ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ NIA ಬೇಟೆ: ಇಬ್ಬರು ಶಂಕಿತ ಉಗ್ರರು ಅರೆಸ್ಟ್
ಬೆಂಗಳೂರು: ನಗರದಲ್ಲಿ ಶಂಕಿತರಿಬ್ಬರನ್ನು NIA ತಂಡವು ಅರೆಸ್ಟ್ ಮಾಡಿದೆ. ದೆಹಲಿಯಿಂದ ಆಗಮಿಸಿದ NIA ತಂಡವು ಇಬ್ಬರು ಶಂಕಿತ ಉಗ್ರರನನ್ನು ಸೆರೆಹಿಡಿದಿದ್ದಾರೆ. ಥಣಿಸಂದ್ರದಲ್ಲಿ ಶಂಕಿತರಿಬ್ಬರ ಮನೆ ಮೇಲೆ ತಂಡ ದಾಳಿ ನಡೆಸಿದೆ. NIA ತಂಡವು ಈ ಹಿಂದೆ ಡಾ.ಬ್ರೇವ್ ಬಸವನಗುಡಿ ಅಲಿಯಾಸ್ ಅಬ್ದುಲ್ ರೆಹಮಾನ್, ಅಬ್ದುಲ್ ಖಾದರ್ ಮತ್ತು ಇರ್ಫಾನ್ ನಾಸೀರ್ನನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳು 7 ಯುವಕರನ್ನ ಸಿರಿಯಾಗೆ ಕಳಿಸಿದ್ದರು ಎಂದು ತನಿಖೆ ವೇಳೆ ಬಹಿರಂಗವಾಗಿತ್ತು. ಈ ಸಂಬಂಧ ತನಿಖೆ ನಡೆಸಿದ NIA ತಂಡ ದಾಳಿ ಮುಂದುವರಿಸಿದೆ.

ಪ್ರಾತಿನಿಧಿಕ ಚಿತ್ರ
ಬೆಂಗಳೂರು: ನಗರದಲ್ಲಿ ಶಂಕಿತರಿಬ್ಬರನ್ನು NIA ತಂಡವು ಅರೆಸ್ಟ್ ಮಾಡಿದೆ. ದೆಹಲಿಯಿಂದ ಆಗಮಿಸಿದ NIA ತಂಡವು ಇಬ್ಬರು ಶಂಕಿತ ಉಗ್ರರನನ್ನು ಸೆರೆಹಿಡಿದಿದ್ದಾರೆ.
ಥಣಿಸಂದ್ರದಲ್ಲಿ ಶಂಕಿತರಿಬ್ಬರ ಮನೆ ಮೇಲೆ ತಂಡ ದಾಳಿ ನಡೆಸಿದೆ. NIA ತಂಡವು ಈ ಹಿಂದೆ ಡಾ.ಬ್ರೇವ್ ಬಸವನಗುಡಿ ಅಲಿಯಾಸ್ ಅಬ್ದುಲ್ ರೆಹಮಾನ್, ಅಬ್ದುಲ್ ಖಾದರ್ ಮತ್ತು ಇರ್ಫಾನ್ ನಾಸೀರ್ನನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳು 7 ಯುವಕರನ್ನ ಸಿರಿಯಾಗೆ ಕಳಿಸಿದ್ದರು ಎಂದು ತನಿಖೆ ವೇಳೆ ಬಹಿರಂಗವಾಗಿತ್ತು. ಈ ಸಂಬಂಧ ತನಿಖೆ ನಡೆಸಿದ NIA ತಂಡ ದಾಳಿ ಮುಂದುವರಿಸಿದೆ.