Kabza Song: ಕಬ್ಜ ಹಾಡು ಬಿಡುಗಡೆಗೆ ಕ್ಷಣಗಣನೆ, ವೇದಿಕೆ ಸಿದ್ಧತೆ ಹೀಗಿದೆ ನೋಡಿ

|

Updated on: Feb 26, 2023 | 3:29 PM

ಆರ್ ಚಂದ್ರು ನಿರ್ದೇಶಿಸಿ, ಉಪೇಂದ್ರ ನಟಿಸಿರುವ ಕಬ್ಜ ಸಿನಿಮಾದ ಹಾಡು ಇಂದು ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟದ್ಲಿ ಬಿಡುಗಡೆ ಆಗುತ್ತಿದ್ದು, ಕಾರ್ಯಕ್ರಮದ ಸಿದ್ಧತೆಯ ವಿಡಿಯೋ ಇಲ್ಲಿದೆ.

ಕನ್ನಡ ಚಲನಚಿತ್ರ (Sandalwood) ರಂಗದಲ್ಲಿ ಬಹು ನಿರೀಕ್ಷೆ ಮೂಡಿಸಿರುವ ಆರ್ ಚಂದ್ರು (R Chandru) ನಿರ್ದೇಶಿಸಿ ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗೂ ಕಿಚ್ಚ ಸುದೀಪ್ ನಟನೆಯ ಕಬ್ಜ ಚಲನಚಿತ್ರದ ಆಡಿಯೋ ಲಾಂಚ್ ಇಂದು ಸಂಜೆ ಚಿಕ್ಕಬಳ್ಳಾಫುರ ಜಿಲ್ಲೆ ಪಟ್ಟಣದಲ್ಲಿ ನಡೆಯಲಿದೆ. ಶಿಡ್ಲಘಟ್ಟ ಪಟ್ಟಣದ ಜ್ಯೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಅದ್ದೂರಿ ವೇದಿಕೆ ನಿರ್ಮಾಣ ಕಾರ್ಯ ಜೋರಾಗಿ ನಡೆದಿದ್ದು ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಬಾಗಿಯಾಗುವ ನಿರೀಕ್ಷೆ ಇದೆ. ಸಿನಿಮಾದ ಕನ್ನಡ ಹಾಡನ್ನು ಶಿವರಾಜ್ ಕುಮಾರ್ ಲಾಂಚ್ ಮಾಡಿದರೆ,  ತೆಲುಗು ಹಾಡನ್ನು ಸಚಿವ ಕೆ ಸುಧಾಕರ್, ತಮಿಳು ಹಾಡನ್ನು ಎಂಟಿಬಿ ನಗರಾಜ್, ಮಲಯಾಳಂ ಹಾಡನ್ನು ಹೆಚ್ ಎಂ ರೇವಣ್ಣ, ಹಿಂದಿ ಹಾಡನ್ನು ಆನಂದ್ ಪಂಡೀತ್ ಬಿಡುಗಡೆ ಮಾಡಲಿದ್ದಾರೆ.