ನಡೆಸಿದೆ. ಆದರೆ, ಈ ವಿಚಾರದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಬಿಸಿಸಿಐ ಹೇಳಿದೆ. ಐಪಿಎಲ್​ನಲ್ಲೂ ಪ್ರೇಕ್ಷಕರಿಗೆ ಬರೋಕೆ ಅವಕಾಶ ನೀಡಿದರೂ, ಈ ನಿಟ್ಟಿನಲ್ಲಿ ಸರ್ಕಾರವೇ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಒಂದೊಮ್ಮೆ ಪ್ರೇಕ್ಷಕರಿಗೆ ಅವಕಾಶ ನೀಡೋಕೆ ಸರ್ಕಾರ ನಿರಾಕರಿಸಿದರೆ ಕ್ರಿಕೆಟ್​ ಪ್ರೇಮಿಗಳಿಗೆ ಭಾರೀ ನಿರಾಸೆ ಉಂಟಾಗಲಿದೆ.

IPL 2021: ಐಪಿಎಲ್​ಗಾಗಿ RCB ಉಳಿಸಿಕೊಂಡ ಹಾಗೂ ಕೈಬಿಟ್ಟ ಆಟಗಾರರ ಲಿಸ್ಟ್​ ಇಲ್ಲಿದೆ..