ಬೆಂಗಳೂರು: ಕೊವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಶೇಷಾದ್ರಿಪುರದ ಅಪೋಲೊ ಆಸ್ಪತ್ರೆಯು ನಿಗದಿತ ದರಕ್ಕಿಂತ ಅಧಿಕವಾಗಿ ಬಿಲ್ ನೀಡುತ್ತಿದೆ ಎಂದು ಟಿವಿ9 ವರದಿ ಮಾಡಿತ್ತು.
ಇದನ್ನೂ ಓದಿ: ಸರ್ಕಾರಿ ಆದೇಶಕ್ಕೆ ಡೋಂಟ್ ಕೇರ್, ಸೋಂಕಿತನ ಕೈಗೆ 5 ಲಕ್ಷ ಬಿಲ್ ಇಟ್ಟ Apollo
ಇದಕ್ಕೆ ಸ್ಪಂದಿಸಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಬೆಂಗಳೂರಿನ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾಗ್ತಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಅನೇಕ ಬಾರಿ ಆ ಆಸ್ಪತ್ರೆಗೆ ವಾರ್ನ್ ಮಾಡಿದ್ದೇನೆ. ಆದರೂ ಇಂದು ಕೊರೊನಾ ರೋಗಿಗೆ 5 ಲಕ್ಷ ಬಿಲ್ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿ ಆಘಾತವಾಯಿತು ಎಂದು ಟ್ವೀಟ್ ಮಾಡಿದ್ದರು.
ಜೊತೆಗೆ, ಸರ್ಕಾರದ ಆದೇಶವನ್ನು ಸಂಪೂರ್ಣವಾಗಿ ಗಾಳಿಗೆ ತೂರುತ್ತಿರುವ ಆಸ್ಪತ್ರೆಯ ಆಡಳಿತ ಮಂಡಳಿ, ನಿಗದಿ ಮಾಡಿರುವ ದರಕ್ಕಿಂತಲೂ ಹೆಚ್ಚು ಹಣ ಪಡೆದಿದೆ. ಈ ವಿಷಯ ನನ್ನ ಗಮನಕ್ಕೆ ಬಂದಿದ್ದುಇಂದು ಆ ಖಾಸಗಿ ಆಸ್ಪತ್ರೆಯ ವಿರುದ್ಧ ಮುಲಾಜಿಲ್ಲದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೀವಿ ಎಂದು ಸಹ ಹೇಳಿದ್ದರು.
ಇದೀಗ, ಸಚಿವರ ಟ್ವೀಟ್ನ ಸಮರ್ಥನೆ ಮಾಡಿರುವ IPS ಅಧಿಕಾರಿ ಡಿ.ರೂಪಾ ಕೂಡ ಇದಕ್ಕೆ ಸಂಬಂಧಿಸಿ ಟ್ವೀಟ್ ಮಾಡಿದ್ದಾರೆ. ನಗರದಲ್ಲಿ ಕೊವಿಡ್ ನಿರ್ವಹಣೆಗಾಗಿ ನೇಮಕವಾಗಿರುವ ಅಧಿಕಾರಿಗಳ ತಂಡಕ್ಕೆ ಸೇರಿರುವ ರೂಪಾ ಅವರು, ಸಾರ್ ನನಗೆ ಹಾಗೂ ಐಎಎಸ್ ಹರ್ಷ ಗುಪ್ತಾ ಅವರಿಗೆ ಎಲ್ಲಾ ಆಸ್ಪತ್ರೆಗಳ ಮೇಲೆ ಈ ಜವಾಬ್ದಾರಿ ಕೊಟ್ಟರೆ, ಈಗಾಗಲೇ ಕೆಲವು ಆಸ್ಪತ್ರೆಗಳಲ್ಲಿ ವ್ಯವಸ್ಥೆ ಸರಿಪಡಿಸಿದಂತೆ ಇದನ್ನೂ ನಿಭಾಯಿಸುತ್ತೇವೆ. Disaster management ಕಾಯ್ದೆ ಅಡಿ, ಸರ್ಕಾರ ದರ ನಿಗದಿಪಡಿಸಿದ ಆದೇಶದ ಉಲ್ಲಂಘನೆಯಾಗಿಎ ಎಂದು ಕೋರ್ಟ್ ಅನುಮತಿ ಪಡೆದು ಸಂಜ್ಞೆಯ ಅಪರಾಧದಂತೆ ತನಿಖೆ ಮಾಡಬಹುದು ಎಂದು ಟ್ವೀಟ್ ಮಾಡಿದ್ದಾರೆ.
ಸಾರ್,ನನಗೆ ಹಾಗೂ ಹರ್ಷಗುಪ್ತ ಐಎಎಸ್ ಅವರಿಗೆ ಎಲ್ಲಾ ಆಸ್ಪತ್ರೆಗಳ ಮೇಲೆ ಈ ಜವಾಬ್ದಾರಿ ಕೊಟ್ಟರೆ,ಈಗಾಗಲೇ ಕೆಲವು ಆಸ್ಪತ್ರೆಗಳಲ್ಲಿ ವ್ಯವಸ್ಥೆ ಸರಿಪಡಿಸಿದಂತೆ ಇದನ್ನೂ ನಿಭಾಯಿಸುತ್ತೇವೆ. Disaster management ಕಾಯ್ದೆ ಅಡಿ,ಸರ್ಕಾರ ದರ ನಿಗದಿಪಡಿಸಿದ ಆದೇಶದ ಉಲ್ಲಂಘನೆ ಕೋರ್ಟ್ ಅನುಮತಿ ಪಡೆದು ಸಂಜ್ಞೆಯ ಅಪರಾಧದಂತೆ ತನಿಖೆ ಮಾಡಬಹುದು. https://t.co/p0pZLJk5DH
— D Roopa IPS (@D_Roopa_IPS) July 29, 2020
Published On - 6:28 pm, Wed, 29 July 20