Harish Roy: ಕ್ಯಾನ್ಸರ್ ಬಗ್ಗೆ ಯಾರಿಗೂ ಗೊತ್ತಾಗದಂತೆ ಹರೀಶ್​ ರಾಯ್​ ಮುಚ್ಚಿಟ್ಟಿದ್ದೇಕೆ? ವಿವರ ನೀಡಿದ ‘ಕೆಜಿಎಫ್​’ ನಟ

Harish Roy: ಕ್ಯಾನ್ಸರ್ ಬಗ್ಗೆ ಯಾರಿಗೂ ಗೊತ್ತಾಗದಂತೆ ಹರೀಶ್​ ರಾಯ್​ ಮುಚ್ಚಿಟ್ಟಿದ್ದೇಕೆ? ವಿವರ ನೀಡಿದ ‘ಕೆಜಿಎಫ್​’ ನಟ

TV9 Web
| Updated By: ಮದನ್​ ಕುಮಾರ್​

Updated on: Aug 27, 2022 | 7:15 AM

Harish Roy Cancer: ಹರೀಶ್​ ರಾಯ್ ಅವರಿಗೆ ಕ್ಯಾನ್ಸರ್​ ಇರುವ ವಿಚಾರ ಚಿತ್ರರಂಗದವರಿಗೇ ತಿಳಿದಿರಲಿಲ್ಲ. ಈ ವಿಷಯದಲ್ಲಿ ಅವರು ಗುಟ್ಟು ಮಾಡಿದ್ದಕ್ಕೂ ಒಂದು ಕಾರಣ ಇದೆ.

ನಟ ಹರೀಶ್​ ರಾಯ್​ (Harish Roy) ಅವರು ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್​ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದರೆ ಚಿತ್ರರಂಗದವರಿಗೆ ಈ ವಿಷಯ ಗೊತ್ತಾಗಬಾರದು ಎಂದು ಅವರು ಗೌಪ್ಯತೆ ಕಾಯ್ದುಕೊಂಡಿದ್ದರು. ಈಗ ಪರಿಸ್ಥಿತಿ ಕೈಮೀರಿ ಹೋಗಿದ್ದು, ಮಾಧ್ಯಮಗಳ ಎದುರು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಕ್ಯಾನ್ಸರ್​ (Cancer) ಇರುವ ವಿಚಾರವನ್ನು ಅವರು ಮುಚ್ಚಿಟ್ಟಿದ್ದು ಯಾಕೆ? ಸಿನಿಮಾ ಆಫರ್​ಗಳು ತಪ್ಪಿಹೋಗಬಹುದು ಎಂಬ ಭಯ. ಹೌದು, ಅನಾರೋಗ್ಯ ಇದೆ ಎಂಬುದು ಗೊತ್ತಾದರೆ ಬರುವ ಆಫರ್​ಗಳು ನಿಂತು ಹೋಗುತ್ತವೆ ಎಂಬ ಭಯದಲ್ಲಿ ಅವರು ಈ ವಿಚಾರವನ್ನು ಮುಚ್ಚಿಟ್ಟಿದ್ದರು. ಈ ಬಗ್ಗೆ ಸ್ವತಃ ಹರೀಶ್​ ರಾಯ್​ ಅವರು ವಿವರ ನೀಡಿದ್ದಾರೆ.