Sai Pallavi: ಇಬ್ಬರು ಸ್ಟಾರ್ ನಟರ ಸಿನಿಮಾ ತಿರಸ್ಕರಿಸಿದ ಸಾಯಿ ಪಲ್ಲವಿ! ಇಂಥಹಾ ಅವಕಾಶ ಬಿಡುವುದುಂಟೆ?

Sai Pallavi: ಇಬ್ಬರು ಸ್ಟಾರ್ ನಟರ ಸಿನಿಮಾ ತಿರಸ್ಕರಿಸಿದ ಸಾಯಿ ಪಲ್ಲವಿ! ಇಂಥಹಾ ಅವಕಾಶ ಬಿಡುವುದುಂಟೆ?

Sai Pallavi: ಇಬ್ಬರು ಸ್ಟಾರ್ ನಟರ ಸಿನಿಮಾ ತಿರಸ್ಕರಿಸಿದ ಸಾಯಿ ಪಲ್ಲವಿ! ಇಂಥಹಾ ಅವಕಾಶ ಬಿಡುವುದುಂಟೆ?
ಸಾಯಿ ಪಲ್ಲವಿ
Follow us
ಮಂಜುನಾಥ ಸಿ.
|

Updated on: Feb 25, 2023 | 7:04 PM

ಕಳೆದ ತಿಂಗಳ ಸಂಕ್ರಾಂತಿ ಹಬ್ಬವನ್ನು ದಕ್ಷಿಣ ಭಾರತ ಚಿತ್ರರಂಗ ಜೋರಾಗಿಯೇ ಸಂಭ್ರಮಿಸಿತ್ತು. ಅದಕ್ಕೆ ಮುಖ್ಯ ಕಾರಣವೆಂದರೆ ದಕ್ಷಿಣ ಭಾರತದ ನಾಲ್ಕು ಸೂಪರ್ ಡೂಪರ್ ಸ್ಟಾರ್​ ನಟರ ಸಿನಿಮಾಗಳು ತೆರೆಗೆ ಬಂದವು. ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ (Chiranjeevi), ನಂದಮೂರಿ ಬಾಲಕೃಷ್ಣ ಎದುರು ಬದುರಾದರೆ, ತಮಿಳಿನಲ್ಲಿ ನಟ ವಿಜಯ್ (Vijay) ಹಾಗೂ ಅಜಿತ್ (Ajit) ಸಿನಿಮಾಗಳು ಎದುರು ಬದುರಾಗಿದ್ದವು. ತೆಲುಗಿನಲ್ಲಿ ಚಿರಂಜೀವಿ ಹಾಗೂ ಬಾಲಕೃಷ್ಣರ ಸಿನಿಮಾಗಳಿಗೆ ಶ್ರುತಿ ಹಾಸನ್ ಅವರೇ ನಾಯಕಿಯಾಗಿದ್ದು ವಿಶೇಷ. ಅದೇ ರೀತಿ ತಮಿಳಿನಲ್ಲಿ ಒಂದೇ ದಿನ ಬಿಡುಗಡೆ ಆದ ವಿಜಯ್-ಅಜಿತ್ ಸಿನಿಮಾಗಳಿಗೂ ಒಬ್ಬರೇ ನಾಯಕಿ ಆಗಬೇಕಿತ್ತು. ಆದರೆ ಈ ಸೂಪರ್ ಸ್ಟಾರ್​ಗಳ ಸಿನಿಮಾದಲ್ಲಿ ನಟಿಸಲು ನಾಯಕಿಯೊಬ್ಬರು ಒಪ್ಪಲಿಲ್ಲ. ಅವರೇ ನಟಿ ಸಾಯಿ ಪಲ್ಲವಿ (Sai Pallavi).

ಹೌದು, ಕೆಲವು ತೆಲುಗು ಮಾಧ್ಯಮಗಳ ವರದಿಯಂತೆ ವಿಜಯ್ ನಟಿಸಿದ್ದ ವಾರಿಸು ಸಿನಿಮಾದಲ್ಲಿ ನಟಿಸುವ ಅವಕಾಶ ಸಾಯಿ ಪಲ್ಲವಿಗೆ ನೀಡಲಾಗಿತ್ತಂತೆ ಆದರೆ ಅವರು ನಿರಾಕರಿಸಿದ್ದಾರೆ. ಮಾತ್ರವಲ್ಲ, ಅಜಿತ್ ಅವರ ವಲಿಮೈ ಸಿನಿಮಾದಲ್ಲಿ ನಟಿಸುವ ಅವಕಾಶವೂ ಸಾಯಿ ಪಲ್ಲವಿ ಅವರಿಗೇ ದೊರೆತಿತ್ತಂತೆ ಆದರೆ ಅದನ್ನೂ ನಿರಾಕರಿಸಿದರಂತೆ ಈ ಚೆಲುವೆ.

