‘ಜಜಾಂಗ್​ ಜಾಂಗ್​.. ಆ ಭಟ್ರು ಬರೆಯೋದೆಲ್ಲ ಇಂಥವೇ’; ಎನ್ನುತ್ತ ಹೊಸ ಸಾಂಗ್​ ತೋರಿಸಿದ ‘ಲವ್​ 360’ ತಂಡ

Love 360 Movie Songs: ‘ಲವ್​ 360’ ಸಿನಿಮಾ ರಿಲೀಸ್​ಗೂ ಮುನ್ನವೇ ಹಾಡುಗಳ ಮೂಲಕ ಸಖತ್​ ಸದ್ದು ಮಾಡುತ್ತಿದೆ. ಈ ಚಿತ್ರಕ್ಕಾಗಿ ಯೋಗರಾಜ್​ ಭಟ್​ ಅವರು ಒಂದು ಪ್ರಮೋಷನಲ್​ ಸಾಂಗ್​ ಬರೆದಿದ್ದಾರೆ.

‘ಜಜಾಂಗ್​ ಜಾಂಗ್​.. ಆ ಭಟ್ರು ಬರೆಯೋದೆಲ್ಲ ಇಂಥವೇ’; ಎನ್ನುತ್ತ ಹೊಸ ಸಾಂಗ್​ ತೋರಿಸಿದ ‘ಲವ್​ 360’ ತಂಡ
ಶಶಾಂಕ್​, ಯೋಗರಾಜ್​ ಭಟ್​. ಅರ್ಜುನ್​ ಜನ್ಯ
Follow us
TV9 Web
| Updated By: ಮದನ್​ ಕುಮಾರ್​

Updated on: Aug 14, 2022 | 7:15 AM

ಕನ್ನಡ ಚಿತ್ರರಂಗದಲ್ಲಿ ಯೋಗರಾಜ್​ ಭಟ್​ (Yogaraj Bhat) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ನಿರ್ದೇಶಕನಾಗಿ ಮಾತ್ರವಲ್ಲದೇ ಅವರು ಗೀತರಚನಕಾರನಾಗಿಯೂ ಸಿಕ್ಕಾಪಟ್ಟೆ ಫೇಮಸ್.​ ಅವರು ಬರೆಯುವ ಹಾಡಿನಲ್ಲಿ ಹೊಸತನ ಇರುತ್ತದೆ. ಸಿನಿಮಾ ಗೀತೆಗಳಲ್ಲಿ ಬೇರೆಯದೇ ಫ್ಲೇವರ್​ ಪರಿಚಯಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಈಗ ಅವರು ‘ಲವ್​ 360’ (Love 360 Movie) ಸಿನಿಮಾಗೆ ಒಂದು ಪ್ರಮೋಷನಲ್​ ಸಾಂಗ್​ ಬರೆದುಕೊಟ್ಟಿದ್ದಾರೆ. ‘ಜಜಾಂಗ್​ ಜಾಂಗ್​..’ ಎಂದು ಶುರುವಾಗುವ ಈ ಗೀತೆಯನ್ನು ಆನಂದ್​ ಆಡಿಯೋ ಮೂಲಕ ಬಿಡುಗಡೆ ಮಾಡಲಾಗಿದೆ. ನಿರ್ದೇಶಕ ಶಶಾಂಕ್​ (Director Shashank)​, ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಅವರು ಈ ಹಾಡನ್ನು ಪರಿಚಯಿಸಿದ್ದಾರೆ. ಹಾಡು ಶುರುವಾಗುವುದಕ್ಕೂ ಮುನ್ನ ಶಶಾಂಕ್​ ಮತ್ತು ಅರ್ಜುನ್​ ಜನ್ಯ ನಡುವೆ ನಡೆಯುವ ಸಂಭಾಷಣೆ ಸಖತ್​ ಫನ್ನಿ ಆಗಿದೆ.

ಅರ್ಜುನ್​ ಜನ್ಯ: ಯಾವ ಥರ ಸಾಂಗ್​ ಸರ್​?

ಶಶಾಂಕ್​: ಒಂದು ಪ್ರಮೋಷನಲ್​ ಸಾಂಗ್​ ಮಾಡೋಣ.

