ಸಂಸ್ಕೃತ ಪಾಠಶಾಲೆ ಕಾರ್ಯದರ್ಶಿ ಕೊಲೆ ಕೇಸ್​: ಮೈಸೂರು ಪೊಲೀಸರ ಭರ್ಜರಿ ಬೇಟೆ, ಗಾಯಕಿ ಅನನ್ಯಾ ಭಟ್ ತಂದೆ ಸೆರೆ

ಮೈಸೂರು: ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ಖ್ಯಾತ ಗಾಯಕಿ ಅನನ್ಯಾ ಭಟ್ ತಂದೆ ವಿಶ್ವನಾಥ ಭಟ್(52) ಬಂಧನವಾಗಿದೆ. ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿಯಾಗಿದ್ದ ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಕೊಲೆ ಕೇಸ್​ನಲ್ಲಿ ವಿಶ್ವನಾಥ ಭಟ್ ಅರೆಸ್ಟ್​ ಆಗಿದ್ದಾರೆ. ಪರಶಿವಮೂರ್ತಿರನ್ನು ಕೊಲೆಮಾಡಲು ವಿಶ್ವನಾಥ ಭಟ್ 7 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು ಎಂದು ಹೇಳಲಾಗಿದೆ. ಪರಶಿವಮೂರ್ತಿಯನ್ನು ಕೊಲೆಮಾಡಲು ವಿಶ್ವನಾಥ್ ಭಟ್ ಇಬ್ಬರ ಸಹಾಯ ಪಡೆದಿದ್ದರು. ವಿಶ್ವನಾಥ್ ಭಟ್‌ಗೆ ಸಹ ಶಿಕ್ಷಕ ಪರಶಿವ ಹಾಗೂ ಸ್ನೇಹಿತ್ ಸಿದ್ದರಾಜು ಸಾಥ್ […]

ಸಂಸ್ಕೃತ ಪಾಠಶಾಲೆ ಕಾರ್ಯದರ್ಶಿ ಕೊಲೆ ಕೇಸ್​: ಮೈಸೂರು ಪೊಲೀಸರ ಭರ್ಜರಿ ಬೇಟೆ, ಗಾಯಕಿ ಅನನ್ಯಾ ಭಟ್ ತಂದೆ ಸೆರೆ
Edited By:

Updated on: Oct 28, 2020 | 1:13 PM

ಮೈಸೂರು: ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ಖ್ಯಾತ ಗಾಯಕಿ ಅನನ್ಯಾ ಭಟ್ ತಂದೆ ವಿಶ್ವನಾಥ ಭಟ್(52) ಬಂಧನವಾಗಿದೆ. ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿಯಾಗಿದ್ದ ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಕೊಲೆ ಕೇಸ್​ನಲ್ಲಿ ವಿಶ್ವನಾಥ ಭಟ್ ಅರೆಸ್ಟ್​ ಆಗಿದ್ದಾರೆ.

ಪರಶಿವಮೂರ್ತಿರನ್ನು ಕೊಲೆಮಾಡಲು ವಿಶ್ವನಾಥ ಭಟ್ 7 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು ಎಂದು ಹೇಳಲಾಗಿದೆ. ಪರಶಿವಮೂರ್ತಿಯನ್ನು ಕೊಲೆಮಾಡಲು ವಿಶ್ವನಾಥ್ ಭಟ್ ಇಬ್ಬರ ಸಹಾಯ ಪಡೆದಿದ್ದರು. ವಿಶ್ವನಾಥ್ ಭಟ್‌ಗೆ ಸಹ ಶಿಕ್ಷಕ ಪರಶಿವ ಹಾಗೂ ಸ್ನೇಹಿತ್ ಸಿದ್ದರಾಜು ಸಾಥ್ ಕೊಟ್ಟಿದ್ದರು ಎಂದು ಸಹ ತಿಳಿದುಬಂದಿದೆ.

ನಿರಂಜನ್ ಮತ್ತು ನಾಗೇಶ್ ಸುಪಾರಿ ಪಡೆದು ಕಾರ್ಯದರ್ಶಿಯ ಕೊಲೆ ಮಾಡಿದ್ದರು. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೊಲೆಗೆ ಪರಶಿವಮೂರ್ತಿಯ ಟಾರ್ಚರ್ ಕಾರಣ
ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿಯಾಗಿದ್ದ ಕೊಲೆಯಾದ ಪರಶಿವಮೂರ್ತಿ ಪ್ರತಿ ತಿಂಗಳು ಕಮಿಷನ್‌ಗಾಗಿ ವಿಶ್ವನಾಥ ಭಟ್​ರನ್ನು ಪೀಡಿಸುತ್ತಿದ್ದರು ಎಂದು ಹೇಳಲಾಗಿದೆ. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ಸಹ ನೀಡುತ್ತಿದ್ದರಂತೆ. ಇದರಿಂದ ಮನನೊಂದು ಅನನ್ಯಾ ಭಟ್ ತಂದೆ ವಿಶ್ವನಾಥ್ ಭಟ್‌ರಿಂದ ಕೊಲೆಗೆ ಸುಪಾರಿ ನೀಡಲಾಗಿತ್ತು.
ಪ್ರಾಂಶುಪಾಲರ ಕಿರುಕುಳ ತಾಳಲಾರದೆ ಕೊಲೆ; ಸುಪಾರಿ ಕೊಟ್ಟಿದ್ದ ಸಹ ಶಿಕ್ಷಕ, ಹಂತಕರು ಅರೆಸ್ಟ್​

Published On - 12:58 pm, Wed, 28 October 20