ಪ್ರವಾಹದ ಭೀತಿಯಲ್ಲಿ ದಕ್ಷಿಣ ಕಾಶಿ ನಂಜನಗೂಡು, ಮಿಂದೇಳುವವರ ಹುಚ್ಚು ಸಾಹಸಕ್ಕೆ ಕಡಿವಾಣವಿಲ್ಲ

ಮೈಸೂರು: ಕಬಿನಿ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದ್ದು, ಕಬಿನಿ ಜಲಾಶಯದಿಂದ ಹೊರಹರಿವಿನ ಪ್ರಮಾಣ ಹೆಚ್ಚಳ ಹಿನ್ನೆಲೆಯಲ್ಲಿ ಕಪಿಲೆ ತುಂಬಿ ಹರಿಯುತ್ತಿದೆ. ಇದರಿಂದ ನಂಜನಗೂಡು ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿದ್ದು, ದಕ್ಷಿಣ ಕಾಶಿ ನಂಜನಗೂಡು ಪ್ರವಾಹದ ಭೀತಿಯಲ್ಲಿದೆ. ಸ್ನಾನಘಟ್ಟ, ಆಂಜನೇಯ ಸನ್ನಿಧಿ ಮಂಟಪ ಬಟ್ಟೆ ಬದಲಾಯಿಸುವ ಸ್ಥಳ, ಶೌಚಾಲಯಗಳು ಸಂಪೂರ್ಣ ಜಲಾವೃತವಾಗಿವೆ. ಐತಿಹಾಸಿಕ ಹದಿನಾರು ಕಾಲು ಮಂಟಪ ಭಾಗಶಃ ಮುಳುಗಡೆಯಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ಹೆಚ್ಚು ಪ್ರವಾಹ ಬರಬಹುದು ಎಂಬ ಸೂಚನೆಯಿದೆ. ಹಾಗಾಗಿ ಸುರಕ್ಷಿತ […]

ಪ್ರವಾಹದ ಭೀತಿಯಲ್ಲಿ ದಕ್ಷಿಣ ಕಾಶಿ ನಂಜನಗೂಡು, ಮಿಂದೇಳುವವರ ಹುಚ್ಚು ಸಾಹಸಕ್ಕೆ ಕಡಿವಾಣವಿಲ್ಲ

Updated on: Aug 06, 2020 | 11:05 AM

ಮೈಸೂರು: ಕಬಿನಿ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದ್ದು, ಕಬಿನಿ ಜಲಾಶಯದಿಂದ ಹೊರಹರಿವಿನ ಪ್ರಮಾಣ ಹೆಚ್ಚಳ ಹಿನ್ನೆಲೆಯಲ್ಲಿ ಕಪಿಲೆ ತುಂಬಿ ಹರಿಯುತ್ತಿದೆ. ಇದರಿಂದ ನಂಜನಗೂಡು ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿದ್ದು, ದಕ್ಷಿಣ ಕಾಶಿ ನಂಜನಗೂಡು ಪ್ರವಾಹದ ಭೀತಿಯಲ್ಲಿದೆ.

ಸ್ನಾನಘಟ್ಟ, ಆಂಜನೇಯ ಸನ್ನಿಧಿ ಮಂಟಪ ಬಟ್ಟೆ ಬದಲಾಯಿಸುವ ಸ್ಥಳ, ಶೌಚಾಲಯಗಳು ಸಂಪೂರ್ಣ ಜಲಾವೃತವಾಗಿವೆ. ಐತಿಹಾಸಿಕ ಹದಿನಾರು ಕಾಲು ಮಂಟಪ ಭಾಗಶಃ ಮುಳುಗಡೆಯಾಗಿದೆ.

ಕಳೆದ ವರ್ಷದಂತೆ ಈ ಬಾರಿಯೂ ಹೆಚ್ಚು ಪ್ರವಾಹ ಬರಬಹುದು ಎಂಬ ಸೂಚನೆಯಿದೆ. ಹಾಗಾಗಿ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಜಿಲ್ಲಾ ಮತ್ತು ತಾಲೂಕು ಆಡಳಿತ ಈಗಾಗಲೇ ಸೂಚನೆ ನೀಡಿದೆ.

ನೀರಿನ ಪ್ರಮಾಣ ಹೆಚ್ಚಾಗಿದ್ರೂ ನದಿಯಲ್ಲಿ ಮಿಂದೇಳುವ ಹುಚ್ಚು ಸಾಹಸ ನಡೆದಿದೆ. ಕಪಿಲಾ ನದಿಯಲ್ಲಿ ಹುಚ್ಚು ಸಾಹಸಕ್ಕೆ ಮುಂದಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳೀಯ ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ.

Published On - 10:49 am, Thu, 6 August 20