Pogaru: ಫೆ.19ರಂದು 1200 ಥಿಯೇಟರ್​​ಗಳಲ್ಲಿ ಬಿಡುಗಡೆಯಾಗಲಿದೆ ಆ್ಯಕ್ಷನ್​ ಪ್ರಿನ್ಸ್​ ಧ್ರುವಾ ಸರ್ಜಾ ಅಭಿನಯದ ಪೊಗರು

Dhruva Sarja ರ ಪೊಗರು ಔಟ್​ ಆ್ಯಂಡ್​ ಔಟ್​ ಮಾಸ್​ ಎಂಟರ್​ಟೈನರ್​ ಸಿನಿಮಾ ಆಗಿದ್ದು, ಧ್ರುವಸರ್ಜಾ ಕದಂಬ ಬಾಹುಗಳನ್ನು ಪ್ರದರ್ಶಿಸುತ್ತ ನಟೋರಿಯಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

Pogaru:  ಫೆ.19ರಂದು 1200 ಥಿಯೇಟರ್​​ಗಳಲ್ಲಿ ಬಿಡುಗಡೆಯಾಗಲಿದೆ ಆ್ಯಕ್ಷನ್​ ಪ್ರಿನ್ಸ್​ ಧ್ರುವಾ ಸರ್ಜಾ ಅಭಿನಯದ ಪೊಗರು
ಪೊಗರು ಸಿನಿಮಾದ ಹಾಡಿನ ದೃಶ್ಯ
Follow us
Lakshmi Hegde
| Updated By: Digi Tech Desk

Updated on:Feb 18, 2021 | 7:21 PM

ಬೆಂಗಳೂರು: ನಾಳೆ ಫೆಬ್ರವರಿ 19 ರಥಸಪ್ತಮಿ. ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ (Dhruva Sarja) ಅಭಿಮಾನಿಗಳಿಗೆ ವಿಶೇಷ ದಿನ.. ಕಾರಣ ಧ್ರುವ ಸರ್ಜಾ ಅಭಿನಯದ, ಬಹುನಿರೀಕ್ಷಿತ ಪೊಗರು (Pogaru) ಸಿನಿಮಾ ನಾಳೆ ಬಿಡುಗಡೆಯಾಗಲಿದೆ. ಕೊರೊನಾ ಲಾಕ್​ಡೌನ್ ನಂತರ ಸ್ಯಾಂಡಲ್​ವುಡ್​ನಲ್ಲಿ ಸಿನಿಜಾತ್ರೆ ಶುರುವಾಗಿದೆ. ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ಪೊಗದಸ್ತಾಗಿ ಬಿಗ್ ಸ್ಕ್ರೀನ್​ಗೆ ಎಂಟ್ರಿ ಕೊಡೋಕೆ ಕ್ಷಣಗಣನೆ ಶುರುವಾಗಿದೆ. ಇನ್ನು ಅಭಿಮಾನಿಗಳಂತೂ ಫುಲ್​ ಉತ್ಸಾಹದಲ್ಲಿದ್ದು, ತಮ್ಮ ನೆಚ್ಚಿನ ನಟನಿಗೆ ಆರತಿ ಎತ್ತಿ, ಪಟಾಕಿ ಹೊಡೆದು ಸಂಭ್ರಮಿಸಲು ರೆಡಿ ಆಗಿದ್ದಾರೆ. ಒಟ್ಟಿನಲ್ಲಿ ಸ್ಯಾಂಡಲ್​ವುಡ್​ನಲ್ಲಿ ಪೊಗರು ಆರ್ಭಟ ಭರ್ಜರಿಯಾಗಿದ್ದು, ಸಿನಿಮಾದ ಓಪನಿಂಗ್ ಹೇಗಿರತ್ತೆ? ಹೈಲೆಟ್ಸ್​ಗಳೇನು ನೋಡೋಣ..

