Love 360: ತೆಲುಗು-ತಮಿಳಿಗೆ ರಿಮೇಕ್​ ಆಗಲಿದೆ ಕನ್ನಡದ ‘ಲವ್​ 360’ ಸಿನಿಮಾ

Rachan Inder | Love 360 Praveen: ರಚನಾ ಇಂದರ್​ ಮತ್ತು ಹೊಸ ಹೀರೋ ಪ್ರವೀಣ್​ ಅವರು ‘ಲವ್​ 360’ ಚಿತ್ರದಲ್ಲಿ ನಟಿಸಿದ್ದಾರೆ. ರಿಮೇಕ್​ನಲ್ಲಿ ಯಾರು ಅಭಿನಯಿಸುತ್ತಾರೆ ಎಂಬ ಕೌತುಕ ಮೂಡಿದೆ.

Love 360: ತೆಲುಗು-ತಮಿಳಿಗೆ ರಿಮೇಕ್​ ಆಗಲಿದೆ ಕನ್ನಡದ ‘ಲವ್​ 360’ ಸಿನಿಮಾ
ರಚನಾ ಇಂದರ್, ಪ್ರವೀಣ್
Follow us
TV9 Web
| Updated By: ಮದನ್​ ಕುಮಾರ್​

Updated on: Aug 29, 2022 | 3:24 PM

ಭಾರತೀಯ ಚಿತ್ರರಂಗದಲ್ಲಿ ಕನ್ನಡಕ್ಕೆ ಈಗ ಬೇರೆಯದೇ ಸ್ಥಾನಮಾನ ಇದೆ. ಇಲ್ಲಿನ ಸಿನಿಮಾಗಳನ್ನು ಇಡೀ ರಾಷ್ಟ್ರವೇ ತಿರುಗಿ ನೋಡುತ್ತಿದೆ. ‘ಕೆಜಿಎಫ್​’ ತೆರೆಕಂಡ ನಂತರದಲ್ಲಿ ಚಂದನವನದ (Sandalwood) ಇಮೇಜ್​ ಬದಲಾಗಿದೆ. ಹಾಗಂತ ಕೇವಲ ಹೈ ಬಜೆಟ್​ ಸಿನಿಮಾಗಳೇ ಸದ್ದು ಮಾಡುತ್ತಿವೆ ಎಂದೇನೂ ಅಲ್ಲ. ಉತ್ತಮ ಕಂಟೆಂಟ್​ ಇರುವ ಮೀಡಿಯಂ ಬಜೆಟ್​ ಸಿನಿಮಾಗಳು ಕೂಡ ಪರಭಾಷೆ ಮಂದಿಯ ಗಮನ ಸೆಳೆಯುತ್ತಿವೆ. ಅದಕ್ಕೆ ಹೊಸ ಸೇರ್ಪಡೆ ‘ಲವ್​ 360’ (Love 360) ಚಿತ್ರ. ಆಗಸ್ಟ್​ 19ರಂದು ತೆರೆಕಂಡ ಈ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿ ಆಗಿದೆ. ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಈಗ ಈ ಸಿನಿಮಾ ರಿಮೇಕ್ (Remake)​ ಆಗುತ್ತಿದೆ ಎಂಬ ಸುದ್ದಿಯನ್ನು ಚಿತ್ರತಂಡದವರು ಹಂಚಿಕೊಂಡಿದ್ದಾರೆ.

ತೆಲುಗು ಮತ್ತು ತಮಿಳಿನಲ್ಲಿ ‘ಲವ್​ 360’ ಸಿನಿಮಾವನ್ನು ರಿಮೇಕ್​ ಮಾಡಲು ಖ್ಯಾತ ನಿರ್ಮಾಣ ಸಂಸ್ಥೆಯೊಂದು ಮುಂದೆಬಂದಿದೆ. ಆ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ. ನಿರ್ದೇಶಕ ಶಶಾಂಕ್​ ಅವರು ‘ಲವ್​ 360’ ಸಿನಿಮಾ ಮೂಲಕ ಒಂದು ಮುಗ್ಧ ಪ್ರೇಮಕಥೆಯನ್ನು ತೆರೆಗೆ ತಂದಿದ್ದಾರೆ. ರಚನಾ ಇಂದರ್​ ಮತ್ತು ಹೊಸ ಹೀರೋ ಪ್ರವೀಣ್​ ಅವರು ಈ ಚಿತ್ರದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.

