ಪ್ರಚೋದನಕಾರಿ ಭಾಷಣ ಆರೋಪ: ಕಾರ್ಕಳ ಬಿಜೆಪಿ ಶಾಸಕನಿಗೆ ಸಮನ್ಸ್
ಉಡುಪಿ: ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಕಾರ್ಕಳ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಿಂದ ಸಮನ್ಸ್ ನೀಡಲಾಗಿದೆ. 2018ರ ಚುನಾವಣಾ ಭಾಷಣದ ವೇಳೆ ಸುನೀಲ್ ಕುಮಾರ್ ಕೋಮುವಾದ ಪ್ರಚೋದಿಸುವಂತೆ ಭಾಷಣ ಮಾಡಿದ್ದರು. ಶಾಸಕರ ವಿರುದ್ಧ ಕಾರ್ಕಳ ಟೌನ್ ಪೊಲೀಸರು FIR ದಾಖಲು ಮಾಡಿದ್ದರು. ಜೊತೆಗೆ, ಪ್ರಕರಣ ರದ್ದುಗೊಳಿಸಲು ಸಲ್ಲಿಸಲಾದ ಮನವಿಯನ್ನು ಹೈಕೋರ್ಟ್ ಕೂಡ ನಿರಾಕರಿಸಿತ್ತು. ಇದೀಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ನೀಡಿದ್ದು, ಡಿಸೆಂಬರ್ 10ಕ್ಕೆ ವಿಚಾರಣೆ ಹಾಜರಾಗುವಂತೆ ಸುನೀಲ್ ಕುಮಾರ್ಗೆ ಸೂಚಿಸಿದೆ. ಏನು […]
ಉಡುಪಿ: ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಕಾರ್ಕಳ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಿಂದ ಸಮನ್ಸ್ ನೀಡಲಾಗಿದೆ.
2018ರ ಚುನಾವಣಾ ಭಾಷಣದ ವೇಳೆ ಸುನೀಲ್ ಕುಮಾರ್ ಕೋಮುವಾದ ಪ್ರಚೋದಿಸುವಂತೆ ಭಾಷಣ ಮಾಡಿದ್ದರು. ಶಾಸಕರ ವಿರುದ್ಧ ಕಾರ್ಕಳ ಟೌನ್ ಪೊಲೀಸರು FIR ದಾಖಲು ಮಾಡಿದ್ದರು. ಜೊತೆಗೆ, ಪ್ರಕರಣ ರದ್ದುಗೊಳಿಸಲು ಸಲ್ಲಿಸಲಾದ ಮನವಿಯನ್ನು ಹೈಕೋರ್ಟ್ ಕೂಡ ನಿರಾಕರಿಸಿತ್ತು. ಇದೀಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ನೀಡಿದ್ದು, ಡಿಸೆಂಬರ್ 10ಕ್ಕೆ ವಿಚಾರಣೆ ಹಾಜರಾಗುವಂತೆ ಸುನೀಲ್ ಕುಮಾರ್ಗೆ ಸೂಚಿಸಿದೆ.
ಏನು ಹೇಳಿದ್ರು ಶಾಸಕರು? 2018ರಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಲ್ಲಡ್ಕದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಸುನೀಲ್ ಕುಮಾರ್, ಬಂಟ್ವಾಳ ಕ್ಷೇತ್ರದಲ್ಲಿ ಈ ಬಾರಿ ಚುನಾವಣೆ ರಾಜೇಶ್ ನಾಯ್ಕ್ ಮತ್ತು ರಮಾನಾಥ್ ರೈ ನಡುವೆ ನಡೆಯುತ್ತಿಲ್ಲ. ಬದಲಿಗೆ ಶ್ರೀರಾಮ ಮತ್ತು ಅಲ್ಲಾಹುವಿನ ನಡುವೆ ನಡೆಯುತ್ತಿದೆ. ಮತ್ತೊಮ್ಮೆ ಅಲ್ಲಾಹುವನ್ನೇ ಗೆಲ್ಲಿಸುತ್ತೀರೋ ಅಥವಾ ಶ್ರೀರಾಮನನ್ನು ಪ್ರೀತಿಸುವ ವ್ಯಕ್ತಿಯನ್ನು ಗೆಲ್ಲಿಸುತ್ತೀರೋ ನೀವೇ ನಿರ್ಧರಿಸಿ ಎಂದು ಹೇಳಿದ್ದರು. ಇದು ತೀವ್ರ ವಿವಾದ ಸೃಷ್ಟಿಸಿತ್ತು.