Shivamogga Blast ಗಣಿ ಸ್ಫೋಟ ಪ್ರಕರಣಕ್ಕೆ ಸಿಕ್ಕಿದೆ ಬಿಗ್ ಟ್ವಿಸ್ಟ್.. ಎಸ್ಕೇಪ್ ಆಗಿದ್ದಾನಾ ಸ್ಫೋಟ ಪ್ರಕರಣದ ಕಿಂಗ್​ಪಿನ್?

ಶಿವಮೊಗ್ಗದ ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ನಟೋರಿಯಸ್ ಎಸ್ಕೇಪ್ ಆಗಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಹೀಗಾಗಿ ಭದ್ರಾವತಿ ನಿವಾಸಿ ಕರಿಗೌಡ ಎಂಬುವವನ ಮೇಲೆ ಪೊಲೀಸರಿಗೆ ಅನುಮಾನ ಶುರುವಾಗಿದೆ. ಪ್ರವೀಣ್ ಎಂಬುವವನ ಮೂಲಕ ಕರಿಗೌಡ ಸ್ಫೋಟಕ ಸಪ್ಲೈ ಮಾಡ್ತಿದ್ದ ಎಂಬ ಶಂಕೆ ವ್ಯಕ್ತವಾಗಿದೆ.

Shivamogga Blast ಗಣಿ ಸ್ಫೋಟ ಪ್ರಕರಣಕ್ಕೆ ಸಿಕ್ಕಿದೆ ಬಿಗ್ ಟ್ವಿಸ್ಟ್.. ಎಸ್ಕೇಪ್ ಆಗಿದ್ದಾನಾ ಸ್ಫೋಟ ಪ್ರಕರಣದ ಕಿಂಗ್​ಪಿನ್?
ಜಿಲೆಟಿನ್ ಸ್ಫೋಟಗೊಂಡ ಸ್ಥಳ

Updated on: Jan 25, 2021 | 8:39 AM

ಶಿವಮೊಗ್ಗ: ಜಿಲ್ಲೆಯ ಗಣಿ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸ್ಫೋಟ ಪ್ರಕರಣದ ಕಿಂಗ್​ಪಿನ್ ಎಸ್ಕೇಪ್ ಆಗಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಆ ಒಬ್ಬ ವ್ಯಕ್ತಿ ಸಿಕ್ಕರೆ ಎಲ್ಲವೂ ಬಯಲಾಗಲಿದೆ. ಸದ್ಯ ಎಸ್ಕೇಪ್ ಆಗಿರುವ ಕಿಂಗ್​ಪಿನ್​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಶಿವಮೊಗ್ಗದ ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ನಟೋರಿಯಸ್ ಎಸ್ಕೇಪ್ ಆಗಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಹೀಗಾಗಿ ಭದ್ರಾವತಿ ನಿವಾಸಿ ಕರಿಗೌಡ ಎಂಬುವವನ ಮೇಲೆ ಪೊಲೀಸರಿಗೆ ಅನುಮಾನ ಶುರುವಾಗಿದೆ. ಪ್ರವೀಣ್ ಎಂಬುವವನ ಮೂಲಕ ಕರಿಗೌಡ ಸ್ಫೋಟಕ ಸಪ್ಲೈ ಮಾಡ್ತಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಭದ್ರಾವತಿಯಲ್ಲಿ ಅಕ್ರಮವಾಗಿ ಸ್ಫೋಟಕ ಸಂಗ್ರಹಿಸಿ ಬಳಿಕ ಅಲ್ಲಿಂದ ಸಪ್ಲೈ ಮಾಡಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ. ಆದರೆ ಈ ಬಗ್ಗೆ ಇನ್ನು ಸ್ಪಷ್ಟ ಆಧಾರಗಳು ಸಿಕ್ಕಿಲ್ಲ. ಕರಿಗೌಡ ನಾಪತ್ತೆಯಾಗಿದ್ದು ಆತ ಎಲ್ಲಿದ್ದಾನೆ ಎಂಬ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ ಕರಿಗೌಡ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇನ್ನು ವ್ಯವಹಾರದ ಸಂಬಂಧ ಹಿನ್ನೆಲೆಯಲ್ಲಿ ಕರಿಗೌಡ, ಪ್ರವೀಣ್​ಗೆ ₹2 ಲಕ್ಷ ಹಣ ನೀಡಿದ್ದನಂತೆ. ಅಲ್ಲದೆ ಸ್ಫೋಟ ಸಂಭವಿಸಿದ ಜಾಗದಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿದ್ದವು. ಸ್ಫೋಟದ ತೀವ್ರತೆಗೆ 2000 ಮುಖಬೆಲೆ ನೋಟುಗಳು ಚೆಲ್ಲಾಪಿಲ್ಲಿಯಾಗಿದ್ದವು. ಹೀಗಾಗಿ ಪ್ರವೀಣ್ ಸ್ಫೋಟಗೊಂಡ ಲಾರಿಯಲಗಲಿದ್ದನಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಜೊತೆಗೆ ಲಾರಿಯಲ್ಲಿದ್ದ ಶಶಿ ಎಂಬುವವನು ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡಿದ್ದು ಎಸ್ಕೇಪ್ ಆಗಿದ್ದಾನೆ ಎಂದು ಹೇಳಲಾಗುತ್ತಿದೆ. ಸ್ಫೋಟಕ್ಕೂ ಕೆಲ ಕ್ಷಣಗಳ ಹಿಂದೆ ಶಶಿ ಹೊರಗೆ ಹೋಗಿದ್ದನಂತೆ. ಅಲ್ಲದೆ ಶಶಿ ಜತೆಗಿದ್ದ ನಾಗರಾಜ್, ಪುನೀತ್ ಸುಳಿವು ಸಹ ಇನ್ನೂ ಸಿಕ್ಕಿಲ್ಲ.

Shivamogga Blast ಘಟನೆಯಲ್ಲಿ 6 ಮಂದಿ ಸಾವು, 6ನೇ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಹರಸಾಹಸ