Dhamaka: ‘ಧಮಾಕ’ ಚಿತ್ರಕ್ಕೆ ಸಾಥ್ ನೀಡಿದ ಎಲ್ಲರಿಗೂ ವೇದಿಕೆ ಮೇಲೆ ಧನ್ಯವಾದ ತಿಳಿಸಿದ ಶಿವರಾಜ್ ಕೆ.ಆರ್. ಪೇಟೆ
Shivaraj KR Pete | Dhamaka Kannada Movie: ಸೆಪ್ಟೆಂಬರ್ 2ರಂದು ‘ಧಮಾಕ’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ನಟ ಶಿವರಾಜ್ ಕೆ.ಆರ್. ಪೇಟೆ ಅವರು ಪ್ರಮುಖ ಪಾತ್ರ ಮಾಡಿದ್ದಾರೆ.
ಹಾಸ್ಯ ನಟ ಶಿವರಾಜ್ ಕೆ.ಆರ್. ಪೇಟೆ (Shivaraj KR Pete) ಅವರು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ. ಕಾಮಿಡಿ ಪಾತ್ರಗಳ ಮೂಲಕ ಅವರು ಫೇಮಸ್ ಆಗಿದ್ದಾರೆ. ಈಗ ಅವರು ನಟಿಸಿರುವ ‘ಧಮಾಕ’ ಸಿನಿಮಾ (Dhamaka Kannada Movie) ಬಿಡುಗಡೆಗೆ ಸಜ್ಜಾಗಿದೆ. ಸೆಪ್ಟೆಂಬರ್ 2ರಂದು ಈ ಚಿತ್ರ ರಿಲೀಸ್ ಆಗಲಿದ್ದು, ಆ ಪ್ರಯುಕ್ತ ನಡೆದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಯೋಗರಾಜ್ ಭಟ್, ಚಿಕ್ಕಣ್ಣ (Chikkanna), ಡಾಲಿ ಧನಂಜಯ್, ಅಭಿಷೇಕ್ ಅಂಬರೀಷ್ ಮುಂತಾದವರಿಗೆ ಶಿವರಾಜ್ ಕೆ.ಆರ್. ಪೇಟೆ ಧನ್ಯವಾದ ಅರ್ಪಿಸಿದ್ದಾರೆ. ಎಲ್ಲರ ಸಹಾಯವನ್ನೂ ಅವರು ಸ್ಮರಿಸಿಕೊಂಡಿದ್ದಾರೆ.
Published on: Aug 30, 2022 09:11 AM
Latest Videos