ಕಾಫಿನಾಡಲ್ಲಿ ಕೊರೊನಾ ಸಂಕಷ್ಟಕ್ಕೆ ‘ನಾಟಿ’ ಮದ್ದು!

| Updated By:

Updated on: Jul 24, 2020 | 3:07 PM

ಚಿಕ್ಕಮಗಳೂರು: ಇಷ್ಟು ದಿನ ನೆಮ್ಮದಿಯಿಂದ ಇದ್ದ ಕಾಫಿನಾಡಿನ ಜನರಿಗೆ ಇದೀಗ ಕೊರೊನಾ ಹೆಮ್ಮಾರಿಯ ಬಿಸಿ ತಟ್ಟಲು ಶುರುವಾಗಿದೆ. ಈ ನಡುವೆ ಜಿಲ್ಲೆಯಿಂದ ನೌಕರಿ ಅರಸಿ ಸಿಲಿಕಾನ್​ ಸಿಟಿ ಸೇರಿದ್ದ ಯುವಕರು ಇದೀಗ ಸೋಂಕಿನ ಭೀತಿಯಿಂದ ತಮ್ಮತಮ್ಮ ಗ್ರಾಮಗಳಗೆ ಮರಳಿದ್ದರು. ಇದಲ್ಲದೆ, ದೇಶಾದ್ಯಂತ ಘೋಷಿಸಲಾದ ಲಾಕ್​ಡೌನ್​ ತಂದೊಡ್ಡಿದ ಸಂಕಷ್ಟಗಳಿಂದ ಜಿಲ್ಲೆಯ ರೈತರು ಸಹ ಬೇಸತ್ತು ಹೋಗಿದ್ದರು. ಜೆಡಿಎಸ್ ಯುವ ಕಾರ್ಯಕರ್ತರ ವಿನೂತನ ಪ್ರಯತ್ನ ಹೀಗಾಗಿ, ಇವರಿಬ್ಬರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಜಿಲ್ಲೆಯ ಯುವ ಜೆಡಿಎಸ್ ಕಾರ್ಯಕರ್ತರು ಮುಂದಾದರು. ಆದ್ದರಿಂದ, ಇಂದು […]

ಕಾಫಿನಾಡಲ್ಲಿ ಕೊರೊನಾ ಸಂಕಷ್ಟಕ್ಕೆ ‘ನಾಟಿ’ ಮದ್ದು!
Follow us on

ಚಿಕ್ಕಮಗಳೂರು: ಇಷ್ಟು ದಿನ ನೆಮ್ಮದಿಯಿಂದ ಇದ್ದ ಕಾಫಿನಾಡಿನ ಜನರಿಗೆ ಇದೀಗ ಕೊರೊನಾ ಹೆಮ್ಮಾರಿಯ ಬಿಸಿ ತಟ್ಟಲು ಶುರುವಾಗಿದೆ. ಈ ನಡುವೆ ಜಿಲ್ಲೆಯಿಂದ ನೌಕರಿ ಅರಸಿ ಸಿಲಿಕಾನ್​ ಸಿಟಿ ಸೇರಿದ್ದ ಯುವಕರು ಇದೀಗ ಸೋಂಕಿನ ಭೀತಿಯಿಂದ ತಮ್ಮತಮ್ಮ ಗ್ರಾಮಗಳಗೆ ಮರಳಿದ್ದರು. ಇದಲ್ಲದೆ, ದೇಶಾದ್ಯಂತ ಘೋಷಿಸಲಾದ ಲಾಕ್​ಡೌನ್​ ತಂದೊಡ್ಡಿದ ಸಂಕಷ್ಟಗಳಿಂದ ಜಿಲ್ಲೆಯ ರೈತರು ಸಹ ಬೇಸತ್ತು ಹೋಗಿದ್ದರು.

ಜೆಡಿಎಸ್ ಯುವ ಕಾರ್ಯಕರ್ತರ ವಿನೂತನ ಪ್ರಯತ್ನ
ಹೀಗಾಗಿ, ಇವರಿಬ್ಬರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಜಿಲ್ಲೆಯ ಯುವ ಜೆಡಿಎಸ್ ಕಾರ್ಯಕರ್ತರು ಮುಂದಾದರು. ಆದ್ದರಿಂದ, ಇಂದು ಜೆಡಿಎಸ್ ಕಾರ್ಯಕರ್ತರು ಯುವಕರು ಮತ್ತು ರೈತ ಮಹಿಳೆಯರೊಂದಿಗೆ ಸೇರಿ ಭತ್ತ ನಾಟಿ ಮಾಡುವ ಕಾರ್ಯಕ್ರಮವನ್ನ ಆಯೋಜಿಸಿದ್ದರು.

ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ವಿನಯ್ ರಾಜ್ ನೇತೃತ್ವದಲ್ಲಿ ಮೂಡಿಗೆರೆ ತಾಲೂಕಿನ ಪುರ ಗ್ರಾಮದಲ್ಲಿ ಈ ವಿಶೇಷ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಜೀವನೋಪಾಯದ ದಾರಿ ಕಳೆದುಕೊಂಡು ಊರು ಸೇರಿದ್ದ ಯುವಕರಿಗೆ ಹಾಗೂ ಲಾಕ್​ಡೌನ್​ನಿಂದ ನಷ್ಟ ಅನುಭವಿಸಿದ್ದ ರೈತರಿಗೆ ಸ್ಫೂರ್ತಿ ನೀಡಲು ಇದರ ಆಯೋಜನೆ ಮಾಡಲಾಗಿತ್ತು.

ಹಾಗಾಗಿ, ಸೋಂಕಿನ ಭೀತಿಗೆ ಸೆಡ್ಡು ಹೊಡೆದು ಹತ್ತಾರು ಯುವಕರು ಕಾರ್ಯಕರ್ತರೊಂದಿಗೆ ಸೇರಿ ಆನಂದದಿಂದ ಹಾಡುತ್ತಾ ಹುಮ್ಮಸ್ಸಿನಿಂದ ನಾಟಿ ಕೆಲಸದಲ್ಲಿ ಪಾಲ್ಗೊಂಡರು. ಪಕ್ಷದ ಯುವ ಕಾರ್ಯಕರ್ತರಿಗೆ ಮಾಜಿ ಸಚಿವ ಬಿ.ಬಿ ನಿಂಗಯ್ಯ, ಜಿಲ್ಲಾಧ್ಯಕ್ಷ ಹೊಲದಗದ್ದೆ ಗಿರೀಶ್ ಸೇರಿದಂತೆ ಇತರೆ ಸ್ಥಳೀಯರು ಸಾಥ್​ ನೀಡಿದರು.

Published On - 7:33 pm, Wed, 22 July 20