ಕಲಬುರಗಿ: ಸೇವಾ ಹಿರಿತನ ಇರುವ ಪುರುಷ ASI ಗಳಿಗೆ PSI ಹುದ್ದೆಗೆ ಬಡ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿ DGP, IG ಹಾಗೂ SP ಮೇಲೆ ನ್ಯಾಯಾಂಗ ನಿಂದನೆ ತೂಗುಕತ್ತಿಯಲ್ಲಿದೆ. ಸೇವಾ ಹಿರಿತನ ಹೊಂದಿರೋ ASI ಗಳಿಗೆ PSI ಹುದ್ದೆಗೆ ಬಡ್ತಿ ಮಾಡಲು ಮೀನಮೇಷ ಎಣಿಸಲಾಗುತ್ತಿದೆ. ಹೀಗಾಗಿ ಸೇವಾ ಹಿರಿತನದ ಪುರುಷ ASIಗಳಿಗೆ ಬಡ್ತಿ ನೀಡದ ಹಿನ್ನೆಲೆಯಲ್ಲಿ ಕೆಎಟಿಯಿಂದ ಡಿಜಿ, ಐಜಿ, ಎಸ್ಪಿಗೆ ನೋಟಿಸ್ ಜಾರಿಯಾಗಿದೆ. ಕೆಎಟಿ ಮತ್ತು ಸರ್ಕಾರ ಸೂಚಿಸಿದ್ದರೂ ಗೃಹ ಇಲಾಖೆ ಬಡ್ತಿ ನೀಡಿಲ್ಲ. ಹೀಗಾಗಿ ಗೃಹ ಇಲಾಖೆ ವಿರುದ್ಧ ಕಲಬುರಗಿ ಕೆಎಟಿ ಪೀಠದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದೂರು ದಾಖಲಾಗಿದೆ.
ಕಲಬುರಗಿ ಕೆಎಟಿಯಿಂದ ಡಿಜಿ & ಐಜಿಪಿ ಪ್ರವೀಣ್ ಸೂದ್, ಈಶಾನ್ಯ ವಲಯ ಐಜಿಪಿ ಮನೀಷ್ ಖರ್ಬಿಕರ್, ಎಸ್ಪಿ ಡಾ.ಸಿಮಿ ಮರಿಯಮ್ ಜಾರ್ಜ್ಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ಹಿಂದೆ 1984-1992ರಲ್ಲಿ ಪೊಲೀಸ್ ಆಗಿ ನೇಮಕವಾಗಿದ್ದವರ ಬಡ್ತಿ ಗೊಂದಲವಿದೆ. ಸದ್ಯ ರಾಜ್ಯದಲ್ಲಿ 6000 ಸಿಬ್ಬಂದಿ ASI ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1993-1997ರಲ್ಲಿ ನೇಮಕವಾದ ಮಹಿಳಾ ಪೊಲೀಸರಿಗೆ ಮಹಿಳಾ ಪಿಎಸ್‌ಐ ಹುದ್ದೆಗೆ ಗೃಹ ಇಲಾಖೆ ಬಡ್ತಿ ನೀಡಿತ್ತು. ಹಾಗಾಗಿ ತಮಗಿಂತ ಕಿರಿಯರಿಗೆ ಬಡ್ತಿ ನೀಡಿದ್ದ ಹಿನ್ನೆಲೆಯಲ್ಲಿ ASIಗಳು ಕೆಎಟಿ ಮೊರೆ ಹೋಗಿದ್ದರು.
ಕಲಬುರಗಿ ಕೆಎಟಿ ಪೀಠ 2020ರ ಆಗಸ್ಟ್ನಲ್ಲಿಯೇ ಪುರುಷ ASIಗಳಿಗೆ ಬಡ್ತಿ ನೀಡುವಂತೆ ಆದೇಶ ಹೊರಡಿಸಿತ್ತು. ಆದ್ರೆ ಗೃಹ ಇಲಾಖೆ ಆದೇಶವನ್ನು ತಳ್ಳಿ ಹಾಕಿದೆ. ಹೀಗಾಗಿ ಗೃಹ ಇಲಾಖೆ ವಿರುದ್ಧ ಕಲಬುರಗಿ ಕೆಎಟಿ ಪೀಠದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿದೆ. ಹಾಗೂ ಕೆಎಟಿಯಿಂದ ಡಿಜಿ, ಐಜಿ, ಎಸ್ಪಿಗೆ ನೋಟಿಸ್ ಜಾರಿಯಾಗಿದೆ.
ಇದನ್ನೂ ಓದಿ: ನಿವೃತ್ತಿಯ ಸನಿಹಕ್ಕೆ ಮುಖ್ಯ ಕಾರ್ಯದರ್ಶಿ TM ವಿಜಯಭಾಸ್ಕರ್: ಮುಂದಿನ CS ಯಾರು?