Liger Box Office Collections: ಪುಷ್ಪಾ ಚಿತ್ರವನ್ನೇ ಹಿಂದಿಕ್ಕಿದ ಲೈಗರ್: ಬಾಕ್ಸಾಫೀಸ್ನಲ್ಲಿ ವಿಜಯ್ ಬಾಕ್ಸಿಂಗ್ ಕಮಾಲ್..!
Liger Box Office Collections: ಲೈಗರ್ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿರುವ ವಿಜಯ್ ದೇವರಕೊಂಡ ಮೊದಲ ಚಿತ್ರದಲ್ಲೇ ಕಮಾಲ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
Liger Box Office Collections: ಟಾಲಿವುಡ್ ಸೆನ್ಸೇಷನ್ ವಿಜಯ್ ದೇವರಕೊಂಡ (Vijay Deverakonda) ಅಭಿನಯದ ಬಹುಭಾಷಾ ಚಿತ್ರ ಲೈಗರ್ (Liger) ಗೆ ಎಲ್ಲೆಡೆಯಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಪರಿಣಾಮ ಬಾಕ್ಸಾಫೀಸ್ನಲ್ಲಿ ಲೈಗರ್ ಘರ್ಜಿಸಲಾರಂಭಿಸಿದ್ದಾನೆ. ಅದರಂತೆ ಚಿತ್ರವು ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ಬಾಕ್ಸಾಫೀಸ್ ಕಲೆಕ್ಷನ್ ಮಾಹಿತಿ ಪ್ರಕಾರ ಲೈಗರ್ ಚಿತ್ರವು ಫಸ್ಟ್ ಡೇನಲ್ಲೇ ಬರೋಬ್ಬರಿ 33.12 ಕೋಟಿ ಲೂಟಿ ಮಾಡಿದೆ. ಪ್ರಸ್ತುತ ಬಾಕ್ಸಾಫೀಸ್ ಕಲೆಕ್ಷನ್ಗಳಿಗೆ ಹೋಲಿಸಿದರೆ ಇದು ಅತ್ಯುತ್ತಮ ಓಪನಿಂಗ್ ಎಂಬುದು ಸಿನಿಪಂಡಿತರ ಅಭಿಪ್ರಾಯ. ಏಕೆಂದರೆ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಅಮೀರ್ ಖಾನ್ ಅಭಿನಯದ ಬಾಲಿವುಡ್ ಚಿತ್ರ ಲಾಲ್ ಸಿಂಗ್ ಚಡ್ಡಾ ಮೊದಲ ದಿನ ಕಲೆಕ್ಷನ್ ಮಾಡಿದ್ದು ಕೇವಲ 11 ಕೋಟಿ ಮಾತ್ರ. ಇದೀಗ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ವಿಜಯ್ ದೇವರಕೊಂಡ ಹಲವು ಬಾಕ್ಸಾಫೀಸ್ ಅನ್ನು ಶೇಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಚಿತ್ರವು 2ನೇ ದಿನದಲ್ಲಿ ಸುಮಾರು 16 ಕೋಟಿ ಗಳಿಕೆ ಮಾಡಿದ್ದು, ಈ ಮೂಲಕ ಕೇವಲ ಎರಡನೇ ದಿನದಲ್ಲಿ ಬಾಕ್ಸಾಫೀಸ್ನಲ್ಲಿ ಸುಮಾರು 49 ಕೋಟಿ ರೂ. ಬಾಚಿಕೊಂಡಿದೆ ಎಂದು ವರದಿಯಾಗಿದೆ. ಅಂದರೆ ಶನಿವಾರ ಕಲೆಕ್ಷನ್ನೊಂದಿಗೆ ಚಿತ್ರದ ಗಳಿಕೆಯು 50 ಕೋಟಿಯನ್ನು ದಾಟಲಿದೆ.
