Oscar Moments: ಆಸ್ಕರ್​ನ ಅಚ್ಛಳಿಯದ ಆ ಐದು ಘಟನೆಗಳು

ಇದೇ ಮಾರ್ಚ್ 12 ರಂದು 95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಲಾಸ್ ಎಂಜಲ್ಸ್​ನ ಡಾಲ್ಬಿ ಥೀಯೇಟರ್​ನಲ್ಲಿ ನಡೆಯಲಿದೆ. ವಿಶ್ವ ಸಿನಿಮಾ ಪ್ರೇಮಿಗಳು ಎದುರು ನೋಡುವ ಈ ವರ್ಣರಂಜಿತ ಕಾರ್ಯಕ್ರಮ ಪ್ರಾರಂಭವಾಗಿ 95 ವರ್ಷಗಳಾಗಿದ್ದು ಈವರೆಗೆ ಹಲವು ಅವಿಸ್ಮರಣೀಯ ನೆನಪುಗಳನ್ನು ನೀಡಿದೆ. ಅವುಗಳಲ್ಲಿ ಅತಿ ಮುಖ್ಯವಾದ ಐದು ಘಟನೆಗಳ ಮೆಲುಕು ಇಲ್ಲಿದೆ.

Oscar Moments: ಆಸ್ಕರ್​ನ ಅಚ್ಛಳಿಯದ ಆ ಐದು ಘಟನೆಗಳು
ಆಸ್ಕರ್
Follow us
ಮಂಜುನಾಥ ಸಿ.
|

Updated on: Feb 27, 2023 | 1:43 PM

ಇದೇ ಮಾರ್ಚ್ 12 ರಂದು 95ನೇ ಆಸ್ಕರ್ (Oscar) ಪ್ರಶಸ್ತಿ ಪ್ರದಾನ ಸಮಾರಂಭ ಲಾಸ್ ಎಂಜಲ್ಸ್​ನ ಡಾಲ್ಬಿ ಥೀಯೇಟರ್​ನಲ್ಲಿ ನಡೆಯಲಿದೆ. ವಿಶ್ವ ಸಿನಿಮಾ ಪ್ರೇಮಿಗಳು ಎದುರು ನೋಡುವ ಈ ವರ್ಣರಂಜಿತ ಕಾರ್ಯಕ್ರಮ ಪ್ರಾರಂಭವಾಗಿ 95 ವರ್ಷಗಳಾಗಿದ್ದು ಈವರೆಗೆ ಹಲವು ಅವಿಸ್ಮರಣೀಯ ನೆನಪುಗಳನ್ನು ನೀಡಿದೆ. ಅವುಗಳಲ್ಲಿ ಅತಿ ಮುಖ್ಯವಾದ ಐದು ಘಟನೆಗಳ ಮೆಲುಕು ಇಲ್ಲಿದೆ.

ಆಸ್ಕರ್ ಪಡೆದ ಮೊದಲ ಕಪ್ಪು ವರ್ಣಿಯ ನಟ

ಆಸ್ಕರ್​ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ವಿಶೇಷ ಪ್ರಾಧಾನ್ಯತೆ ಇದೆ. ಆದರೆ ಆಸ್ಕರ್ ಪ್ರಾರಂಭವಾಗಿ 35 ವರ್ಷಗಳ ಕಾಳ ಒಬ್ಬೇ ಒಬ್ಬ ಕಪ್ಪು ವರ್ಣಿಯ ನಟ ಈ ಪ್ರಶಸ್ತಿಗೆ ಪಾತ್ರವಾಗಿರಲಿಲ್ಲ. 1963 ರಲ್ಲಿ ಮೊದಲ ಬಾರಿಗೆ ಲಿಲ್ಲೀಸ್ ಆಫ್ ದಿ ಫೀಲ್ಡ್ ಸಿನಿಮಾಕ್ಕಾಗಿ ಕಪ್ಪು ವರ್ಣಿಯ ನಟ ಸಿಡ್ನಿ ಪಿಯೋಟಿಯರ್ ಈ ಪ್ರಶಸ್ತಿ ಪಡೆದರು. ಪ್ರಶಸ್ತಿ ಸ್ವೀಕರಿಸಿ ಭಾವುಕರಾದರು. ಆಸ್ಕರ್ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ಘಟನೆ.

