Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ 2’ ಚಿತ್ರದಲ್ಲಿ ಅಸಲಿ ವಿಲನ್ ಯಾರು? ಅಲ್ಲು ಅರ್ಜುನ್ ಚಿತ್ರದಲ್ಲಿದೆ ದೊಡ್ಡ ಟ್ವಿಸ್ಟ್

ಇತ್ತೀಚೆಗೆ ‘ಪುಷ್ಪ 2’ ಚಿತ್ರದ ಮುಹೂರ್ತ ನೆರವೇರಿದೆ. ಸುಕುಮಾರ್ ಹಾಗೂ ಚಿತ್ರತಂಡದ ತಂತ್ರಜ್ಞರು ಇದರಲ್ಲಿ ಭಾಗಿ ಆಗಿದ್ದರು. ಶೂಟಿಂಗ್ ಶೀಘ್ರದಲ್ಲೇ ಆರಂಭ ಆಗಲಿದೆ ಎಂಬ ವಿಚಾರವನ್ನು ಚಿತ್ರತಂಡ ರಿವೀಲ್ ಮಾಡಿತ್ತು.

‘ಪುಷ್ಪ 2’ ಚಿತ್ರದಲ್ಲಿ ಅಸಲಿ ವಿಲನ್ ಯಾರು? ಅಲ್ಲು ಅರ್ಜುನ್ ಚಿತ್ರದಲ್ಲಿದೆ ದೊಡ್ಡ ಟ್ವಿಸ್ಟ್
ಅಲ್ಲು ಅರ್ಜುನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 29, 2022 | 4:39 PM

‘ಪುಷ್ಪ’ ಸಿನಿಮಾ (Pushpa Movie) ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮೋಡಿ ಮಾಡಿದೆ. ಈ ಸಿನಿಮಾದ ಒಟ್ಟಾರೆ ಕಲೆಕ್ಷನ್ 300 ಕೋಟಿ ರೂಪಾಯಿ ದಾಟಿದೆ. ಈ ಸಿನಿಮಾದಿಂದ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಅವರ ವೃತ್ತಿಜೀವನಕ್ಕೆ ಸಖತ್ ಮೈಲೇಜ್ ಸಿಕ್ಕಿದೆ. ಈಗ ‘ಪುಷ್ಪ 2’ ಚಿತ್ರದ ಮೇಲೆ ಫ್ಯಾನ್ಸ್ ಕಣ್ಣಿಟ್ಟಿದ್ದಾರೆ. ಈ ಸಿನಿಮಾಗೆ ಇತ್ತೀಚೆಗಷ್ಟೇ ಮುಹೂರ್ತ ನೆರವೇರಿದೆ. ಈಗ ‘ಪುಷ್ಪ 2’ ವಿಲನ್ ಬಗ್ಗೆ ಹೊಸ ಅಪ್​ಡೇಟ್ ಸಿಕ್ಕಿದೆ. ಇದನ್ನು ಕೇಳಿ ಫ್ಯಾನ್ಸ್​ ಥ್ರಿಲ್ ಆಗಿದ್ದಾರೆ.

‘ಪುಷ್ಪ 2’ ಚಿತ್ರಕ್ಕೆ ಸುಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ಮೊದಲ ಪಾರ್ಟ್​ನಲ್ಲಿ ಸುನೀಲ್, ಅನಸೂಯ, ಅಜಯ್, ಧನಂಜಯ್, ಫಹಾದ್ ಫಾಸಿಲ್ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಎರಡನೇ ಪಾರ್ಟ್​ನಲ್ಲಿ ಫಹಾದ್ ಫಾಸಿಲ್ ಹಾಗೂ ಧನಂಜಯ್ ಪಾತ್ರ ಹೈಲೈಟ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರ ಜತೆಗೆ ಪಾತ್ರವರ್ಗ ಕೂಡ ಹಿರಿದಾಗಲಿದೆ.

ಮೊದಲ ಪಾರ್ಟ್​ನಲ್ಲಿ ರಾವ್ ರಮೇಶ್ ಅವರು ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದರು. ರಕ್ತ ಚಂದನ ಕಳ್ಳಸಾಗಣೆ ಮಾಡಲು ಹೀರೋಗೆ ರಾವ್ ರಮೇಶ್ ಪಾತ್ರ ಬೆಂಬಲ ನೀಡುತ್ತಾ ಇರುತ್ತದೆ. ಈಗ ಕಥಾ ನಾಯಕನಿಗೆ ಕೌಂಟರ್ ಕೊಡುವ ರೀತಿಯಲ್ಲಿ ಹೊಸ ಪಾತ್ರ ಪರಿಚಯಿಸುವ ಆಲೋಚನೆಯಲ್ಲಿ ನಿರ್ದೇಶಕ ಸುಕುಮಾರ್ ಇದ್ದಾರೆ. ಇದಕ್ಕಾಗಿ ಆದಿ ಪಿನಿಶೆಟ್ಟಿ ಮೊದಲಾದವರಿಗೆ ಆಫರ್ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಪಾತ್ರ ಪವರ್​ಫುಲ್ ವಿಲನ್ ಆಗಿರಲಿದೆ ಎಂಬುದು ಮೂಲಗಳ ಮಾಹಿತಿ.

ಇದನ್ನೂ ಓದಿ: ಪುಷ್ಪ ಚಿತ್ರವನ್ನೇ ಹಿಂದಿಕ್ಕಿದ ಲೈಗರ್: ಬಾಕ್ಸಾಫೀಸ್​ನಲ್ಲಿ ವಿಜಯ್ ಬಾಕ್ಸಿಂಗ್ ಕಮಾಲ್..!

ಇತ್ತೀಚೆಗೆ ‘ಪುಷ್ಪ 2’ ಚಿತ್ರದ ಮುಹೂರ್ತ ನೆರವೇರಿದೆ. ಸುಕುಮಾರ್ ಹಾಗೂ ಚಿತ್ರತಂಡದ ತಂತ್ರಜ್ಞರು ಇದರಲ್ಲಿ ಭಾಗಿ ಆಗಿದ್ದರು. ಶೂಟಿಂಗ್ ಶೀಘ್ರದಲ್ಲೇ ಆರಂಭ ಆಗಲಿದೆ ಎಂಬ ವಿಚಾರವನ್ನು ಚಿತ್ರತಂಡ ರಿವೀಲ್ ಮಾಡಿತ್ತು. ಆದಷ್ಟು ಬೇಗ ಸಿನಿಮಾದ ಶೂಟಿಂಗ್ ಆರಂಭ ಆಗಲಿ ಅನ್ನೋದು ಫ್ಯಾನ್ಸ್ ಆಶಯ. ಈ ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡುತ್ತಿದೆ.

ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ
ಅಪ್ಪನ ಮುಖ ದಿಟ್ಟಿಸುತ್ತಿದ್ದ ಅಭಿಜಯನಲ್ಲಿನ ತಾಕಲಾಟಗಳು ಒಂದೆರಡಲ್ಲ
ಅಪ್ಪನ ಮುಖ ದಿಟ್ಟಿಸುತ್ತಿದ್ದ ಅಭಿಜಯನಲ್ಲಿನ ತಾಕಲಾಟಗಳು ಒಂದೆರಡಲ್ಲ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