ಪುಷ್ಪಾಗಿಂತ ಲೈಗರ್ ಅಬ್ಬರ:
ಲೈಗರ್ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿರುವ ವಿಜಯ್ ದೇವರಕೊಂಡ ಮೊದಲ ಚಿತ್ರದಲ್ಲೇ ಕಮಾಲ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಂದರೆ ಕಳೆದ ವರ್ಷ ಬಿಡುಗಡೆಯಾಗಿದ್ದ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರಕ್ಕಿಂತ ಲೈಗರ್ ಬಾಲಿವುಡ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ಈ ಹಿಂದೆ ಮೊದಲ ದಿನವೇ 4.5 ಕೋಟಿ ಬಾಚಿಕೊಳ್ಳುವ ಮೂಲಕ ಬಾಲಿವುಡ್ ಬಾಕ್ಸಾಫೀಸ್ನಲ್ಲಿ ಹಲ್ಚಲ್ ಸೃಷ್ಟಿಸಿದ್ದ ಪುಷ್ಪಾ ಚಿತ್ರದ ಕಲೆಕ್ಷನ್ ಅನ್ನು ಹಿಂದಿಕ್ಕುವ ಮೂಲಕ ಇದೀಗ ವಿಜಯ್ ದೇವರಕೊಂಡ ಅವರ ಲೈಗರ್ ಮೊದಲ ದಿನ ಒಟ್ಟು 5.50 ಕೋಟಿ ರೂ. ಗಳಿಕೆ ಮಾಡಿದೆ.
ಈ ಮೂಲಕ ರಾಮ್ ಚರಣ್-ಜೂ.ಎನ್ಟಿಆರ್ (RRR) ನಂತರ ಬಾಲಿವುಡ್ ಅಂಗಳದಲ್ಲಿ ಮೊದಲ ದಿನವೇ ಅತೀ ಹೆಚ್ಚು ಕಲೆಕ್ಷನ್ ಗಿಟ್ಟಿಸಿಕೊಂಡ ಟಾಲಿವುಡ್ ನಟ ಎಂಬ ಹೆಗ್ಗಳಿಕೆಗೆ ವಿಜಯ್ ದೇವರಕೊಂಡ ಪಾತ್ರರಾಗಿದ್ದಾರೆ. ಮೊದಲ ಎರಡು ದಿನಗಳಲ್ಲೇ ಸುಮಾರು 49 ಕೋಟಿ ಗಳಿಕೆ ಮಾಡಿರುವ ಲೈಗರ್ ವೀಕೆಂಡ್ನಲ್ಲಿ ಮತ್ತಷ್ಟು ಮೊತ್ತವನ್ನು ಬಾಚಿಕೊಳ್ಳುವ ನಿರೀಕ್ಷೆಯಲ್ಲಿದೆ. ಈ ಮೂಲಕ ಮೊದಲ ವಾರದಲ್ಲೇ 100 ಕೋಟಿ ಕ್ಲಬ್ ಸೇರಲಿದೆಯಾ ಕಾದು ನೋಡಬೇಕಿದೆ.
ಪಂಚಭಾಷೆಯಲ್ಲಿ ತೆರೆಕಂಡಿದ್ದ ‘ಲೈಗರ್’ ಚಿತ್ರಕ್ಕೆ ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನು ಚಿತ್ರಕ್ಕೆ ಪುರಿ ಜಗನ್ನಾಥ್-ಚಾರ್ಮಿ ಕೌರ್ ಹಾಗೂ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಬಂಡವಾಳ ಹೂಡಿದ್ದಾರೆ. ಹಾಗೆಯೇ ಲೈಗರ್ ಚಿತ್ರದ ಮತ್ತೊಂದು ವಿಶೇಷತೆ ಎಂದರೆ ಈ ಸಿನಿಮಾ ಮೂಲಕ ವಿಶ್ವ ವಿಖ್ಯಾತ ಬಾಕ್ಸರ್ ಮೈಕ್ ಟೈಸನ್ ಭಾರತೀಯ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವುದು. ಇದು ಕೂಡ ಚಿತ್ರದ ಹೈಪ್ ಹೆಚ್ಚಾಗಲು ಮುಖ್ಯ ಕಾರಣ ಎನ್ನಬಹುದು. ಒಟ್ಟಿನಲ್ಲಿ ಟಾಲಿವುಡ್ ಚಾಕೊಲೇಟ್ ಹೀರೋ ಆಗಿ ಮೆರೆದಿದ್ದ ವಿಜಯ್ ದೇವರಕೊಂಡ ಇದೀಗ ಬಾಕ್ಸರ್ ಆಗಿ ಬಾಕ್ಸಾಫೀಸ್ನಲ್ಲಿ ಎಷ್ಟು ಲೂಟಿ ಮಾಡುತ್ತಿರುವುದು ವಿಶೇಷ.