ದಶಕಗಳ ಕಾಲ ಕಾದ ಮಾರ್ಟಿನ್ ಸ್ಕೋರ್ಸೆಸ್

ವಿಶ್ವ ಸಿನಿಮಾದ ಅತ್ಯುತ್ತಮ ಸಿನಿಮಾ ನಿರ್ದೇಶಕರುಗಳ ಸಾಲಿನಲ್ಲಿ ಮೊದಲಿಗೆ ಕೇಳಿ ಬರುವ ಹೆಸೆರು ಮಾರ್ಟಿನ್ ಸ್ಕೊರ್ಸೆಸ್. 1967 ರಿಂದಲೂ ಸಿನಿಮಾ ನಿರ್ದೇಶನ ಮಾಡುತ್ತ ಹಲವು ಅತ್ಯುತ್ತಮ ಸಿನಿಮಾಗಳನ್ನು ನೀಡಿದ್ದರೂ ಮಾರ್ಟಿನ್​ಗೆ ಆಸ್ಕರ್ ಬಂದಿದ್ದು ಬಹಳ ತಡವಾಗಿ 2007 ರಲ್ಲಿ ದಿ ಡಿಪಾರ್ಟೆಡ್ ಸಿನಿಮಾಕ್ಕಾಗಿ. ಅದಕ್ಕೂ ಮುನ್ನ ಅವರ ಆರು ಸಿನಿಮಾಗಳು ಅತ್ಯುತ್ತಮ ಸಿನಿಮಾ ಹಾಗೂ ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ಏಳು ಬಾರಿ ನಾಮಿನೇಟ್ ಆಗಿದ್ದವು. ಕೊನೆಗೂ ಮಾರ್ಟಿನ್​ಗೆ ಪ್ರಶಸ್ತಿ ಬಂದಿದ್ದು ಆಸ್ಕರ್​ನ ಐತಿಹಾಸಿಕ ಘಟನೆಗಳಲ್ಲಿ ಒಂದು.

ಆಸ್ಕರ್ ನಿರಾಕರಿಸಿದ ಗಾಡ್ ಫಾದರ್

ಮಾರ್ಲೆನ್ ಬ್ರಾಂಡೊ ವಿಶ್ವದ ಅತ್ಯುತ್ತಮ ನಟರಲ್ಲೊಬ್ಬರು. 1954 ರಲ್ಲಿಯೇ ಆಸ್ಕರ್ ಪಡೆದಿದ್ದ ಬ್ರಾಂಡೊಗೆ, ಗಾಡ್ ಫಾದರ್ ಸಿನಿಮಾದ ಡಾನ್ ಕ್ಯಾರ್ಲಿಯೋನೆ ಪಾತ್ರಕ್ಕಾಗಿ 1972ರಲ್ಲಿ ಆಸ್ಕರ್ ನೀಡಲಾಯಿತು. ಆದರೆ ಅದನ್ನು ಸ್ವೀಕರಿಸಲು ನಿರಾಕರಿಸಿದರು ಬ್ರ್ಯಾಂಡೊ. ಅವರ ಪರವಾಗಿ ಆಸ್ಕರ್ ವೇದಿಕೆ ಏರಿ ಪ್ರಶಸ್ತಿ ನಿರಾಕರಿಸಿದ ಮೂಲ ಅಮೆರಿಕ ಸಮುದಾಯದ ನಟಿ ಲಿಟಲ್​ಫೆದರ್, ಸಿನಿಮಾ ಹಾಗೂ ಟಿವಿ ರಂಗದಲ್ಲಿ ಮೂಲ ಅಮೆರಿಕನ್ನರನ್ನು ನಡೆಸಿಕೊಳ್ಳುವ ರೀತಿಗೆ ವಿರೋಧ ವ್ಯಕ್ತಪಡಿಸಿ ಪ್ರಶಸ್ತಿ ನಿರಾಕರಿಸುತ್ತಿರುವುದಾಗಿ ಹೇಳಿದರು. ವೇದಿಕೆ ಇಳಿದಾಗಲೂ ಅವರನ್ನು ಹೀಗಳೆಯಲಾಗಿತ್ತು. ಅಂದಿನ ಘಟನೆಗೆ ನಟಿ ಲಿಟಲ್​ಫೆದರ್​ಗೆ ಕಳೆದವರ್ಷವಷ್ಟೆ (2022) ಆಸ್ಕರ್ ಆಯೋಕರು ಕ್ಷಮೆ ಕೇಳಿದರು.

