ತುಂಬಿದ ತುಪ್ಪರಿ ಹಳ್ಳ: ಕೊರೊನಾ ಸಂಕಷ್ಟ ನಡುವೆ ರೈತರಿಗೆ ಶಾಕ್, ಅಪಾರ ಬೆಳೆ ನಾಶ
ಧಾರವಾಡ: ಹುಬ್ಬಳ್ಳಿ ನಗರದಲ್ಲಿ ಮುಂದುವರಿದ ಭಾರಿ ಮಳೆಯಿಂದ ಉಣಕಲ್ ಕೆರೆ ತುಂಬಿ ಹರಿಯುತ್ತಿದೆ. ಇದರಿಂದ ಹಳೆಯ ಹುಬ್ಬಳ್ಳಿ ಪ್ರದೇಶದ ಜನರಲ್ಲಿ ಕೆರೆ ನೀರು ಮನೆಗಳಿಗೆ ನುಗ್ಗುವ ಆತಂಕ ಶುರುವಾಗಿದೆ. ಇತ್ತ ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರಿದಿದೆ. ಧಾರಾಕಾರ ಮಳೆಗೆ ತುಪ್ಪರಿ ಹಳ್ಳ ತುಂಬಿ ಹರಿಯುತ್ತಿದ್ದು ಇದರಿಂದ ರೈತರ ಜಮೀನುಗಳಿಗೆ ನೀರು ನುಗ್ಗಿದೆ. ಹೀಗಾಗಿ, ರೈತರು ಬೆಳೆದ ಅಪಾರ ಪ್ರಮಾಣದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಕೊರೊನಾ ಸಂಕಷ್ಟದ ನಡುವೆ ಮಳೆಯ ಅವಾಂತರ ರೈತರಿಗೆ ಶಾಕ್ ತಂದುಕೊಟ್ಟಿದೆ.

ಧಾರವಾಡ: ಹುಬ್ಬಳ್ಳಿ ನಗರದಲ್ಲಿ ಮುಂದುವರಿದ ಭಾರಿ ಮಳೆಯಿಂದ ಉಣಕಲ್ ಕೆರೆ ತುಂಬಿ ಹರಿಯುತ್ತಿದೆ. ಇದರಿಂದ ಹಳೆಯ ಹುಬ್ಬಳ್ಳಿ ಪ್ರದೇಶದ ಜನರಲ್ಲಿ ಕೆರೆ ನೀರು ಮನೆಗಳಿಗೆ ನುಗ್ಗುವ ಆತಂಕ ಶುರುವಾಗಿದೆ.
ಇತ್ತ ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರಿದಿದೆ. ಧಾರಾಕಾರ ಮಳೆಗೆ ತುಪ್ಪರಿ ಹಳ್ಳ ತುಂಬಿ ಹರಿಯುತ್ತಿದ್ದು ಇದರಿಂದ ರೈತರ ಜಮೀನುಗಳಿಗೆ ನೀರು ನುಗ್ಗಿದೆ.
ಹೀಗಾಗಿ, ರೈತರು ಬೆಳೆದ ಅಪಾರ ಪ್ರಮಾಣದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಕೊರೊನಾ ಸಂಕಷ್ಟದ ನಡುವೆ ಮಳೆಯ ಅವಾಂತರ ರೈತರಿಗೆ ಶಾಕ್ ತಂದುಕೊಟ್ಟಿದೆ.

Published On - 10:25 am, Thu, 6 August 20



