ಕುಮಾರಸ್ವಾಮಿ ಬಂದು ಅಂಗೇ ಹೊಂಟೋದ್ರು, ನಮ್ಮ ಗೋಳು ಯಾರೂ ಕೇಳ್ಲಿಲ್ಲ: ರಾಮನಗರ ನಿವಾಸಿಗಳು

ಕುಮಾರಸ್ವಾಮಿ ಬಂದು ಅಂಗೇ ಹೊಂಟೋದ್ರು, ನಮ್ಮ ಗೋಳು ಯಾರೂ ಕೇಳ್ಲಿಲ್ಲ: ರಾಮನಗರ ನಿವಾಸಿಗಳು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 30, 2022 | 11:31 AM

ರಾಮನಗರ ಪಟ್ಟಣದಲ್ಲಿ ಭಕ್ಷಿಕೆರೆ ಒಡೆದು ನೀರು ಊರೊಳಗೆ ನುಗ್ಗಿದ್ದರಿಂದ ಟ್ರೂಪ್ ಲೈನ್, ಗೌಸಿಯಾ ನಗರ ಮತ್ತು ಅರ್ಕೇಶ್ವರ ನಗರ ಕಾಲೋನಿಗಳ ಮನೆಗಳಲೆಲ್ಲ ಹತ್ತತ್ತು ಅಡಿ ನೀರು ನುಗ್ಗಿತ್ತು

ರಾಮನಗರ (Ramanagara) ಜಿಲ್ಲೆಯಲ್ಲಿ ರವಿವಾರ ಮತ್ತು ಸೋಮವಾರ ಎಡೆಬಿಡದೆ ಸುರಿದ ಕಾರಣ ಜನರ ಬದುಕನ್ನು ನರಕಸದೃಶವಾಗಿಸಿದೆ. ರಾಮನಗರ ಪಟ್ಟಣದಲ್ಲಿ ಭಕ್ಷಿಕೆರೆ ಒಡೆದು ನೀರು ಊರೊಳಗೆ ನುಗ್ಗಿದ್ದರಿಂದ ಟ್ರೂಪ್ ಲೈನ್, ಗೌಸಿಯಾ ನಗರ ಮತ್ತು ಅರ್ಕೇಶ್ವರ ನಗರ (Aekeshwara Nagar) ಕಾಲೋನಿಗಳ ಮನೆಗಳಲೆಲ್ಲ ಹತ್ತತ್ತು ಅಡಿ ನೀರು ನುಗ್ಗಿತ್ತು. ಟಿವಿ9 ಕನ್ನಡ ವಾಹಿನಿಯ ರಾಮನಗರ ಪ್ರತಿನಿಧಿ ಈ ಕಾಲೊನಿಗಳ ಜನರೊಂದಿಗೆ ಮಾತಾಡಿ ಒಂದು ವರದಿಯನ್ನು ಕಳಿಸಿದ್ದಾರೆ. ನಿವಾಸಿಗಳು ಏನು ಹೇಳಿದ್ದಾರೆ ಅಂತ ಕೇಳಿಸಿಕೊಳ್ಳಿ.