‘ಲವ್​ 360’ ಸಿನಿಮಾ ಭಾರಿ ಹೈಪ್ ಕ್ರಿಯೇಟ್​ ಮಾಡಲು ಒಂದಷ್ಟು ಕಾರಣಗಳಿವೆ. ಆ ಪೈಕಿ ಮುಖ್ಯವಾದ್ದದ್ದು ‘ಜಗವೇ ನೀನು ಗೆಳತಿಯೇ..’ ಹಾಡು. ಯೂಟ್ಯೂಬ್​ನಲ್ಲಿ ಈ ಹಾಡು 1.5 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಚಿತ್ರಮಂದಿರಕ್ಕೆ ಜನರನ್ನು ಕರೆತರುವಲ್ಲಿ ಈ ಹಾಡಿನ ಪಾತ್ರ ದೊಡ್ಡದಿದೆ. ಲವ್​ ಸ್ಟೋರಿ ನೋಡಲು ಬಂದ ಪ್ರೇಕ್ಷಕರಿಗೆ ಒಂದು ಮರ್ಡರ್​ ಮಿಸ್ಟರಿ ಕಥೆ ಅಚ್ಚರಿ ಮೂಡಿಸಿದೆ. ಈ ಚಿತ್ರಕ್ಕೆ ಪರಭಾಷೆ ಸಿನಿಮಾ ಮಂದಿ ಮನಸೋತಿದ್ದು, ರಿಮೇಕ್​ ಮಾಡಲು ಮುಂದೆ ಬಂದಿದ್ದಾರೆ.

ಇದನ್ನೂ ಓದಿ
Image
‘ಜಜಾಂಗ್​ ಜಾಂಗ್​.. ಆ ಭಟ್ರು ಬರೆಯೋದೆಲ್ಲ ಇಂಥವೇ’; ಎನ್ನುತ್ತ ಹೊಸ ಸಾಂಗ್​ ತೋರಿಸಿದ ‘ಲವ್​ 360’ ತಂಡ
Image
Love 360: ಶಿವಣ್ಣ ಮೆಚ್ಚಿದ ‘ಲವ್​ 360 ಟ್ರೇಲರ್​’: ಚಿತ್ರತಂಡ ಹಾಗೂ ಸಿದ್​ ಶ್ರೀರಾಮ್​ ಬಗ್ಗೆ ವಿಶೇಷ ಮಾತು
Image
‘ಲವ್​ 360’ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ‘ಹೆಂಗೆ ನಾವು’ ಖ್ಯಾತಿಯ ರಚನಾ ಇಂದರ್​
Image
ಹಾಡಿನ ಮೂಲಕ ‘ಭೋರ್ಗರೆದು’ ಸದ್ದು ಮಾಡ್ತಿದೆ ‘ಲವ್​ 360’ ಸಿನಿಮಾ; ಸಾಂಗ್ಸ್​ ಸೂಪರ್​ ಹಿಟ್​

ನಿರ್ದೇಶಕ ಶಶಾಂತ್​ ಅವರು ಪ್ರತಿ ಸಿನಿಮಾದಲ್ಲೂ ತಮ್ಮದೇ ಶೈಲಿಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಅವರ ಜೊತೆ ಸಿನಿಮಾ ಮಾಡುವ ಹೊಸಬರಿಗೆ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ ಎಂಬುದಕ್ಕೆ ‘ಲವ್​ 360’ ಸಿನಿಮಾ ಹೊಸ ಉದಾಹರಣೆ ಆಗಿದೆ. ಮೊದಲ ಸಿನಿಮಾದಲ್ಲೇ ನಟ ಪ್ರವೀಣ್​ ಅವರಿಗೆ ಭರ್ಜರಿ ಜನಪ್ರಿಯತೆ ಸಿಕ್ಕಿದೆ. ರಚನಾ ಇಂದರ್​ ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾದಲ್ಲಿ ಕಾವ್ಯಾ ಶಾಸ್ತ್ರಿ, ಗೋಪಾಲ ದೇಶಪಾಂಡೆ, ಮಸಲ್​ ಮಣಿ, ಸುಜಿತ್​, ಡ್ಯಾನಿ ಕುಟ್ಟಪ್ಪ ಮುಂತಾದವರು ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