ವಿಜಯ್, ಅಜಿತ್ ಅಂಥಹಾ ಸ್ಟಾರ್ ನಟರೊಟ್ಟಿಗೆ ನಟಿಸುವ ಅವಕಾಶ ಸಿಕ್ಕರೆ ಸಾಕು ಎಂದು ಕಾಯುತ್ತಿರುವ ಹಲವು ನಟಿಯರಿದ್ದಾರೆ. ಅವರೊಟ್ಟಿಗೆ ಐಟಂ ಹಾಡಿನಲ್ಲಿ ಕಾಣಿಸಿಕೊಂಡರೂ ಸಾಕು ಎಂದುಕೊಳ್ಳುವ ನಟಿಯರೂ ಇದ್ದಾರೆ. ಹಾಗಿದ್ದರೂ ಸಹ ತಾನೇ ಅರಸಿ ಬಂದ ಅವಕಾಶವನ್ನು ನಿರಾಕರಿಸಿದ್ದಾರಂತೆ ನಟಿ ಸಾಯಿ ಪಲ್ಲವಿ.

ವಿಜಯ್ ಹಾಗೂ ಅಜಿತ್ ಜೊತೆ ನಟಿಸುವ ಅವಕಾಶ ನಿರಾಕರಿಸಿರುವುದಕ್ಕೆ ಕಾರಣವೂ ಇದೆ. ಪ್ರಾಮುಖ್ಯ ಇಲ್ಲದ ಪಾತ್ರಗಳಲ್ಲಿ ಸಾಯಿ ಪಲ್ಲವಿ ನಟಿಸುವುದಿಲ್ಲ. ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಯ ಪಾತ್ರ ಕೇವಲ ಹಾಡು, ರೊಮ್ಯಾನ್ಸ್ ದೃಶ್ಯಗಳು ಅಥವಾ ಹಾಸ್ಯ ದೃಶ್ಯಕ್ಕೆ ಮಾತ್ರವೇ ಸೀಮಿತವಾಗಿರುತ್ತದೆ. ಹಾಗಾಗಿ ಸಾಯಿ ಪಲ್ಲವಿ ಸ್ಟಾರ್ ನಟರ ಸಿನಿಮಾಗಳಿಂದ ತುಸು ದೂರವೇ ಇರುತ್ತಾರೆ.

Sai Pallavi: ಚಿತ್ರಮಂದಿರದಲ್ಲಿ ಸೋತ ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ ಚಿತ್ರಕ್ಕೆ ಈಗ ಅಂತಾರಾಷ್ಟ್ರೀಯ ಮನ್ನಣೆ

ಹಾಗೆಂದು ಸ್ಟಾರ್ ನಟರೊಟ್ಟಿಗೆ ಸಾಯಿ ಪಲ್ಲವಿ ನಟಿಸಿಯೇ ಇಲ್ಲ ಎಂದೇನೂ ಇಲ್ಲ. ಈ ಹಿಂದೆ ನಟ ಸೂರ್ಯ, ಧನುಶ್ ಅವರೊಟ್ಟಿಗೆ ನಟಿಸಿದ್ದಾರೆ. ಆದರೆ ಆ ಸಿನಿಮಾಗಳಲ್ಲಿ ನಾಯಕಿಯ ಪಾತ್ರಕ್ಕೆ ತುಸು ಪ್ರಾಮುಖ್ಯತೆ ಇತ್ತು, ಅಭಿನಯಕ್ಕೆ ಅವಕಾಶವಿತ್ತು ಹಾಗಾಗಿ ಆ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು.

ಸಾಯಿ ಪಲ್ಲವಿ ನಿರಾಕರಿಸಿದ ವಾರಿಸು ಸಿನಿಮಾದ ಪಾತ್ರ ಕನ್ನಡತಿ ರಶ್ಮಿಕಾ ಮಂದಣ್ಣ ಪಾಲಾದರೆ ವಾಲಿಮೈ ಸಿನಿಮಾದಲ್ಲಿ ಪಾತ್ರವನ್ನೇ ಕೈಬಿಡಲಾಯ್ತಂತೆ.

ಸಾಯಿ ಪಲ್ಲವಿ ನಟಿಸಿದ್ದ ಗಾರ್ಗಿ ಸಿನಿಮಾ ಕಳೆದ ವರ್ಷ ಜುಲೈನಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾದ ಬಳಿಕ ಸಾಯಿ ಪಲ್ಲವಿ ನಟಿಸಿರುವ ಇನ್ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ಇದೀಗ ತಮಿಳಿನ ಶಿವಕಾರ್ತಿಕೇಯನ್ ನಟನೆಯ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಕತೆ ಬರೆದಿರುವುದು ಖ್ಯಾತ ನಟ ಕಮಲ್ ಹಾಸನ್. ಚಿತ್ರೀಕರಣ ಚಾಲ್ತಿಯಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.