Sai Pallavi: ‘ಪುಷ್ಪ 2’ ಚಿತ್ರದಲ್ಲಿ ಸಾಯಿ ಪಲ್ಲವಿ ಇರ್ತಾರಾ? ಸ್ಪಷ್ಟನೆ ನೀಡಿದ ನಿರ್ಮಾಪಕ

Pushpa 2: ಸೆಪ್ಟೆಂಬರ್​ 22ರಂದು ‘ಪುಷ್ಪ 2’ ಚಿತ್ರದ ಶೂಟಿಂಗ್​ ಆರಂಭ ಆಗಲಿದೆ. ಅದಕ್ಕಾಗಿ ರಶ್ಮಿಕಾ ಮಂದಣ್ಣ ಹಾಗೂ ಅಲ್ಲು ಅರ್ಜುನ್​ ಸಜ್ಜಾಗುತ್ತಿದ್ದಾರೆ.

Sai Pallavi: ‘ಪುಷ್ಪ 2’ ಚಿತ್ರದಲ್ಲಿ ಸಾಯಿ ಪಲ್ಲವಿ ಇರ್ತಾರಾ? ಸ್ಪಷ್ಟನೆ ನೀಡಿದ ನಿರ್ಮಾಪಕ
ಸಾಯಿ ಪಲ್ಲವಿ, ಅಲ್ಲು ಅರ್ಜುನ್
Follow us
TV9 Web
| Updated By: ಮದನ್​ ಕುಮಾರ್​

