ವೃದ್ಧಾಪ್ಯ ವೇತನದಲ್ಲಿ ಗೋಲ್​ಮಾಲ್​; ಸಾರ್ವಜನಿಕವಾಗಿ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಶಾಸಕ

ನಾಗಮಂಗಲ ತಾಲೂಕಿನ ಜಯಮ್ಮ ಎಂಬ ವೃದ್ಧೆಗೆ ನೀಡಬೇಕಾಗಿದ್ದ ವೃದ್ಧಾಪ್ಯ ವೇತನದ ಹಣವನ್ನು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಂಡವಪುರದ ಜಯಮ್ಮ ಎಂಬುವರ ಖಾತೆಗೆ ಜಮಾ ಮಾಡಿದ್ದರು. ಈ ಮೂಲಕ ಸಿಬ್ಬಂದಿ ಹಣ ಹೊಡೆದಿದ್ದರು.

ವೃದ್ಧಾಪ್ಯ ವೇತನದಲ್ಲಿ ಗೋಲ್​ಮಾಲ್​; ಸಾರ್ವಜನಿಕವಾಗಿ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಶಾಸಕ
ಅಧಿಕಾರಿ, ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡ ಶಾಸಕ
Edited By:

Updated on: Nov 26, 2020 | 1:39 PM

ಮಂಡ್ಯ: ವೃದ್ಧಾಪ್ಯ ವೇತನದಲ್ಲಿ ಗೋಲ್​ಮಾಲ್​ ಮಾಡಿದ್ದ ಸಿಬ್ಬಂದಿಗೆ ಶಾಸಕ ಸುರೇಶ್​ ಗೌಡ ಸಾರ್ವಜನಿಕ ಸಭೆಯಲ್ಲಿ ಹಿಗ್ಗಾಮುಗ್ಗಾ ಬೈದಿದ್ದಾರೆ. ಯಾರಿಗೂ ಸೇರಬೇಕಾದ ಹಣವನ್ನು ನಕಲಿ ದಾಖಲೆ ಸೃಷ್ಟಿಸಿ ಇನ್ನೋರ್ವರಿಗೆ ಮಂಜೂರು ಮಾಡಿದ ವಿಷಯ ತಿಳಿದ ಜೆಡಿಎಸ್​ ಶಾಸಕ ಸುರೇಶ್​ ಗೌಡ, ಬಡವರ ಹಣ ತಿಂದು, ನಮಗ್ಯಾಕೆ ಕೆಟ್ಟ ಹೆಸರು ತರುತ್ತೀರಿ ಎಂದು ಕೂಗಾಡಿದ್ದಾರೆ.

ಅದಲುಬದಲು ಮಾಡಿದ್ದ ಅಧಿಕಾರಿಗಳು
ನಾಗಮಂಗಲ ತಾಲೂಕಿನ ಜಯಮ್ಮ ಎಂಬ ವೃದ್ಧೆಗೆ ನೀಡಬೇಕಾಗಿದ್ದ ವೃದ್ಧಾಪ್ಯ ವೇತನದ ಹಣವನ್ನು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಂಡವಪುರದ ಜಯಮ್ಮ ಎಂಬುವರ ಖಾತೆಗೆ ಜಮಾ ಮಾಡಿದ್ದರು. ಈ ಮೂಲಕ ಸಿಬ್ಬಂದಿ ಹಣ ಹೊಡೆದಿದ್ದರು. ವಿಚಾರ ಬಯಲಾಗುತ್ತಿದ್ದಂತೆ ನಾಗಮಂಗಲದ ಜಯಮ್ಮನವರಿಗೆ 20 ಸಾವಿರ ರೂ. ಹಣ ಹಿಂದಿರುಗಿಸಲಾಗಿತ್ತು. ಅದನ್ನು ತಿಳಿದ ಶಾಸಕರು ಸಭೆಯಲ್ಲಿ ಅಧಿಕಾರಿ ಜಯಶ್ರೀ ಹಾಗೂ ಸಿಬ್ಬಂದಿ ವಿರುದ್ಧ ಕೂಗಾಡಿದ್ದಾರೆ.

ನಿಮಗೆ ಸರ್ಕಾರ ಸಂಬಳ ಕೊಡೋದಿಲ್ವಾ? ನಾವು ನಿಮ್ಮ ಬಳಿ ಯಾವತ್ತಾದರೂ ಏನಾದರೂ ಕೇಳಿದ್ದೀವಾ? ನಿಮ್ಮ ಅಕ್ರಮಗಳೆಲ್ಲ ನನಗೆ ಗೊತ್ತಿವೆ. ನೀನು ಹೆಣ್ಣುಮಗಳು ಎಂದು ಸುಮ್ಮನಿದ್ದೇನೆ. ಇಲ್ಲದಿದ್ದರೆ ಸಸ್ಪೆಂಡ್ ಮಾಡುತ್ತಿದ್ದೆ ಎಂದು ಅಧಿಕಾರಿ ಜಯಶ್ರೀಗೆ ಬೈದಿದ್ದಾರೆ.

Published On - 1:35 pm, Thu, 26 November 20