SSLC ಪರೀಕ್ಷೆಗೆ ಸಿದ್ಧವಾಗುತ್ತಿದ್ದ ವಿದ್ಯಾರ್ಥಿಗೆ ಕೊರೊನಾ! ಮುಂದೇನು?
ಚಿಕ್ಕಮಗಳೂರು: ಕೊರೊನಾ ಮುಕ್ತವಾಗಿದ್ದ ಚಿಕ್ಕಮಗಳೂರು ಜಿಲ್ಲೆಗೆ ಮತ್ತೆ ಹೆಮ್ಮಾರಿ ಎಂಟ್ರಿ ಕೊಟ್ಟಿದೆ. ಜಿಲ್ಲೆಯ ಕಡೂರು ತಾಲೂಕಿನ ಹಿರೇನಲ್ಲೂರು ಹೋಬಳಿಯ ಕೆ.ದಾಸರಹಳ್ಳಿಯಲ್ಲಿ 15 ವರ್ಷದ ಬಾಲಕನಿಗೆ ಕೊರೊನ ಪಾಸಿಟಿವ್ ಬಂದಿದ್ದು, ಆತನಿಗೆ ಈ ಹೆಮ್ಮಾರಿ ಎಲ್ಲಿಂದ, ಯಾವ ಮೂಲದಿಂದ ಬಂತು ಅನ್ನೋದು ಇನ್ನು ಸ್ಪಷ್ಟವಾಗಿಲ್ಲ. 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕ, ಸರ್ಕಾರದ ಪರೀಕ್ಷೆಗೆ ದಿನಾಂಕ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಎಕ್ಸಾಮ್ ಗೆ ತಯಾರಿ ನಡೆಸುತ್ತಿದ್ದ. ಆದರೆ ಈ ಮಧ್ಯೆ ವಿದ್ಯಾರ್ಥಿಗೆ ಕೊರೊನಾ ಬಂದಿರೋದು, ವಿದ್ಯಾರ್ಥಿ ಸಮೂಹವನ್ನು ಕೂಡ ಕಂಗಾಲಾಗುವಂತೆ […]
ಚಿಕ್ಕಮಗಳೂರು: ಕೊರೊನಾ ಮುಕ್ತವಾಗಿದ್ದ ಚಿಕ್ಕಮಗಳೂರು ಜಿಲ್ಲೆಗೆ ಮತ್ತೆ ಹೆಮ್ಮಾರಿ ಎಂಟ್ರಿ ಕೊಟ್ಟಿದೆ. ಜಿಲ್ಲೆಯ ಕಡೂರು ತಾಲೂಕಿನ ಹಿರೇನಲ್ಲೂರು ಹೋಬಳಿಯ ಕೆ.ದಾಸರಹಳ್ಳಿಯಲ್ಲಿ 15 ವರ್ಷದ ಬಾಲಕನಿಗೆ ಕೊರೊನ ಪಾಸಿಟಿವ್ ಬಂದಿದ್ದು, ಆತನಿಗೆ ಈ ಹೆಮ್ಮಾರಿ ಎಲ್ಲಿಂದ, ಯಾವ ಮೂಲದಿಂದ ಬಂತು ಅನ್ನೋದು ಇನ್ನು ಸ್ಪಷ್ಟವಾಗಿಲ್ಲ.
10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕ, ಸರ್ಕಾರದ ಪರೀಕ್ಷೆಗೆ ದಿನಾಂಕ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಎಕ್ಸಾಮ್ ಗೆ ತಯಾರಿ ನಡೆಸುತ್ತಿದ್ದ. ಆದರೆ ಈ ಮಧ್ಯೆ ವಿದ್ಯಾರ್ಥಿಗೆ ಕೊರೊನಾ ಬಂದಿರೋದು, ವಿದ್ಯಾರ್ಥಿ ಸಮೂಹವನ್ನು ಕೂಡ ಕಂಗಾಲಾಗುವಂತೆ ಮಾಡಿದೆ. ಇನ್ನೂ ಕೊರೊನ ಪಾಸಿಟಿವ್ ಬಂದಿರೋ ಬಾಲಕನಿಗೆ ಜಿಲ್ಲಾ ಕೇಂದ್ರದ ಕೋವಿಡ್ 19 ಆಸ್ಪತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೆ.ದಾಸರಹಳ್ಳಿ ಗ್ರಾಮ ಸೀಲ್‍ಡೌನ್ ಈಗಾಗಲೇ ಕೊರೊನಾ ಪಾಸಿಟಿವ್ ಬಾಲಕನ ಪ್ರೈಮರಿ ಕಾಂಟಾಕ್ಟ್ನಲ್ಲಿದ್ದ ಸುಮಾರು 55ಕ್ಕೂ ಹೆಚ್ಚಿನ ಜನರನ್ನ ಕ್ವಾರಂಟೈನ್‍ಗೆ ಒಳಪಡಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೆ.ದಾಸರಹಳ್ಳಿ ಗ್ರಾಮವನ್ನ ಸೀಲ್‍ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಮುಂಬೈನಿಂದ ಬಂದವರನ್ನ ಹೊರತುಪಡಿಸಿ ಯಾರಿಗೂ ಸೋಂಕು ಇರಲಿಲ್ಲ. ಕಡೂರು ತಾಲೂಕಿನಲ್ಲೂ ಯಾರಿಗೂ ಈ ಮಹಾಮಾರಿ ಬಂದಿರಲಿಲ್ಲ. ಈ ಬಾಲಕನಿಗೆ ಕೊರೊನ ಎಲ್ಲಿಂದ ಬಂತು ಎಂದು ಸ್ಥಳೀಯರ ಜೊತೆ ಜಿಲ್ಲಾಡಳಿತ ಕೂಡ ತಲೆಕೆಡಿಸಿಕೊಂಡಿದೆ.
ಕೊರೊನ ಆರಂಭವಾದ 55 ದಿನಗಳ ಬಳಿಕ ಮೊದಲ ಬಾರಿಗೆ ಮೇ 19ರಂದು ಕಾಫಿನಾಡಿನಲ್ಲಿ 2 ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, ಫಸ್ಟ್ ಟೈಂ ಜಿಲ್ಲೆಯಲ್ಲಿ ಕಾಣಿಸಿಕೊಂಡು ಮೂಡಿಗೆರೆ ವೈದ್ಯ ಹಾಗೂ ತರೀಕರೆ ಗರ್ಭಿಣಿಯಲ್ಲಿ ಸೋಂಕಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು. ಅದಾದ ಬಳಿಕ ಕಾಣಿಸಿಕೊಂಡ 16 ಪ್ರಕರಣಗಳು ದೆಹಲಿ, ಮುಂಬೈನಿಂದ ವಾಪಸ್ಸಾದವರು. ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 16 ಮಂದಿ ಗುಣಮುಖರಾಗಿ ಮನೆ ಸೇರಿದ್ದರು.
ಆದರೆ, ಈಗ ಒಂದೂ ಸಕ್ರಿಯ ಪ್ರಕರಣಗಳಿಲ್ಲದ ಜಿಲ್ಲೆಯಲ್ಲಿ ಕಡೂರಿನ ಈ ಬಾಲಕನಿಗೆ ಸೋಂಕು ಎಲ್ಲಿಂದ ಬಂತು ಅನ್ನೋದು ಎಲ್ಲರಿಗೂ ತಲೆನೋವು ತರಿಸಿದೆ. ಈಗಾಗಲೇ ಜಿಲ್ಲಾದ್ಯಂತ ಕೊರೊನ ನಿಯಂತ್ರಣಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.
Published On - 10:57 am, Fri, 12 June 20