ಇನ್ನು ಧ್ರುವ ಸರ್ಜಾ ಭರ್ಜರಿಯ ಬ್ಲಾಕ್​ ಬಸ್ಟರ್ ಯಶಸ್ಸಿನ ನಂತರ, ಮೂರು ವರ್ಷಗಳ ಬಳಿಕ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ. ಕಳೆದ 3ವರ್ಷಗಿಂದ ಧ್ರುವ ಸರ್ಜಾ ಸಿನಿಮಾ ಇಲ್ಲದೆ ಬೇಸರಗೊಂಡಿದ್ದ ಫ್ಯಾನ್ಸ್​ ನಾಳೆ ಥಿಯೇಟರ್​​ಗಳಲ್ಲಿ ಪೊಗರು ಉತ್ಸವ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹಲವು ಥಿಯೇಟರ್​ಗಳು ಈಗಾಗಲೇ ಅಲಂಕಾರಗೊಂಡಿವೆ.

1200 ಥಿಯೇಟರ್​​ಗಳಲ್ಲಿ ಪೊಗರು ಆರ್ಭಟ ನಾಳೆ ಒಟ್ಟು 1200 ಥಿಯೇಟರ್​ಗಳಲ್ಲಿ ಪೊಗರು ಸಿನಿಮಾ ಬಿಡುಗಡೆಯಾಗಲಿದ್ದು, 15 ಚಿತ್ರಮಂದಿರಗಳಲ್ಲಿ ಸೂರ್ಯ ಹುಟ್ಟುವ ಮೊದಲೇ ಶೋ ಪ್ರಾರಂಭವಾಗಲಿದೆ. ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿರುವ ಪೊಗರು, ಆಂಧ್ರಪ್ರದೇಶ-ತಮಿಳುನಾಡಿನಲ್ಲೂ ಆರ್ಭಟಿಸಲಿದೆ. ನಗರದ ಮುಖ್ಯ ಥಿಯೇಟರ್​ ನರ್ತಕಿಯಲ್ಲಿ ನಾಳೆ ಬೆಳಗ್ಗೆ 10.30ರಿಂದ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಮತ್ತು ಅವರ ಮಾವ ಆ್ಯಕ್ಷನ್​ ಕಿಂಗ್ ಅರ್ಜುನ್ ಸರ್ಜಾ ಪ್ರೇಕ್ಷಕರ ಜತೆ ಕುಳಿತು ಸಿನಿಮಾ ನೋಡಲಿದ್ದಾರೆ.

Pgaru Cinema

ಪೊಗರು ಸಿನಿಮಾದ ಒಂದು ದೃಶ್ಯ

ಸಿನಿಮಾಗಾಗಿ ಧ್ರುವ ಸರ್ಜಾ ಡೆಡಿಕೇಶನ್ ಹೇಗಿತ್ತು? ಪೊಗರು ಔಟ್​ ಆ್ಯಂಡ್​ ಔಟ್​ ಮಾಸ್​ ಎಂಟರ್​ಟೈನರ್​ ಸಿನಿಮಾ ಆಗಿದ್ದು, ಧ್ರುವಸರ್ಜಾ ಕದಂಬ ಬಾಹುಗಳನ್ನು ಪ್ರದರ್ಶಿಸುತ್ತ ನಟೋರಿಯಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಪೊಗರು ಅನ್ನೋ ಟೈಟಲ್​​ನಲ್ಲೇ ಧಮ್​ ಇದ್ದು, ಈ ಸಿನಿಮಾ ಧೂಳೆಬ್ಬಿಸುವುದರಲ್ಲಿ ಅನುಮಾನವೇ ಇಲ್ಲ ಎಂಬುದು ಈಗಾಗಲೇ ಬಿಡುಗಡೆಯಾದ ಹಾಡು, ಡೈಲಾಗ್​ ಟ್ರೇಲರ್​ನಿಂದ ಗೊತ್ತಾಗುತ್ತಿದೆ. ಬಾಸು ಖರಾಬು ಹಾಡಿನಲ್ಲಿ ಧ್ರುವ ಸರ್ಜಾ ಜಬರ್​ದಸ್ತ್​ ಸ್ಟೆಪ್​ ಹಾಕಿದ್ದು, ಈ ಹಾಡು ಯೂಟ್ಯೂಬ್​ನಲ್ಲಿ ಭರ್ಜರಿ ವೀವ್ಸ್​ ಪಡೆದಿದೆ. ಡೈಲಾಗ್​ ಟ್ರೇಲರ್​ಗೂ ಅಭಿಮಾನಿಗಳು ಸಿಕ್ಕಾಪಟೆ ಫಿದಾ ಆಗಿದ್ದಾರೆ.

