ಕೊರೊನಾ ಭೀತಿಯ ನಡುವೆಯೂ ಬರ್ತ್​ ಡೇ ಆಚರಿಸಿದ ಭೀಮಾತೀರದ Don!

ವಿಜಯಪುರ: ಜಿಲ್ಲೆಯಲ್ಲಿ ಸೋಂಕಿನ ಭೀತಿ ಹೆಚ್ಚುತ್ತಲೇ ಇದೆ. ಈ ನಡುವೆ ಜಿಲ್ಲೆಯ ಚಡಚಣ ತಾಲೂಕಿನ ಕೆರೂರು ಗ್ರಾಮದಲ್ಲಿ ಭೀಮಾತೀರದ ಡಾನ್ ಎಂದೇ ಹೆಸರು ಮಾಡಿರುವ ಮಹಾದೇವ ಭೈರಗೊಂಡ ಅದ್ಧೂರಿಯಾಗಿ ತನ್ನ ಜನ್ಮದಿನಾಚರಣೆ ಆಚರಿಸಿಕೊಂಡಿದ್ದಾನೆ. ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಬೆಂಬಲಿಗರ ಜೊತೆ ಹುಟ್ಟುಹಬ್ಬವನ್ನ ಮಹಾದೇವ ಭೈರಗೊಂಡ ಆಚರಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಭೈರಗೊಂಡಗೆ ಹೂವಿನ ಅಭಿಷೇಕ ಮಾಡಿದ ಆತನ ಬೆಂಬಲಿಗರು ಸಂಭ್ರಮದ ಗುಂಗಲ್ಲಿ ಮಾಸ್ಕ್​ ಧರಿಸೋದು ಮತ್ತು ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳೋದನ್ನೇ ಮರೆತರು. ಮಹಾದೇವ ಭೈರಗೊಂಡ ಧರ್ಮರಾಜ್​ ಚಡಚಣ ನಕಲಿ‌ […]

ಕೊರೊನಾ ಭೀತಿಯ ನಡುವೆಯೂ ಬರ್ತ್​ ಡೇ ಆಚರಿಸಿದ ಭೀಮಾತೀರದ Don!
Follow us
KUSHAL V
| Updated By:

Updated on:Jul 24, 2020 | 2:56 PM

ವಿಜಯಪುರ: ಜಿಲ್ಲೆಯಲ್ಲಿ ಸೋಂಕಿನ ಭೀತಿ ಹೆಚ್ಚುತ್ತಲೇ ಇದೆ. ಈ ನಡುವೆ ಜಿಲ್ಲೆಯ ಚಡಚಣ ತಾಲೂಕಿನ ಕೆರೂರು ಗ್ರಾಮದಲ್ಲಿ ಭೀಮಾತೀರದ ಡಾನ್ ಎಂದೇ ಹೆಸರು ಮಾಡಿರುವ ಮಹಾದೇವ ಭೈರಗೊಂಡ ಅದ್ಧೂರಿಯಾಗಿ ತನ್ನ ಜನ್ಮದಿನಾಚರಣೆ ಆಚರಿಸಿಕೊಂಡಿದ್ದಾನೆ.

ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಬೆಂಬಲಿಗರ ಜೊತೆ ಹುಟ್ಟುಹಬ್ಬವನ್ನ ಮಹಾದೇವ ಭೈರಗೊಂಡ ಆಚರಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಭೈರಗೊಂಡಗೆ ಹೂವಿನ ಅಭಿಷೇಕ ಮಾಡಿದ ಆತನ ಬೆಂಬಲಿಗರು ಸಂಭ್ರಮದ ಗುಂಗಲ್ಲಿ ಮಾಸ್ಕ್​ ಧರಿಸೋದು ಮತ್ತು ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳೋದನ್ನೇ ಮರೆತರು.

ಮಹಾದೇವ ಭೈರಗೊಂಡ ಧರ್ಮರಾಜ್​ ಚಡಚಣ ನಕಲಿ‌ ಪೊಲೀಸ್ ಎನ್ಕೌಂಟರ್ ಹಾಗೂ ಗಂಗಾಧರ ಚಡಚಣ ನಿಗೂಢ ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿರುವುದಾಗಿ ತಿಳಿದುಬಂದಿದೆ.

Published On - 5:36 pm, Wed, 22 July 20