Ramya Divya Spandana: ರಮ್ಯಾ ಸಿಹಿ ಸುದ್ದಿ ಕೊಡೋದು ಖಚಿತ; ಅಭಿಮಾನಿಗಳು ಬಯಸುತ್ತಿರೋದು ಏನು?
Sandalwood Queen Ramya: ರಮ್ಯಾ ಅವರಿಂದ ಇಂಥ ಒಂದು ಅಪ್ಡೇಟ್ ತಿಳಿಯಲು ಹಲವು ವರ್ಷಗಳಿಂದ ಫ್ಯಾನ್ಸ್ ಕಾದಿದ್ದರು. ಈಗ ಆ ಕಾಯುವಿಕೆಗೆ ತೆರೆ ಬೀಳುವ ಕಾಲ ಕೂಡಿಬಂದಂತಿದೆ.
ನಟಿ ರಮ್ಯಾ (Ramya Divya Spandana) ಅವರು ಗುಡ್ ನ್ಯೂಸ್ ಕೊಡುವುದಾಗಿ ಘೋಷಿಸಿದ್ದಾರೆ. ಇಷ್ಟು ದಿನ ಅಂಕೆ-ಕಂತೆಗಳ ರೂಪದಲ್ಲಿ ಹರಿದಾಡುತ್ತಿದ್ದ ಸುದ್ದಿ ಈಗ ನಿಜವಾಗುವ ಸಮಯ ಬಂದಿದೆ. ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡುವುದಾಗಿ ಅವರು ಖಚಿತವಾಗಿ ಹೇಳಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಅವರು ಬರೆದುಕೊಂಡಿದ್ದಾರೆ. ‘ನಾಳೆ (ಆಗಸ್ಟ್ 31) ಬೆಳಗ್ಗೆ 11.15ಕ್ಕೆ ನಿಮಗೆಲ್ಲ ನಾನು ಸಿಹಿ ಸುದ್ದಿ ನೀಡುತ್ತೇನೆ. ಇದು ಅಧಿಕೃತ’ ಎಂದು ರಮ್ಯಾ (Ramya) ಪೋಸ್ಟ್ ಮಾಡಿದ್ದಾರೆ. ಈ ವಿಚಾರದ ಕುರಿತು ಅಭಿಮಾನಿಗಳ ತಲೆಯಲ್ಲಿ ಹಲವು ಪ್ರಶ್ನೆ ಮೂಡಿದೆ. ರಮ್ಯಾ ಹೊಸ ಸಿನಿಮಾ ಮಡ್ತಾರಾ? ಮದುವೆ ಬಗ್ಗೆ ಏನಾದರೂ ನಿರ್ಧಾರ ತೆಗೆದುಕೊಂಡಿದ್ದಾರಾ? ನಿರ್ಮಾಣ ಸಂಸ್ಥೆ ಶುರು ಮಾಡುತ್ತಾರಾ? ಈ ಎಲ್ಲ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.
ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಬಹುಬೇಡಿಕೆಯ ನಟಿಯಾಗಿ ಆಳ್ವಿಕೆ ಮಾಡಿದವರು ರಮ್ಯಾ. ನಂತರ ಅವರು ರಾಜಕೀಯಕ್ಕೆ ತೆರಳಿದರು. ಆ ಬಳಿಕ ನಟನೆಯಿಂದ ಸಂಪೂರ್ಣ ಬ್ರೇಕ್ ಪಡೆದುಕೊಂಡರು. ಆದಷ್ಟು ಬೇಗ ಅವರು ಕಮ್ಬ್ಯಾಕ್ ಮಾಡಬೇಕು ಎಂಬುದು ಅಭಿಮಾನಿಗಳ ಬಯಕೆ. ಅದು ಈಡೇರುವ ಕಾಲ ಈಗ ಕೂಡಿಬಂದಿದೆ ಎಂದು ಎಲ್ಲರೂ ಊಹಿಸುತ್ತಿದ್ದಾರೆ. ರಮ್ಯಾ ನೀಡಲಿರುವ ಆ ಸಿಹಿ ಸುದ್ದಿ ಏನು ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾಯುತ್ತಿದ್ದಾರೆ.
View this post on Instagram
ರಮ್ಯಾ ನಟನೆಯಿಂದ ದೂರ ಉಳಿದುಕೊಂಡಿದ್ದರೂ ಕೂಡ ಚಿತ್ರರಂಗದ ನಂಟು ಕಡಿದುಕೊಂಡಿಲ್ಲ. ಹಲವು ಚಿತ್ರತಂಡಗಳ ಜೊತೆ ಅವರು ಸಂಪರ್ಕ ಹೊಂದಿದ್ದಾರೆ. ಹೊಸ ತಲೆಮಾರಿನ ಪ್ರತಿಭೆಗಳ ಜೊತೆಗೆ ರಮ್ಯಾ ಒಡನಾಟ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಅವರು ‘ಹೊಯ್ಸಳ’ ಚಿತ್ರದ ಶೂಟಿಂಗ್ ಸೆಟ್ಗೆ ಭೇಟಿ ನೀಡಿದ್ದರು. ರಾಜ್ ಬಿ. ಶೆಟ್ಟಿ, ರಕ್ಷಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ಮುಂತಾದವರಿಗೆ ಅವರು ಪ್ರೋತ್ಸಾಹ ನೀಡುತ್ತಲೇ ಇದ್ದಾರೆ.
ರಮ್ಯಾ ಅವರ ಕಮ್ಬ್ಯಾಕ್ ಬಗ್ಗೆ ಹಲವು ಅಂತೆ-ಕಂತೆಗಳು ಹರಿದಾಡುತ್ತಿವೆ. ರಾಜ್ ಬಿ. ಶೆಟ್ಟಿ ಜೊತೆ ಅವರು ಸಿನಿಮಾ ಮಾಡುತ್ತಾರೆ, ಹೊಂಬಾಳೆ ಫಿಲ್ಮ್ಸ್ ಜೊತೆ ಕೈ ಜೋಡಿಸುತ್ತಾರೆ, ಸ್ವಂತ ನಿರ್ಮಾಣ ಸಂಸ್ಥೆ ಆರಂಭಿಸುತ್ತಾರೆ.. ಹೀಗೆ ಹಲವು ಬಗೆಯ ಗಾಸಿಪ್ಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ. ಆ ಪೈಕಿ ಯಾವುದು ನಿಜವಾಗಲಿದೆ ಎಂಬುದನ್ನು ತಿಳಿದುಕೊಳ್ಳುವ ಕಾತರ ಅಭಿಮಾನಿಗಳಿಗೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:18 am, Tue, 30 August 22