Updated on: Sep 09, 2022 | 7:25 AM

ಅಲ್ಲು ಅರ್ಜುನ್​ (Allu Arjun) ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಯಿತು. ಈಗ ಅದರ ಸೀಕ್ವೆಲ್​ ನೋಡಲು ಫ್ಯಾನ್ಸ್​ ಕಾಯುತ್ತಿದ್ದಾರೆ. ಇನ್ನಷ್ಟೇ ಅದಕ್ಕೆ ಶೂಟಿಂಗ್​ ಶುರು ಆಗಬೇಕಿದೆ. ಈ ನಡುವೆ ‘ಪುಷ್ಪ 2’ ಸಿನಿಮಾ (Pushpa 2) ಬಗ್ಗೆ ಅನೇಕ ಗಾಸಿಪ್​ಗಳು ಹರಿದಾಡುತ್ತಿವೆ. ಕಥಾನಾಯಕ ಲುಕ್​ ಬದಲಾಗುತ್ತಂತೆ, ಶ್ರೀವಲ್ಲಿ ಪಾತ್ರ ಸತ್ತು ಹೋಗುತ್ತಂತೆ, ಪುಷ್ಪರಾಜ್​ ವಿದೇಶಕ್ಕೆ ಹೋಗ್ತಾನಂತೆ.. ಹೀಗೆ ಹತ್ತು ಹಲವು ಅಂತೆ-ಕಂತೆಗಳು ಕೇಳಿಬರುತ್ತಿವೆ. ಈ ನಡುವೆ ಸಾಯಿ ಪಲ್ಲವಿ (Sai Pallavi) ಕೂಡ ‘ಪುಷ್ಪ 2’ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆ ಕುರಿತು ಈಗ ನಿರ್ಮಾಪಕರಿಂದಲೇ ಸ್ಪಷ್ಟನೆ ಸಿಕ್ಕಿದೆ. ‘ಪಿಂಕ್​ ವಿಲ್ಲಾ’ಗೆ ನೀಡಿ ಸಂದರ್ಶನದಲ್ಲಿ ನಿರ್ಮಾಪಕ ವೈ. ರವಿಶಂಕರ್​ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಸಾಯಿ ಪಲ್ಲವಿ ಅವರಿಗೆ ಇಡೀ ಭಾರತೀಯ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ನಟನೆ ಮೂಲಕ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರು ಇತ್ತೀಚಿಗೆ ನಟಿಸಿದ ‘ವಿರಾಟ ಪರ್ವಂ’ ಮತ್ತು ‘ಗಾರ್ಗಿ’ ಚಿತ್ರಗಳು ಥಿಯೇಟರ್​ನಲ್ಲಿ ಸೋತಿದ್ದರೂ ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಸೂಪರ್ ಹಿಟ್​ ಆಗಿವೆ. ಹಾಗಾಗಿ ಸಾಯಿ ಪಲ್ಲವಿ ಅವರನ್ನು ಸಿನಿಮಾಗೆ ಆಯ್ಕೆ ಮಾಡಿಕೊಂಡರೆ ಖಂಡಿತ ನಷ್ಟ ಇಲ್ಲ ಎಂಬ ಟಾಕ್​ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದೆ. ಹಾಗಂತ ಅವರು ‘ಪುಷ್ಪ 2’ ಚಿತ್ರದಲ್ಲಿ ನಟಿಸೋದು ನಿಜವೇ? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಸಾಯಿ ಪಲ್ಲವಿ ನ್ಯಾಯ ಸಲ್ಲಿಸುತ್ತಾರೆ ಎಂಬುದು ಈಗಾಗಲೇ ಸಾಬೀತಾಗಿರುವ ವಿಚಾರ. ‘ಪುಷ್ಪ 2’ ಸಿನಿಮಾದಲ್ಲಿ ಅವರಿಗೆ ಬುಡಕಟ್ಟು ಜನಾಂಗದ ಹುಡುಗಿಯ ಪಾತ್ರ ನೀಡಲಾಗುತ್ತಿದೆ ಎಂದು ಗಾಳಿಸುದ್ದಿ ಹಬ್ಬಿತ್ತು. ಅದನ್ನು ನಿರ್ಮಾಪಕ ವೈ. ರವಿಶಂಕರ್ ತಳ್ಳಿಹಾಕಿದ್ದಾರೆ. ‘ಆ ಸುದ್ದಿ ನಿಜವಲ್ಲ’ ಎಂದು ಅವರು ಒಂದೇ ಮಾತಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ
Image
‘ಪುಷ್ಪ 2’ ಚಿತ್ರದಲ್ಲಿ ಅಸಲಿ ವಿಲನ್ ಯಾರು? ಅಲ್ಲು ಅರ್ಜುನ್ ಚಿತ್ರದಲ್ಲಿದೆ ದೊಡ್ಡ ಟ್ವಿಸ್ಟ್
Image
‘ಪುಷ್ಪ 2’ ಚಿತ್ರದ ಮುಹೂರ್ತಕ್ಕೆ ಗೈರಾದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ; ಕಾರಣ ಏನು?
Image
Allu Arjun: ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್​ ಲುಕ್​ ಹೀಗಿರುತ್ತಾ? ವೈರಲ್​ ಆಗಿದೆ ಹೊಸ ಫೋಟೋ
Image
Pushpa 2 Story: ರಾಕಿ ಭಾಯ್​ ರೀತಿ ವಿದೇಶಕ್ಕೆ ಹೋಗ್ತಾನಾ ಪುಷ್ಪರಾಜ್​? ‘ಕೆಜಿಎಫ್​ 2’ ಚಿತ್ರಕ್ಕೆ ‘ಪುಷ್ಪ 2’ ಕಥೆ ಹೋಲಿಕೆ

‘ಪುಷ್ಪ 2’ ಚಿತ್ರಕ್ಕೆ ಸುಕುಮಾರ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಪ್ರತಿಷ್ಠಿತ ಮೈತ್ರಿ ಮೂವೀ ಮೇಕರ್ಸ್​ ಸಂಸ್ಥೆ ಮೂಲಕ ಈ ಸಿನಿಮಾ ಮೂಡಿಬರುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸೆಪ್ಟೆಂಬರ್​ 22ರಂದು ಈ ಚಿತ್ರದ ಶೂಟಿಂಗ್​ ಆರಂಭ ಆಗಲಿದೆ. ರಶ್ಮಿಕಾ ಮಂದಣ್ಣ ಹಾಗೂ ಅಲ್ಲು ಅರ್ಜುನ್​ ಅವರು ಜೊತೆಯಾಗಿ ಕ್ಯಾಮೆರಾ ಎದುರಿಸಲಿದ್ದಾರೆ. ಡಾಲಿ ಧನಂಜಯ್​, ಫಹಾದ್​ ಫಾಸಿಲ್​ ಹಾಗೂ ಇನ್ನಿತರ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.