Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ 2’ ಚಿತ್ರದ ಮುಹೂರ್ತಕ್ಕೆ ಗೈರಾದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ; ಕಾರಣ ಏನು?

ಹೈದರಾಬಾದ್​ನಲ್ಲಿ ‘ಪುಷ್ಪ 2’ಗೆ ಪೂಜಾ ಕಾರ್ಯ ನಡೆದಿದೆ. ನಿರ್ದೇಶಕ ಸುಕುಮಾರ್ ಸೇರಿ ಮೊದಲಾದವರು ಹಾಜರಿ ಹಾಕಿದ್ದರು. ‘ಶೀಘ್ರದಲ್ಲೇ ಶೂಟಿಂಗ್ ಆರಂಭಗೊಳ್ಳಲಿದೆ.

‘ಪುಷ್ಪ 2’ ಚಿತ್ರದ ಮುಹೂರ್ತಕ್ಕೆ ಗೈರಾದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ; ಕಾರಣ ಏನು?
ಅಲ್ಲು ಅರ್ಜುನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 22, 2022 | 4:54 PM

‘ಪುಷ್ಪ 2’ (Pushpa 2) ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ‘ಪುಷ್ಪ’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಚಿತ್ರ ಬಾಲಿವುಡ್ ಬಾಕ್ಸ್​ ಆಫೀಸ್​ನಿಂದಲೇ 100 ಕೋಟಿ ರೂಪಾಯಿ ಬಾಚಿಕೊಂಡಿದೆ. ಹೀಗಾಗಿ, ‘ಪುಷ್ಪ’ ಸೀಕ್ವೆಲ್​ ಮೇಲೆ ಹಿಂದಿ ಚಿತ್ರರಂಗದವರ ಕಣ್ಣೂ ಇದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜುಲೈ ತಿಂಗಳಲ್ಲೇ ಸಿನಿಮಾ ಶೂಟಿಂಗ್ ಆರಂಭ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ಕೆಲಸಗಳು ವಿಳಂಬ ಆಗಿದೆ. ಇಂದು (ಆಗಸ್ಟ್ 22) ‘ಪುಷ್ಪ 2’ ಚಿತ್ರಕ್ಕೆ ಮುಹೂರ್ತ ನಡೆದಿದೆ. ಆದರೆ, ಇದಕ್ಕೆ ಅಲ್ಲು ಅರ್ಜುನ್ (Allu Arjun) ಅವರೇ ಗೈರಾಗಿದ್ದಾರೆ.

ಹೈದರಾಬಾದ್​ನಲ್ಲಿ ‘ಪುಷ್ಪ 2’ಗೆ ಪೂಜಾ ಕಾರ್ಯ ನಡೆದಿದೆ. ನಿರ್ದೇಶಕ ಸುಕುಮಾರ್ ಸೇರಿ ಮೊದಲಾದವರು ಹಾಜರಿ ಹಾಕಿದ್ದರು. ‘ಶೀಘ್ರದಲ್ಲೇ ಶೂಟಿಂಗ್ ಆರಂಭಗೊಳ್ಳಲಿದೆ. ಸಿನಿಮಾ ದೊಡ್ಡದಾಗಿರಲಿದೆ ಮತ್ತು ಗ್ರ್ಯಾಂಡ್ ಆಗಿರಲಿದೆ’ ಎಂದು ‘ಪುಷ್ಪ’ ಸಿನಿಮಾದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆಯಲಾಗಿದೆ. ಮುಹೂರ್ತದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಚಾರ ಕೇಳಿ ಅಲ್ಲು ಅರ್ಜುನ್ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ
Image
Pushpa 2: ರಶ್ಮಿಕಾ ಮಂದಣ್ಣ ಪಾತ್ರ ಸಾಯುತ್ತೆ ಅನ್ನೋದು ನಿಜವೇ? ‘ಪುಷ್ಪ 2’ ನಿರ್ಮಾಪಕರು​ ನೀಡಿದ ಪ್ರತಿಕ್ರಿಯೆ ಇಲ್ಲಿದೆ..
Image
Rashmika Mandanna: ರಶ್ಮಿಕಾ ಮಂದಣ್ಣ ಗುಟ್ಟಾಗಿ ‘777 ಚಾರ್ಲಿ’ ನೋಡಿದ್ರಾ? ಜನರ ಅನುಮಾನಕ್ಕೆ ಕಾರಣ ಆಗಿದೆ ಈ ವಿಡಿಯೋ
Image
ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್​ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?
Image
ರಶ್ಮಿಕಾ ಮಂದಣ್ಣ ಹೊಸ ವಿಡಿಯೋ ವೈರಲ್​; ಎನರ್ಜಿ ಕಂಡು ವಾವ್​ ಎಂದ ಅಭಿಮಾನಿಗಳು

‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರು ಲೀಡ್ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಸಿನಿಮಾದ ನಾಯಕಿ. ಆದರೆ, ಇವರಿಬ್ಬರೂ ಇಂದಿನ ಪೂಜೆಯಲ್ಲಿ ಪಾಲ್ಗೊಂಡಿಲ್ಲ. ‘ಪುಷ್ಪ 2’ ಮುಹೂರ್ತದ ವೇಳೆ ತಾಂತ್ರಿಕ ವರ್ಗದವರೇ ಇದ್ದರು. ಈ ಸಂದರ್ಭದಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ಇಲ್ಲದಿರುವುದು ಫ್ಯಾನ್ಸ್​ಗೆ ಬೇಸರ ಮೂಡಿಸಿದೆ.

ಅಲ್ಲು ಅರ್ಜುನ್ ಅವರು ಸದ್ಯ ಅಮೆರಿಕದ ನ್ಯೂಯಾರ್ಕ್​ನಲ್ಲಿ ಇದ್ದಾರೆ. ನ್ಯೂಯಾರ್ಕ್​ನಲ್ಲಿ ಅವರು ಪ್ರಶಸ್ತಿ ಸ್ವೀಕರಿಸುವ ಉದ್ದೇಶದಿಂದ ತೆರಳಿದ್ದರು. ಈ ಕಾರಣಕ್ಕೆ ‘ಪುಷ್ಪ 2’ ಕಾರ್ಯಕ್ರಮದಲ್ಲಿ ಭಾಗಿ ಆಗಲು ಸಾಧ್ಯವಾಗಿಲ್ಲ. ಇನ್ನು, ರಶ್ಮಿಕಾ ಮಂದಣ್ಣ ಅವರು ಬೇರೆಬೇರೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಕಾರಣದಿಂದ ಅವರು ಮುಹೂರ್ತಕ್ಕೆ ಬಂದಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಅಗತ್ಯಬಿದ್ದರಷ್ಟೇ ಬಾಲಿವುಡ್​​ನಲ್ಲಿ ನಟಿಸ್ತೀನಿ’; ಅಲ್ಲು ಅರ್ಜುನ್ ನೇರ ನುಡಿ

‘ಪುಷ್ಪ 2’ ಚಿತ್ರವನ್ನು ಮುಂದಿನ ಮೇಗೆ ತೆರೆಗೆ ತಲುವ ಆಲೋಚನೆ ನಿರ್ದೇಶಕರಲ್ಲಿ ಇತ್ತು. ಆದರೆ, ಸಿನಿಮಾ ಶೂಟಿಂಗ್​ ಆರಂಭವೇ ವಿಳಂಬ ಆಗುತ್ತಿದೆ. ಈ ಕಾರಣದಿಂದಲೂ ಸಿನಿಮಾದ ರಿಲೀಸ್ ದಿನಾಂಕ ತಡವಾಗಬಹುದು ಎನ್ನಲಾಗುತ್ತಿದೆ. 2023ರ ಡಿಸೆಂಬರ್ ವೇಳೆಗೆ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸೋದು ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ.

Published On - 4:54 pm, Mon, 22 August 22