ಸಂಸತ್ತಿನಲ್ಲಿ ಅನಗತ್ಯ ದೊಂಬಿಯೆಬ್ಬಿಸುವ ಸಂಸದರಿಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ: ಪ್ರಧಾನ ಮಂತ್ರಿ ನರೇಂದ್ರ ಮೋದಿ

|

Updated on: Jan 31, 2024 | 12:54 PM

ಮಹಿಳಾ ಮೀಸಲಾತಿ ಮಸೂದೆಯನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿಯವರು, ಜನವರಿ 26 ರಂದು ಸಹ ಮಹಿಳಾ ಸಬಲೀಕರಣದ ಪ್ರದರ್ಶನವನ್ನು ಭಾರತೀಯರು ವೀಕ್ಷಿಸಿದರು. ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತನ್ನು ಉದ್ದೇಶಿಸಿ ಮಾತಾಡಲಿದ್ದಾರೆ ಮತ್ತು ನಾಳೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ ಎಂದ ಪ್ರಧಾನಿ ಮೋದಿ, ಇದು ನಾರಿ ಶಕ್ತಿಯ ಉತ್ಸವ ಅಂತ ಹೇಳಿದರು.

ದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ (Budget Session of Parliament) ಇಂದಿನಿಂದ ಆರಂಭಗೊಂಡಿದ್ದು, ಕಾರ್ಯಕಲಾಪಗಳು ಶುರುವಾಗುವ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಮಾಧ್ಯಮಗಳ ಜೊತೆ ಮಾತಾಡಿದರು. ಸಂಸತ್ತಿನಲ್ಲಿ ಅಧಿವೇಶನ ನಡೆಯುವಾಗ ವಿನಾಕಾರಣ ದೊಂಬಿ ಸೃಷ್ಟಿಸುವ (unruly scenes) ಸದಸ್ಯರ ವರ್ತನೆಯನ್ನು ಪ್ರಧಾನಿ ಮೋದಿ ತೀವ್ರವಾಗಿ ಖಂಡಿಸಿದರು. ಕಳೆದ 10 ವರ್ಷಗಳ ಅವಧಿಯಲ್ಲಿ ಸಂಸತ್ ಸದಸ್ಯರು ಪಾರ್ಲಿಮೆಂಟ್ ಗೆ ಯೋಗ್ಯವಾದ ರೀತಿಯಲ್ಲಿ ವರ್ತಿಸಿದ್ದಾರೆ ಎಂದ ಪ್ರಧಾನಿ ಮೋದಿ, ಆದರೆ ಪದೇಪದೆ ತಪ್ಪೆಸಗುವುದನ್ನು ಅಭ್ಯಾಸ ಮಾಡಿಕೊಂಡಿರುವ ಸಂಸದರು ಪ್ರಜಾಪ್ರಭುತ್ವದ ಚಾರಿತ್ರ್ಯಹರಣ ಮಾಡಿರುವುದರಿಂದ ಈ ಕೊನೆಯ ಅಧಿವೇಶನದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು. ತಮ್ಮ ಕ್ಷೇತ್ರಗಳಿಗೆ ಹೋಗಿ ಅಲ್ಲಿನ ಜನರಿಗೆ ತಮ್ಮ ನೆನಪಿದೆಯಾ ಅಂತ ಕೇಳುವ ಕೆಲಸವನ್ನು ಸಹ ಅವರು ಮಾಡಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

ಮಹಿಳಾ ಮೀಸಲಾತಿ ಮಸೂದೆಯನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿಯವರು, ಜನವರಿ 26 ರಂದು ಸಹ ಮಹಿಳಾ ಸಬಲೀಕರಣದ ಪ್ರದರ್ಶನವನ್ನು ಭಾರತೀಯರು ವೀಕ್ಷಿಸಿದರು. ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತನ್ನು ಉದ್ದೇಶಿಸಿ ಮಾತಾಡಲಿದ್ದಾರೆ ಮತ್ತು ನಾಳೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ ಎಂದ ಪ್ರಧಾನಿ ಮೋದಿ, ಇದು ನಾರಿ ಶಕ್ತಿಯ ಉತ್ಸವ ಅಂತ ಹೇಳಿದರು.

ಅಧಿವೇಶನ ನಡೆಯುವಾಗ ಕೇವಲ ವಿರೋಧಿಸುವ ಕಾರಣಕ್ಕಾಗಿ ವಿರೋಧಿಸುವ ಸಂಸದರನ್ನು ಯಾರೂ ನೆನಪಿಟ್ಟುಕೊಳ್ಳಲ್ಲ, ಆದರೆ ಟೀಕೆಗೆ ಕಟು ಪದಗಳನ್ನು ಬಳಸಿಯೂ ಚರ್ಚೆಯಲ್ಲಿ ಸಕಾರಾತ್ಮಕವಾಗಿ ಭಾಗಿಯಾಗುವವರನ್ನು ಯಾರೂ ಮರೆಯಲ್ಲ ಎಂದು ಮೋದಿ ಹೇಳಿದರು. ಇಲ್ಲಿಯವರೆಗೆ ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪ ಪಡುವ ಅವಕಾಶವಿದು, ಈ ಕೊನೆಯ ಅಧಿವೇಶನವ ವ್ಯರ್ಥ ಹೋಗಗೊಡುವುದು ಬೇಡ ಅಂತ ಜೊತೆ ಸಂಸದರನ್ನು ಆಗ್ರಹಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:51 pm, Wed, 31 January 24

Follow us on