ತಪ್ಪು ಸಿನಿಮಾ ಹೆಸರು ಹೇಳಿದ ಅತಿಥಿ

ಆಸ್ಕರ್​ನಲ್ಲಿ ಕಟ್ಟ ಕಡೆಯಲ್ಲಿ ಕೊಡಲಾಗುವ ಪ್ರಶಸ್ತಿ ಅತ್ಯುತ್ತಮ ಸಿನಿಮಾ ವಿಭಾಗಕ್ಕೆ. ಇದು ಅತ್ಯಂತ ಪ್ರಮುಖ ಪ್ರಶಸ್ತಿಯೆಂಬ ಕಾರಣಕ್ಕೆ ಈ ವ್ಯವಸ್ಥೆ. 2017 ರಲ್ಲಿ ನಡೆದ ಆಸ್ಕರ್​ ನಲ್ಲಿ ಅದಾಗಲೇ ಲಾ ಲಾ ಲ್ಯಾಂಡ್ ಸಿನಿಮಾ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಆಸ್ಕರ್​ ಇತಿಹಾಸದಲ್ಲಿಯೇ ಅತಿ ಹೆಚ್ಚು ನಾಮಿನೇಶನ್ ಗಳಿಸಿದ ಸಿನಿಮಾ ಎಂಬ ಖ್ಯಾತಿಗೂ ಭಾಜನವಾಗಿತ್ತು. ಸಮಾರಂಭದ ಅಂತ್ಯದಲ್ಲಿ ವಾರೆನ್ ಬೆಟ್ಟಿ ಪ್ರಶಸ್ತಿ ಘೋಷಿಸಲು ವೇದಿಕೆ ಮೇಲೆ ಬಂದು ತಮಗೆ ನೀಡಲಾಗಿದ್ದ ಕವರ್ ತೆರೆದರು. ಆದರೆ ಅವರೇಕೋ ಗೊಂದಲದಲ್ಲಿದ್ದಂತೆ ಕಂಡು ಬಂತು. ಪಕ್ಕದಲ್ಲಿದ್ದ ಮತ್ತೊಬ್ಬ ಅತಿಥಿ ಫೇಯಿ ಡುನಾವೆ ಘೋಷಿಸುವಂತೆ ಹೇಳಿದರು. ಅಳುಕಿನಿಂದಲೇ ಅವರು ಲಾ ಲಾ ಲ್ಯಾಂಡ್​ ಅತ್ಯುತ್ತಮ ಸಿನಿಮಾ ಎಂದರು. ಸಿನಿಮಾ ತಂಡ ವೇದಿಕೆ ಏರಿ ಖುಷಿ ವ್ಯಕ್ತಪಡಿಸಿದರು. ನಿರ್ದೇಶಕರು ಭಾಷಣವನ್ನೂ ಮಾಡಿದರು. ಮಧ್ಯದಲ್ಲಿಯೇ ಅವರ ಭಾಷಣ ತಡೆದ ಆಯೋಜಕರು ತಪ್ಪಾಗಿದೆ, ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿರುವುದು ಮೂನ್​ಲೈಟ್ ಸಿನಿಮಾ ಎಂದು ಘೋಷಿಸಿದರು. ಲಾ ಲಾ ಲ್ಯಾಂಡ್​ನವರು ನಿರಾಸೆಯಿಂದ ವೇದಿಕೆ ಇಳಿದರೆ ಮೂನ್​ಲೈಟ್ ತಂಡ ತೀವ್ರ ಅಚ್ಚರಿಯಲ್ಲಿ ವೇದಿಕೆ ಏರಿ ಸಂಭ್ರಮಿಸಿತು.

ವೇದಿಕೆ ಮೇಲೆ ಹಲ್ಲೆ

ಕಳೆದ ವರ್ಷವಷ್ಟೆ ನಡೆದ ಆಸ್ಕರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಯಾರೂ ಊಹಿಸದ ಘಟನೆ ನಡೆಯಿತು. ವೇದಿಕೆ ಮೇಲೆ ಮಾತನಾಡುತ್ತಿದ್ದ ಕಮಿಡಿಯನ್ ಕ್ರಿಸ್ ರಾಕ್​ ಮೇಲೆ ನಟ ವಿಲ್ ಸ್ಮಿತ್ ಹಲ್ಲೆ ಮಾಡಿದರು. ವಿಲ್​ ಸ್ಮಿತ್​ರ ಪತ್ನಿಯ ಬಗ್ಗೆ ಕ್ರಿಸ್ ರಾಕ್ ಜೋಕ್ ಮಾಡಿದ್ದಕ್ಕೆ ಸಿಟ್ಟಾಗಿ ವಿಲ್ ಸ್ಮಿತ್ ಹಲ್ಲೆ ಮಾಡಿದರು. ಅದೇ ವೇದಿಕೆಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಸ್ವೀಕರಿಸಿದರು. ಆ ನಂತರ ಕ್ರಿಸ್ ರಾಕ್​ಗೆ ಕ್ಷಮೆ ಕೇಳಿದರು. ಆದರೆ ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್