21 ನಾಯಕರನ್ನೊಳಗೊಂಡ ಜೆಡಿಎಸ್ ಕೋರ್ ಕಮಿಟಿ ರಚನೆ, ಜಿಟಿ ದೇವೇಗೌಡ ಅಧ್ಯಕ್ಷ

| Updated By: ರಮೇಶ್ ಬಿ. ಜವಳಗೇರಾ

Updated on: Aug 18, 2023 | 3:19 PM

ಜೆಡಿಎಸ್‌ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗಾಗಿ 21 ನಾಯಕರನ್ನೊಳಗೊಂಡ ನೂತನ ಕೋರ್‌ ಕಮಿಟಿ ರಚನೆ ಮಾಡಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಅಧ್ಯಕ್ಷರಾಗಿದ್ದು, ವೈಎಸ್​ವಿ ದತ್ತಾ ಸಂಚಾಲಕರಾಗಿದ್ದಾರೆ. ಹಾಗಾದ್ರೆ, ಕಮಿಟಿಯ ಸದಸ್ಯರು ಯಾರ್ಯಾರು ಎನ್ನುವ ಪಟ್ಟಿ ಈ ಕೆಳಗಿನಂತಿದೆ ನೋಡಿ.

21 ನಾಯಕರನ್ನೊಳಗೊಂಡ ಜೆಡಿಎಸ್ ಕೋರ್ ಕಮಿಟಿ ರಚನೆ, ಜಿಟಿ ದೇವೇಗೌಡ ಅಧ್ಯಕ್ಷ
ಜೆಡಿಎಸ್​ ಕೋರ್​ ಕಮಿಟಿ
Follow us on

ಬೆಂಗಳೂರು, (ಆಗಸ್ಟ್ 18): ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಮುಗ್ಗರಿಸಿರುವ ಜೆಡಿಎಸ್​ ಇದೀಗ ಮುಂಬರುವ ಲೋಕಸಭಾ ಚುನಾವಣೆ ಹಾಗೂ ಸ್ಥಳೀಯ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ತಯಾರಿ ನಡೆಸಿದೆ. ಹೀಗಾಗಿ ಪಕ್ಷವನ್ನು ಬಲಪಡಿಸಲು ಇಂದು ಜೆಡಿಎಸ್​ ಕೋರ್ ಕಮಿಟಿ(jds core committee) ರಚನೆ ಮಾಡಲಾಗಿದೆ. ಒಟ್ಟು 21 ಜೆಡಿಎಸ್ (JDS) ನಾಯಕರನ್ನೊಳಗೊಂಡ ಕೋರ್ ಕಮಿಟಿಗೆ ಚಾಮುಂಡೇಶ್ವರಿ ಶಾಸಕ ಜಿಟಿ ದೇವೇಗೌಡ ಅವರು ಜೆಡಿಎಸ್​ ಕೋರ್​ ಕಮಿಟಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಜೆಡಿಎಸ್​​ ಕೋರ್​ ಕಮಿಟಿ ಸಂಚಾಲಕರಾಗಿ ವೈಎಸ್​​ವಿ ದತ್ತಾ ಆಯ್ಕೆಯಾಗಿದ್ದಾರೆ. ಇನ್ನು ಸಾ.ರಾ.ಮಹೇಶ್, ಬಂಡೆಪ್ಪ ಕಾಶಂಪುರ, ಹೆಚ್.ಕೆ‌‌.ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡ, ಸಿ.ಎಸ್.ಪುಟ್ಟರಾಜು, ಸುರೇಶ್ ಗೌಡ, ಆಲ್ಕೋಡ್ ಹನುಮಂತಪ್ಪ, ಬಿ‌.ಎಂ.ಫಾರೂಕ್, ರಾಜುಗೌಡ, ನೇಮಿರಾಜ್ ನಾಯ್ಕ್, ಎಂ.ಕೃಷ್ಣರೆಡ್ಡಿ, ದೊಡ್ಡಪ್ಪಗೌಡ S.ಪಾಟೀಲ್, ಕೆ.ಎಂ.ತಿಮ್ಮರಾಯಪ್ಪ, ವೀರಭದ್ರಪ್ಪ ಹಾಲರವಿ, ಪ್ರಸನ್ನ ಕುಮಾರ್, ಸುನಿತಾ ಚೌಹಾಣ್​​, ಸಿ.ವಿ.ಚಂದ್ರಶೇಖರ್, ಸುಧಾಕರ್ ಶೆಟ್ಟಿ, ಸೂರಜ್ ಸೋನಿ ನಾಯಕ್ JDS ಕೋರ್ ಕಮಿಟಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: ಮುಂದಿನ ರಾಜಕೀಯ ಭವಿಷ್ಯದಿಂದ ಯಾವುದೇ ಮೈತ್ರಿಕೂಟ ಸೇರದಿರಲು ಜೆಡಿಎಸ್​ ನಿರ್ಧಾರ

ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿಸಿದಷ್ಟು ಸ್ಥಾನಗಳಲ್ಲಿ ಗೆಲ್ಲಲು ಜೆಡಿಎಸ್​ ವಿಫಲವಾಗಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ​ ಹಾಗೂ ಕಾಂಗ್ರೆಸ್​ನಷ್ಟು ಸೀಟು ಗೆಲ್ಲದಿದ್ದರೂ ಪರವಾಗಿಲ್ಲ. ಕನಿಷ್ಠ ಪಕ್ಷ ಅತಂತ್ರವಾಗಿ ಕಿಂಗ್ ಮೇಕರ್​ ಸ್ಥಾನದಲ್ಲಿ ಕೂಡಬೇಕೆನ್ನುವ ಕನಸ್ಸು ಜೆಡಿಎಸ್​ ಕಂಡಿತ್ತು. ಆದ್ರೆ, ಲೆಕ್ಕಾಚಾರ ಬದಲಾಗಿದ್ದು, ಕಾಂಗ್ರೆಸ್​ ಬಹುಮತದೊಂದಿಗೆ ಅಧಿಕಾರಿಕ್ಕೇರಿದೆ. ಇದರಿಂದ ಜೆಡಿಎಸ್ ಕನಸು ನುಚ್ಚುನೂರಾಗಿದೆ.

ಈ ಮೊದಲು ಬಿಜೆಪಿ ಜೊತೆ ಮೈತ್ರಿಗೆ (JDS-BJP Alliance) ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚೆಗಳು ನಡೆದಿದ್ದವು. ಸ್ವತಃ ಕುಮಾರಸ್ವಾಮಿ ಸಹ ಬಿಜೆಪಿಯೊಂದಿಗೆ ಸ್ನೇಹ ಬೆಳೆಸಲು ಉತ್ಸುಕರಾಗಿದ್ದರು. ಆದ್ರೆ, ಪಕ್ಷದ ಶಾಸಕರಿಂದ ಅಪಸ್ವರ ವ್ಯಕ್ತವಾಗಿದ್ದರಿಂದ ಸದ್ಯಕ್ಕೆ ಬಿಜೆಪಿಯೊಂದಿಗಿನ ಮೈತ್ರಿಯಿಂದ ಹಿಂದೆ ಸರಿದಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