ಕರ್ನಾಟಕ ಬಜೆಟ್ 2021: ರಾಜ್ಯ ಸರ್ಕಾರಕ್ಕೆ ಬರುವ ಆದಾಯ ಹಾಗೂ ವೆಚ್ಚದ ಲೆಕ್ಕಾಚಾರ ಹೀಗಿದೆ

|

Updated on: Mar 08, 2021 | 7:39 PM

ಕರ್ನಾಟಕ ಬಜೆಟ್​ನ ಈ ಬಾರಿಯ ಗಾತ್ರ 2,46,206.92 ಕೋಟಿ ರೂಪಾಯಿ. ಇನ್ನು ಸರ್ಕಾರಕ್ಕೆ ಬರುವ ಆದಾಯದ ಮೂಲ ಹಾಗೂ ಅದು ಯಾವುದಕ್ಕೆ, ಎಷ್ಟು ಖರ್ಚು ಮಾಡುತ್ತದೆ ಎಂಬ ಲೆಕ್ಕಾಚಾರ ಇಲ್ಲಿದೆ.

ಕರ್ನಾಟಕ ಬಜೆಟ್ 2021: ರಾಜ್ಯ ಸರ್ಕಾರಕ್ಕೆ ಬರುವ ಆದಾಯ ಹಾಗೂ ವೆಚ್ಚದ ಲೆಕ್ಕಾಚಾರ ಹೀಗಿದೆ
ಯಡಿಯೂರಪ್ಪ
Follow us on

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಿರುವ 2021- 22ನೇ ಸಾಲಿನ ಕರ್ನಾಟಕ ಬಜೆಟ್​ನಲ್ಲಿ ಸರ್ಕಾರಕ್ಕೆ ಬರುವ ಆದಾಯದ ಮೂಲಗಳು ಯಾವುವು ಹಾಗೂ ಆ ಆದಾಯದಲ್ಲಿ ಯಾವುದಕ್ಕೆ, ಎಷ್ಟು ವೆಚ್ಚ ಮಾಡಲಿದೆ ಎಂಬ ವಿವರ ಹೀಗಿದೆ. ಅದನ್ನು ರೂಪಾಯಿ ಲೆಕ್ಕದಲ್ಲಿ ಇಳಿಸಿದ್ದು, ಪೈಸೆಗಳಲ್ಲಿ ವಿತರಣೆ ಮಾಡಿರುವುದನ್ನು ಇಲ್ಲಿ ನೀಡಲಾಗಿದೆ.

ಆದಾಯ ಮೂಲಗಳು ಯಾವವು?
ರಾಜ್ಯ ತೆರಿಗೆ- 50 ಪೈಸೆ
ಸಾಲದಿಂದ- 29 ಪೈಸೆ
ಕೇಂದ್ರ ತೆರಿಗೆ ಪಾಲಿನಿಂದ- 10 ಪೈಸೆ
ಕೇಂದ್ರ ಸರ್ಕಾರದ ಸಹಾಯಾನುದಾನ- 6 ಪೈಸೆ
ರಾಜ್ಯ ತೆರಿಗೆಯೇತರ ರಾಜಸ್ವದಿಂದ- 3 ಪೈಸೆ
ಸಾರ್ವಜನಿಕ ಲೆಕ್ಕ ನಿವ್ವಳ- 2 ಪೈಸೆ

ಕರ್ನಾಟಕ ಸರ್ಕಾರದ ಆದಾಯ ಮೂಲಗಳು

ವೆಚ್ಚಗಳು ಯಾವ್ಯಾವುದಕ್ಕೆ ಆಗುತ್ತವೆ
ವೇತನ ಹಾಗೂ ಭತ್ಯೆಗಳು – 21 ಪೈಸೆ
ಋಣ ಮೇಲುಸ್ತುವಾರಿ- 18 ಪೈಸೆ
ಬಂಡವಾಳ ವೆಚ್ಚ- 17 ಪೈಸೆ
ಇತರೆ ರಾಜಸ್ವ ವೆಚ್ಚ- 16 ಪೈಸೆ
ಸಹಾಯ ಧನ- 10 ಪೈಸೆ
ಪಿಂಚಣಿ- 10 ಪೈಸೆ
ಸಹಾಯಾನುದಾನ ಮತ್ತು ಇತರೆ- 4 ಪೈಸೆ
ಸಾಮಾಜಿಕ ಭದ್ರತಾ ಪಿಂಚಣಿಗಳು- 3 ಪೈಸೆ
ಆಡಳಿತಾತ್ಮಕ ವೆಚ್ಚಗಳು- 1 ಪೈಸೆ

ಬಜೆಟ್ ವೆಚ್ಚದ ಲೆಕ್ಕಾಚಾರ

ಅಂದಹಾಗೆ ಈ ಬಾರಿಯ ಬಜೆಟ್​ನ ಗಾತ್ರ 2,46,206.92 ಕೋಟಿ ರೂಪಾಯಿ ಆಗಿದ್ದು, ಕಳೆದ ಬಾರಿ ಬಜೆಟ್ ಗಾತ್ರ 2,37,893.33 ಕೋಟಿ ರೂಪಾಯಿ ಇತ್ತು.

Published On - 1:23 pm, Mon, 8 March 21