AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oscars 2023: 95ನೇ ಆಸ್ಕರ್ ಅವಾರ್ಡ್ಸ್ ಕಾರ್ಯಕ್ರಮದ ಲೈವ್​ನ ಉಚಿತವಾಗಿ ನೋಡೋದು ಹೇಗೆ?  

2023ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಮಾರ್ಚ್​ 12ರಂದು ಲಾಸ್ ಏಂಜಲೀಸ್​ನ ಡಾಲ್ಬಿ ಥಿಯೇಟರ್​ನಲ್ಲಿ ನಡೆಯಲಿದೆ. ಅಮೆರಿಕದ ಕಾಲಮಾನ ರಾತ್ರಿ 8 ಗಂಟೆಗೆ ಕಾರ್ಯಕ್ರಮ ಆರಂಭ ಆಗಲಿದೆ.

Oscars 2023: 95ನೇ ಆಸ್ಕರ್ ಅವಾರ್ಡ್ಸ್ ಕಾರ್ಯಕ್ರಮದ ಲೈವ್​ನ ಉಚಿತವಾಗಿ ನೋಡೋದು ಹೇಗೆ?  
ಆಸ್ಕರ್​ ಅವಾರ್ಡ್ಸ್​
ರಾಜೇಶ್ ದುಗ್ಗುಮನೆ
|

Updated on:Feb 27, 2023 | 10:38 AM

Share

95ನೇ ಆಸ್ಕರ್ ಅವಾರ್ಡ್ (Oscar Awards) ಕಾರ್ಯಕ್ರಮಕ್ಕೆ ದಿನಗಣನೆ ಆರಂಭ ಆಗಿದೆ. ಮಾರ್ಚ್​ 12ರಂದು ಲಾಸ್ ಏಂಜಲೀಸ್​ನಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರತಿವರ್ಷದಂತೆ ಈ ವರ್ಷವೂ ಅಕಾಡೆಮಿ ಪ್ರಶಸ್ತಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಹಾಲಿವುಡ್ (Hollywood) ಸೇರಿದಂತೆ ವಿವಿಧ ಚಿತ್ರರಂಗದ ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಹಾಜರಿ ಹಾಕಲಿದ್ದಾರೆ. ಈ ಕಾರ್ಯಕ್ರಮದ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಎಲ್ಲಿ, ಯಾವಾಗ?

2023ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಮಾರ್ಚ್​ 12ರಂದು ಲಾಸ್ ಏಂಜಲೀಸ್​ನ ಡಾಲ್ಬಿ ಥಿಯೇಟರ್​ನಲ್ಲಿ ನಡೆಯಲಿದೆ. ಅಮೆರಿಕದ ಕಾಲಮಾನ ರಾತ್ರಿ 8 ಗಂಟೆಗೆ ಕಾರ್ಯಕ್ರಮ ಆರಂಭ ಆಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಮಾರ್ಚ್​ 13ರ ಮುಂಜಾನೆ 5.30ಕ್ಕೆ ಕಾರ್ಯಕ್ರಮ ಪ್ರಾರಂಭ ಆಗಲಿದೆ.

ಆಸ್ಕರ್ ಕಾರ್ಯಕ್ರಮ ಎಲ್ಲಿ ಪ್ರಸಾರ ಕಾಣುತ್ತೆ?

ಆಸ್ಕರ್​ ಕಾರ್ಯಕ್ರಮವನ್ನು ವಿವಿಧ ಕಡೆಗಳಲ್ಲಿ ನೋಡುವ ಅವಕಾಶ ಇದೆ. ಹುಲು ಲೈವ್ ಟಿವಿನಲ್ಲಿ ಇದನ್ನು ವೀಕ್ಷಿಸಬಹುದು. ಯೂಟ್ಯೂಬ್ ಟಿವಿಯಲ್ಲೂ ನೀವು ಇದನ್ನು ಉಚಿತವಾಗಿ ವೀಕ್ಷಿಸಬಹುದು. ಎಟಿ ಆ್ಯಂಡ್ ಟಿ ಟಿವಿ ಹಾಗೂ ಫುಬೋ ಟಿವಿಯಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಇದೆ. ಎಬಿಸಿ ವೆಬ್​ಸೈಟ್​ನಲ್ಲಿ ಆಸ್ಕರ್ ಕಾರ್ಯಕ್ರಮ ಉಚಿತವಾಗಿ ವೀಕ್ಷಿಸಬಹುದು.

ಹೋಸ್ಟ್ ಮಾಡೋದು ಯಾರು?

ಪ್ರತಿ ವರ್ಷ ಆಸ್ಕರ್​ ಕಾರ್ಯಕ್ರಮ ಸಾಕಷ್ಟು ಅದ್ದೂರಿಯಾಗಿರುತ್ತದೆ. ಈ ಪ್ರತಿಷ್ಠಿತ ಕಾರ್ಯಕ್ರಮವನ್ನು ನಡೆಸಿಕೊಡೋಕೆ ಅನುಭವಿಗಳನ್ನೇ ಆಯ್ಕೆ ಮಾಡಲಾಗುತ್ತದೆ. ಈ ವರ್ಷ ಜಿಮ್ಮಿ ಕಿಮ್ಮೆಲ್ ಅವರು ಕಾರ್ಯಕ್ರಮವನ್ನು ಹೋಸ್ಟ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. 2018ರಿಂದ ಈಚೆಗೆ ಅವರು ಎರಡು ಬಾರಿ ಆಸ್ಕರ್ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಈ ಬಾರಿ ಭಾರತಕ್ಕೆ ವಿಶೇಷ ಏಕೆ?

‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ಬೆಸ್ಟ್​ ಒರಿಜಿನಲ್​ ಸಾಂಗ್​ ವಿಭಾಗದಲ್ಲಿ ನಾಮಿನೇಟ್​ ಆಗಿದೆ. ಭಾರತದ ‘ಆಲ್​ ದಟ್​ ಬ್ರೀಥ್ಸ್​’, ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಕಿರುಚಿತ್ರಗಳು ಕೂಡ ನಾಮಿನೇಟ್​ ಆಗಿದ್ದು, ಭಾರತಕ್ಕೆ ಈ ಬಾರಿ ಆಸ್ಕರ್​ ಗೆಲ್ಲುವ ಚಾನ್ಸ್​ ದಟ್ಟವಾಗಿದೆ. ಅಲಿಸನ್​ ವಿಲಿಯಮ್ಸ್​ ಮತ್ತು ರಿಝ್​ ಅಹ್ಮದ್​ ಅವರು ಈ ಬಾರಿಯ ಆಸ್ಕರ್​ ನಾಮಿನೇಷನ್​ ಲಿಸ್ಟ್​ ಪ್ರಕಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:13 am, Mon, 27 February 23

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?