ಅರಮನೆ ಆವರಣದಲ್ಲಿ ರಾಜವಂಶಸ್ಥ ಯದುವೀರ್, ಪುಟ್ಟ ಆದ್ಯವೀರ್ ರೌಂಡ್ಸ್!
ಮೈಸೂರು: ದಸರಾ ಹಬ್ಬದಾಚರಣೆ ಮತ್ತು ಸಾಂಪ್ರದಾಯಿಕ ಪೂಜೆಗಳನ್ನು ನೆರವೇರಿಸಿದ ಬಳಿಕ ಕೊಂಚ ರಿಲಾಕ್ಸ್ ಆಗಿದ್ದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಮ್ಮ ಪುತ್ರನೊಟ್ಟಿಗೆ ಅರಮನೆ ಆವರಣದಲ್ಲಿದ್ದ ಗಜಪಡೆಯ ವೀಕ್ಷಣೆ ಮಾಡಿದರು. ಪುತ್ರ ಆದ್ಯವೀರ್ ಜೊತೆ ತಮ್ಮ BMW ಕಾರ್ನಲ್ಲಿ ರೌಂಡ್ಸ್ ಹಾಕಿದ ಯದುವೀರ್ ಮೊದಲು ಅರಮನೆಯ ಕೋಡಿ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಗಜಪಡೆಯ ಸಾರಥಿ ಅಭಿಮನ್ಯು ಹಾಗೂ ಇತರೆ ಆನೆಗಳಿರುವ ಬಿಡಾರಕ್ಕೆ ಬಂದು ಅವುಗಳೊಂದಿಗೆ ಪೋಟೋ ಕ್ಲಿಕ್ಕಿಸಿಕೊಂಡರು. ಈ ಸಂದರ್ಭದಲ್ಲಿ ಅಭಿಮನ್ಯು […]

ಮೈಸೂರು: ದಸರಾ ಹಬ್ಬದಾಚರಣೆ ಮತ್ತು ಸಾಂಪ್ರದಾಯಿಕ ಪೂಜೆಗಳನ್ನು ನೆರವೇರಿಸಿದ ಬಳಿಕ ಕೊಂಚ ರಿಲಾಕ್ಸ್ ಆಗಿದ್ದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಮ್ಮ ಪುತ್ರನೊಟ್ಟಿಗೆ ಅರಮನೆ ಆವರಣದಲ್ಲಿದ್ದ ಗಜಪಡೆಯ ವೀಕ್ಷಣೆ ಮಾಡಿದರು.
ಪುತ್ರ ಆದ್ಯವೀರ್ ಜೊತೆ ತಮ್ಮ BMW ಕಾರ್ನಲ್ಲಿ ರೌಂಡ್ಸ್ ಹಾಕಿದ ಯದುವೀರ್ ಮೊದಲು ಅರಮನೆಯ ಕೋಡಿ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಗಜಪಡೆಯ ಸಾರಥಿ ಅಭಿಮನ್ಯು ಹಾಗೂ ಇತರೆ ಆನೆಗಳಿರುವ ಬಿಡಾರಕ್ಕೆ ಬಂದು ಅವುಗಳೊಂದಿಗೆ ಪೋಟೋ ಕ್ಲಿಕ್ಕಿಸಿಕೊಂಡರು. ಈ ಸಂದರ್ಭದಲ್ಲಿ ಅಭಿಮನ್ಯು ಆನೆಯನ್ನು ಮುಟ್ಟಿ ಪುಟ್ಟ ಆದ್ಯವೀರ್ ಸಂತಸ ತೋರಿದರು.