Dhruva Sarja With Bodybuilders in Pogaru

ಅಂತಾರಾಷ್ಟ್ರೀಯ ಮಟ್ಟದ ಬಾಡಿಬಿಲ್ಡರ್​ಗಳೊಂದಿಗೆ ಧ್ರುವಸರ್ಜಾ

ಪೊಗರು ಸಿನಿಮಾದ ಮುಖ್ಯ ಹೈಲೆಟ್ ಅಂದರೆ ಧ್ರುವ ಸರ್ಜಾ. ಅವರು ಈ ಸಿನಿಮಾಗಾಗಿ ನೀಡಿರೋ ಡೆಡಿಕೇಶನ್ ಮತ್ತು ಕಮಿಟ್​ಮೆಂಟ್​. ಕಟ್ಟು ಮಸ್ತಾದ ಬಾಡಿ ಹೊಂದಿರುವ ಧ್ರುವ ಸರ್ಜಾ, ಸ್ಕೂಲ್ ಬಾಯ್​ ಪಾತ್ರಕ್ಕಾಗಿ 35 ಕೆಜಿ ತೂಕ ಕಡಿಮೆಗೊಳಿಸಿ, ನಂತರ ಹೆಚ್ಚು ಮಾಡಿಕೊಂಡಿದ್ದರು. ಇನ್ನು ಪೊಗರು ನಾಯಕಿ ನ್ಯಾಶನಲ್​ ಕ್ರಷ್​ ರಷ್ಮಿಕಾ ಮಂದಣ್ಣ ಮೊದಲೇ ಲಕ್ಕಿ ಚಾರ್ಮ್​. ಇವರಿಬ್ಬರ ಜೋಡಿ ಮ್ಯಾಜಿಕ್​ ಮಾಡೋದ್ರಲ್ಲಿ ಅನುಮಾನವೇ ಇಲ್ಲ.

ಹಾಗೇ, ಪೊಗರು ಚಿತ್ರದ ಮತ್ತೊಂದು ವಿಶೇಷ ಎಂದರೆ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಅಂತಾರಾಷ್ಟ್ರೀಯ ಬಾಡಿಬಿಲ್ಡರ್​ಗಳಾದ ಮೊರ್ಗನ್​, ಆಸ್ಟೆ, ಕೈ ಗ್ರೀನ್, ಜಾನ್​ ಲೂಕಾಸ್​. ಇವರೆಲ್ಲ ಕ್ಲೈಮ್ಯಾಕ್ಸ್​ ಆ್ಯಕ್ಷನ್​ ಸೀನ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಯಾಂಡಲ್​ವುಡ್​ನ ಖಳನಟನ ಪಾತ್ರದಲ್ಲಿ ಮಿಂಚಲಿದ್ದಾರೆ. ಸ್ಯಾಂಡಲ್​​ವುಡ್​ ಡಾಲಿ ಖಳನಟನ ಪಾತ್ರ ನಿರ್ವಹಿಸಿದ್ದಾರೆ. ನಟ ರಾಘವೇಂದ್ರ ರಾಜ್​ಕುಮಾರ್​ ಅವರು ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ. ಈಗಲೇ ಪೊಗರು ಭರ್ಜರಿ ಹವಾ ಸೃಷ್ಟಿಸಿದ್ದು, ಸ್ಯಾಂಡಲ್​ವುಡ್​, ಟಾಲಿವುಡ್​, ಕಾಲಿವುಡ್ ಬಾಕ್ಸ್​ ಆಫೀಸ್​ಗಳಲ್ಲಿ ಯಶ ಗಳಿಸುವ ನಿರೀಕ್ಷೆ ಹುಟ್ಟಿಸಿದೆ.

Pogaru Dhruva Sarja Raghavendra Rajkumar

ಪೊಗರು ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡ ರಾಘವೇಂದ್ರ ರಾಜ್​ಕುಮಾರ್

Published On - 1:45 pm, Thu, 18 February 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್