ಇದನ್ನೂ ಓದಿ
Image
Love 360: ಶಿವಣ್ಣ ಮೆಚ್ಚಿದ ‘ಲವ್​ 360 ಟ್ರೇಲರ್​’: ಚಿತ್ರತಂಡ ಹಾಗೂ ಸಿದ್​ ಶ್ರೀರಾಮ್​ ಬಗ್ಗೆ ವಿಶೇಷ ಮಾತು
Image
‘ಲವ್​ 360’ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ‘ಹೆಂಗೆ ನಾವು’ ಖ್ಯಾತಿಯ ರಚನಾ ಇಂದರ್​
Image
ಹಾಡಿನ ಮೂಲಕ ‘ಭೋರ್ಗರೆದು’ ಸದ್ದು ಮಾಡ್ತಿದೆ ‘ಲವ್​ 360’ ಸಿನಿಮಾ; ಸಾಂಗ್ಸ್​ ಸೂಪರ್​ ಹಿಟ್​
Image
Gaalipata 2: ಯೋಗರಾಜ್​ ಭಟ್​ ಲೇಖನಿಯಲ್ಲಿ ಮತ್ತೊಂದು ಎಣ್ಣೆ ಸಾಂಗ್​; ‘ಗಾಳಿಪಟ 2’ ಚಿತ್ರದಲ್ಲಿ ಹಿಟ್​ ಕಾಂಬಿನೇಷನ್​

ಅರ್ಜುನ್​ ಜನ್ಯ: ಏನಾದರೂ ಬರೆದಿದ್ದೀರಾ ಸರ್​?

ಶಶಾಂಕ್​: ಇಂಥ ಸಾಂಗ್​ಗಳಿಗೆ ವರ್ಲ್ಡ್​ ಫೇಮಸ್​ ಆಗಿರುವ ನಮ್​ ಯೋಗರಾಜ್​ ಭಟ್​ ಬರೆದುಕೊಟ್ಟಿದ್ದಾರೆ ತಗೊಳಿ..

ಅರ್ಜುನ್​ ಜನ್ಯ: (ಲಿರಿಕ್ಸ್​ ನೋಡಿದ ಬಳಿಕ) ಜಜಾಂಗ್​ ಜಾಂಗ್​. ಹಂಗಂದ್ರೆ ಏನ್​ ಸರ್​?

ಶಶಾಂಕ್​: ಯೇ.. ಯಾವನಿಗ್​ ಗೊತ್ರಿ? ಆ ಭಟ್ರು ಬರೆಯೋದೆಲ್ಲ ಅಂಥವೇ.. ಸಾಂಗ್​ ಹಿಟ್​ ಆಗತ್ತೆ. ಹಾಕಿ..

‘ಲವ್​ 360’ ಸಿನಿಮಾ ಆಗಸ್ಟ್​ 19ರಂದು ಬಿಡುಗಡೆ ಆಗಲಿದೆ. ರಿಲೀಸ್​ಗೂ ಮುನ್ನವೇ ಹಾಡುಗಳ ಮೂಲಕ ಈ ಚಿತ್ರ ಸಖತ್​ ಸದ್ದು ಮಾಡುತ್ತಿದೆ. ಸಿದ್​​ ಶ್ರೀರಾಮ್​ ಹಾಡಿರುವ ‘ಜಗವೇ ನೀನು ಗೆಳತಿಯೇ..’ ಗೀತೆ ಈಗಾಗಲೇ 1.2 ಕೋಟಿ ಬಾರಿ ವೀಕ್ಷಣೆ ಕಂಡಿದೆ. ‘ಭೋರ್ಗರೆದು..’ ಸಾಂಗ್ ಕೂಡ ಲಕ್ಷಾಂತರ ವೀವ್ಸ್​ ಪಡೆದಿದೆ. ಈಗ ‘ಜಜಾಂಗ್​ ಜಾಂಗ್​..’ ಎಂಬ ಪ್ರಮೋಷನಲ್​ ಹಾಡನ್ನು ರಿಲೀಸ್​ ಮಾಡಲಾಗಿದೆ.

ಈ ಸಿನಿಮಾದಲ್ಲಿ ಹೊಸ ನಟ ಪ್ರವೀಣ್​ ಅವರು ಹೀರೋ ಆಗಿ ನಟಿಸಿದ್ದಾರೆ. ‘ಲವ್​ ಮಾಕ್ಟೇಲ್​’ ಖ್ಯಾತಿಯ ನಟಿ ರಚನಾ ಇಂದರ್​ ಅವರು ಹೀರೋಯಿನ್​ ಆಗಿ ಅಭಿನಯಿಸಿದ್ದಾರೆ. ಚಾಲೆಂಜಿಂಗ್​ ಆದಂತಹ ಪಾತ್ರವನ್ನು ಅವರು​ ನಿಭಾಯಿಸಿದ್ದಾರೆ. ಎಲ್ಲರ ಗಮನ ಸೆಳೆಯುತ್ತಿರುವ ಟ್ರೇಲರ್​ ನೋಡಿ ಶಿವರಾಜ್​ಕುಮಾರ್​ ಮೆಚ್ಚಿಕೊಂಡಿದ್ದಾರೆ. ಹಾಡುಗಳನ್ನೂ ಕೇಳಿ ಅವರು ಖುಷಿಪಟ್ಟಿದ್ದಾರೆ. ಈ ಎಲ್ಲ ಕಾರಣಗಳಿಂದ ‘ಲವ್​ 360’ ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