ಬೈ ಎಲೆಕ್ಷನ್ ರಿಸಲ್ಟ್: ನಿಜವಾಯ್ತು ಟಿವಿ9 ಆಂತರಿಕ ಸಮೀಕ್ಷೆ

|

Updated on: Dec 10, 2019 | 2:52 PM

ಬೆಂಗಳೂರು: ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಟಿವಿ9 ಆಂತರಿಕ ಸರ್ವೆ ವರದಿಯಂತೆ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. 15 ಕ್ಷೇತ್ರಗಳಲ್ಲಿ ನಿಖರವಾಗಿ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ಕೇಕೆ ಹಾಕಿದೆ. ಹುಣಸೂರು, ಶಿವಾಜಿನಗರ ಮತ್ತು ಹೊಸಕೋಟೆ ಕ್ಷೇತ್ರಗಳಲ್ಲಿ ಬಿಜೆಪಿ ಸೋಲುವ ಬಗ್ಗೆ ಟಿವಿ9 ಆಂತರಿಕ ಸರ್ವೆಯಲ್ಲಿ ಉಲ್ಲೇಖಿಸಲಾಗಿತ್ತು. ಅದರಂತೆ ಬಿಜೆಪಿ ಈ ಮೂರು ಕ್ಷೇತ್ರಗಳನ್ನು ಕಳೆದುಕೊಂಡಿದೆ. ಇನ್ನು ನಂಬರ್ 1 ಕ್ಷೇತ್ರವಾಗಿ ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯನ್ನು ಪರಿಗಣಿಸಲಾಗಿತ್ತು. 15 ಕ್ಷೇತ್ರಗಳ ಪೈಕಿ ಯಲ್ಲಾಪುರ ಕ್ಷೇತ್ರದಲ್ಲೇ ಬಿಜೆಪಿ ಮೊದಲ […]

ಬೈ ಎಲೆಕ್ಷನ್ ರಿಸಲ್ಟ್: ನಿಜವಾಯ್ತು ಟಿವಿ9 ಆಂತರಿಕ ಸಮೀಕ್ಷೆ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಟಿವಿ9 ಆಂತರಿಕ ಸರ್ವೆ ವರದಿಯಂತೆ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. 15 ಕ್ಷೇತ್ರಗಳಲ್ಲಿ ನಿಖರವಾಗಿ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ಕೇಕೆ ಹಾಕಿದೆ. ಹುಣಸೂರು, ಶಿವಾಜಿನಗರ ಮತ್ತು ಹೊಸಕೋಟೆ ಕ್ಷೇತ್ರಗಳಲ್ಲಿ ಬಿಜೆಪಿ ಸೋಲುವ ಬಗ್ಗೆ ಟಿವಿ9 ಆಂತರಿಕ ಸರ್ವೆಯಲ್ಲಿ ಉಲ್ಲೇಖಿಸಲಾಗಿತ್ತು. ಅದರಂತೆ ಬಿಜೆಪಿ ಈ ಮೂರು ಕ್ಷೇತ್ರಗಳನ್ನು ಕಳೆದುಕೊಂಡಿದೆ.

ಇನ್ನು ನಂಬರ್ 1 ಕ್ಷೇತ್ರವಾಗಿ ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯನ್ನು ಪರಿಗಣಿಸಲಾಗಿತ್ತು. 15 ಕ್ಷೇತ್ರಗಳ ಪೈಕಿ ಯಲ್ಲಾಪುರ ಕ್ಷೇತ್ರದಲ್ಲೇ ಬಿಜೆಪಿ ಮೊದಲ ಗೆಲುವು ಸಾಧಿಸಿದೆ. ಡಿಸೆಂಬರ್ 3ರಂದು ಸಂಜೆ ಬಹಿರಂಗ ಪ್ರಚಾರದ ಕೊನೆಯ ಅವಧಿಯಲ್ಲಿ ಟಿವಿ9 ಕನ್ನಡ  ವರದಿ ಮಾಡಿತ್ತು.

Published On - 5:14 pm, Mon, 9 December 19