
ಬೀದರ್: ಅದು ಐತಿಹಾಸಿಕ ದೇಗುಲ. ವರ್ಷದ ಹನ್ನೆರಡು ತಿಂಗಳು ಆ ದೇಗುಲದ ಗುಹೆಯಲ್ಲಿ ನೀರು ತುಂಬಿ ತುಳುಕುತ್ತಾ ಇತ್ತು. ನೀರಿದ್ರಷ್ಟೇ ಆ ದೇಗುಲದ ಒಳಗೆ ಹೋಗಿ ಭಕ್ತರು ದರ್ಶನ ಪಡೆಯಬಹುದು. ಆದ್ರೆ ಈಗ ದೇಗುಲಕ್ಕೆ ಜಲಕಂಟಕ ಎದುರಾಗಿದೆ.
ಐತಿಹಾಸಿಕ ಉಗ್ರನರಸಿಂಹ ದೇವಸ್ಥಾನ. ಬೀದರ್ ಜಿಲ್ಲೆಯಲ್ಲಿರುವ ಈ ಐತಿಹಾಸಿಕ ದೇಗುಲ ಸುಮಾರು 1200ವರ್ಷಗಳಷ್ಟು ಹಳೆಯದಾದ ಪುರಾತನ ದೇವಸ್ಥಾನ.
ದೇವಸ್ಥಾನದ ಸುತ್ತಮುತ್ತ ಅನಧಿಕೃತವಾಗಿ ಮನೆಗಳು ತಲೆ ಎತ್ತಿವೆ. ಕಾನೂನು ಬಾಹಿರವಾಗಿ ನೂರಾರು ಬೋರ್‌ವೆಲ್, ಬಾವಿಗಳನ್ನ ತೋಡಲಾಗಿದೆ. ಪರಿಣಾಮ ದೇವಾಲಯದ ಗುಹೆಗೆ ಬರುತ್ತಿದ್ದ ನೀರು ನಿಂತಿದೆಯಂತೆ. ಜಿಲ್ಲಾಡಳಿತ ಎಚ್ಚೆತ್ತು ನೀರು ಬಾರದಿರುವುದಕ್ಕೆ ಕಾರಣ ಹುಡುಕಿ ಸಮೀಪದಿಂದ ದೇವರ ದರ್ಶನ ಪಡೆಯಲು ಅವಕಾಶ ಮಾಡಿಕೊಡಬೇಕು ಅಂತ ಭಕ್ತರು ಬೇಡಿಕೊಂಡಿದ್ದಾರೆ.
ಇಂತಹ ಐತಿಹಾಸಿಕ ದೇಗುಲ ಪ್ರವೇಶಕ್ಕೆ ಅವಕಾಶ ಸಿಗುತ್ತಿಲ್ಲ ಅನ್ನೋ ಕೊರಗು ಭಕ್ತರನ್ನ ಕಾಡುತ್ತಿದೆ. ಹಾಗಾಗಿ ಸಹಸ್ರಾರು ವರ್ಷ ಬತ್ತದ ನೀರಿನ ಸೆಲೆಯನ್ನ ಜಿಲ್ಲಾಡಳಿತ ಅಭಿವೃದ್ಧಿ ಮಾಡುವ ಮನಸ್ಸು ಮಾಡಲಿ ಅನ್ನೋದು ಭಕ್ತರ ಆಶಯವಾಗಿದೆ.