ಯಶ್ ಬಾಲ್ಯದ ಫೋಟೋ ವೈರಲ್; ‘ಆಗಲೇ ಹಾಗೆ, ಇನ್ನು ಈಗ ಕೇಳ್ಬೇಕಾ?’ ಎಂದ ಫ್ಯಾನ್ಸ್

‘ಕೆಜಿಎಫ್’ ಸಿನಿಮಾದಲ್ಲಿ ರಾಕಿ ಬಾಲ್ಯದಲ್ಲಿ ಸಾಕಷ್ಟು ಕಷ್ಟಪಡುತ್ತಾನೆ. ಎತ್ತರಕ್ಕೆ ಬೆಳೆಯಬೇಕು ಎಂದು ಕನಸು ಕಾಣುತ್ತಾನೆ. ಯಶ್ ಜೀವನಕ್ಕೂ ರಾಕಿ ಪಾತ್ರಕ್ಕೂ ಒಂದು ನಂಟು ಇದೆ.

ಯಶ್ ಬಾಲ್ಯದ ಫೋಟೋ ವೈರಲ್; ‘ಆಗಲೇ ಹಾಗೆ, ಇನ್ನು ಈಗ ಕೇಳ್ಬೇಕಾ?’ ಎಂದ ಫ್ಯಾನ್ಸ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 30, 2022 | 3:55 PM

‘ರಾಕಿಂಗ್ ಸ್ಟಾರ್’ ಯಶ್ (Yash) ಬಗ್ಗೆ ಇಡೀ ದೇಶವೇ ಮಾತನಾಡುತ್ತಿದೆ. ಅವರ ಹೊಸ ಸಿನಿಮಾ ಬಗ್ಗೆ ಅಪ್​​ಡೇಟ್ ಪಡೆಯಲು ಬಾಲಿವುಡ್ ಮಂದಿ ಕೂಡ ಕಾದು ಕೂತಿದ್ದಾರೆ. ಆಗಸ್ಟ್ 31ರಂದು ಗಣೇಶ ಚತುರ್ಥಿ (Ganesh Chaturthi). ಈ ಸಮಯದಲ್ಲಿ ಯಶ್ ಹೊಸ ಸಿನಿಮಾ ಬಗ್ಗೆ ಏನಾದರೂ ಅಪ್​ಡೇಟ್​ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಹೀಗಿರುವಾಗಲೇ ಅವರ ಬಾಲ್ಯದ ಫೋಟೋ ವೈರಲ್ ಆಗಿದೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

‘ಕೆಜಿಎಫ್’ ಸಿನಿಮಾದಲ್ಲಿ ರಾಕಿ ಬಾಲ್ಯದಲ್ಲಿ ಸಾಕಷ್ಟು ಕಷ್ಟಪಡುತ್ತಾನೆ. ಎತ್ತರಕ್ಕೆ ಬೆಳೆಯಬೇಕು ಎಂದು ಕನಸು ಕಾಣುತ್ತಾನೆ. ಯಶ್ ಜೀವನಕ್ಕೂ ರಾಕಿ ಪಾತ್ರಕ್ಕೂ ಒಂದು ನಂಟು ಇದೆ. ಯಶ್ ಕೂಡ ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಕಷ್ಟಪಟ್ಟಿದ್ದರು. ನಂತರ ರಾತ್ರೋರಾತ್ರಿ ಮೈಸೂರಿನಿಂದ ಬೆಂಗಳೂರಿಗೆ ಬಂದರು. ಧಾರಾವಾಹಿಗಳಲ್ಲಿ ನಟಿಸಿ, ನಂತರ ಬೆಳ್ಳಿ ಪರದೆಯಲ್ಲಿ ಗುರುತಿಸಿಕೊಂಡರು. ಈಗ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.

ಇದನ್ನೂ ಓದಿ
Image
Rangi Taranga Remake: ಹಿಂದಿಗೆ ರಿಮೇಕ್​ ಆಗಲಿದೆ ಕನ್ನಡದ ‘ರಂಗಿತರಂಗ’; ಬಿ-ಟೌನ್​ ಸ್ಟಾರ್​ ನಟನಿಗೆ ಅನೂಪ್​ ಭಂಡಾರಿ ನಿರ್ದೇಶನ?
Image
Jersey Movie: ರಿಮೇಕ್​ ಮಾಡಿ ಕೈ ಸುಟ್ಟುಕೊಂಡ ಬಳಿಕ ಶಾಹಿದ್ ಕಪೂರ್​ಗೆ ಜ್ಞಾನೋದಯ; ಸ್ಟಾರ್ ನಟ ಈಗ ಹೇಳಿದ್ದೇನು?
Image
Jersy Box Office Collection: ‘ಕೆಜಿಎಫ್ ಚಾಪ್ಟರ್ 2’ 9ನೇ ದಿನ ಗಳಿಸಿದ ಅರ್ಧದಷ್ಟೂ ಕಲೆಕ್ಷನ್ ಮಾಡದ ಜೆರ್ಸಿ; ಇಲ್ಲಿದೆ ಲೆಕ್ಕಾಚಾರ
Image
ಯಶ್​ ಎಂಟ್ರಿಗೆ ಹೆದರಿದ ಬಾಲಿವುಡ್​ ಹೀರೋ; ಪೈಪೋಟಿ ನೀಡಲಾಗದೇ ಹಿಂದೆ ಸರಿದ ಶಾಹಿದ್​ ಕಪೂರ್ ‘ಜೆರ್ಸಿ’

ಯಶ್ ಅವರ ಬಾಲ್ಯದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅವರು ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೋ ಇದಾಗಿದೆ. ಈ ಚಿತ್ರಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಆಗಲೇ ಹಾಗೆ, ಇನ್ನು ಈಗ ಕೇಳ್ಬೇಕಾ?’ ಎಂದು ಯಶ್ ಬಗ್ಗೆ ಫ್ಯಾನ್ಸ್ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಯಶ್​ ಫ್ಯಾನ್​ ಪೇಜ್​ಗಳಲ್ಲೂ ಈ ಫೋಟೋ ವೈರಲ್ ಆಗಿದೆ.

ಇದನ್ನೂ ಓದಿ: Yash: ಬಾಲಿವುಡ್​ನಲ್ಲಿ ನಂಬರ್ ಒನ್ ಹೀರೋ ಪಟ್ಟ ಗಿಟ್ಟಿಸಿಕೊಂಡ ಯಶ್

ಯಶ್ ಅವರ ನಟನೆಯ ‘ಕೆಜಿಎಫ್ 2’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 1250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದು ಚಿತ್ರದ ಹೆಚ್ಚುಗಾರಿಕೆ. ಅವರ 19ನೇ ಸಿನಿಮಾ ಯಾವಾಗ ಘೋಷಣೆ ಆಗಲಿದೆ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ನರ್ತನ್ ಜತೆ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಶೀಘ್ರವೇ ಘೋಷಣೆ ಆಗಲಿದೆ ಎಂದು ಕೂಡ ಹೇಳಲಾಗಿತ್ತು. ಆದರೆ, ಈಗ ಅವರು ತಮಿಳು ನಿರ್ದೇಶಕ ಶಂಕರ್ ಜತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್