ಸಿದ್ದು ರಾಜೀನಾಮೆ: ನಾಯಕನಾಗಿ ಉಳಿಯುವ ಲಕ್ಷಣ ಇರ್ಲಿಲ್ಲ.. ಅದ್ಕೇ ರಾಜೀನಾಮೆ-DVS
ಬೆಂಗಳೂರು: ಬೈ ಎಲೆಕ್ಷನ್ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಮತದಾರ ಪ್ರಭು ನಿರಾಶೆಯ ಮಡುವಿಗೆ ತಳ್ಳಿದ್ದಾನೆ. ತತ್ಫಲವಾಗಿ, ಮೊದಲ ವಿಕೆಟ್ ಉರುಳಿದೆ. ಸಿದ್ದರಾಮಯ್ಯ ಸಿಎಲ್ಪಿ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ದಳಪತಿಗಳು ಸೈಲೆಂಟ್ ಮೋಡ್ಗೆ ಹೊರಳಿದ್ದಾರೆ. ಪ್ರಜಾತಂತ್ರಗಳ ಮೌಲ್ಯಗಳನ್ನ ಎತ್ತಿಹಿಡಿಯುವ ಅವಶ್ಯಕತೆಯಿದೆ. ಹಾಗಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಮತ್ತು ವಿಪಕ್ಷ ನಾಯಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಈ ಬಗ್ಗೆ ಪತ್ರ […]
ಬೆಂಗಳೂರು: ಬೈ ಎಲೆಕ್ಷನ್ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಮತದಾರ ಪ್ರಭು ನಿರಾಶೆಯ ಮಡುವಿಗೆ ತಳ್ಳಿದ್ದಾನೆ. ತತ್ಫಲವಾಗಿ, ಮೊದಲ ವಿಕೆಟ್ ಉರುಳಿದೆ. ಸಿದ್ದರಾಮಯ್ಯ ಸಿಎಲ್ಪಿ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ದಳಪತಿಗಳು ಸೈಲೆಂಟ್ ಮೋಡ್ಗೆ ಹೊರಳಿದ್ದಾರೆ.
ಪ್ರಜಾತಂತ್ರಗಳ ಮೌಲ್ಯಗಳನ್ನ ಎತ್ತಿಹಿಡಿಯುವ ಅವಶ್ಯಕತೆಯಿದೆ. ಹಾಗಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಮತ್ತು ವಿಪಕ್ಷ ನಾಯಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಈ ಬಗ್ಗೆ ಪತ್ರ ಬರೆದಿದ್ದೇನೆ ಎಂದೂ ಅವರು ಹೇಳಿದ್ದಾರೆ.
ನಾನು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವನು. ನಾನು ಇಂದಿನ ತೀರ್ಪನ್ನ ಒಪ್ಪಿಕೊಂಡಿದ್ದೇನೆ. ಕುದುರೆ ವ್ಯಾಪಾರಕ್ಕೆ ಒಳಗಾದವರಿಗೆ ಶಿಕ್ಷೆ ಕೊಡ್ತಾರೆ ಅಂತಾ ನಿರೀಕ್ಷೆ ಇತ್ತು. ನಿರೀಕ್ಷೆ ಹುಸಿ ಆಗಿದೆ. ಜನರು ಕೊಟ್ಟ ತೀರ್ಪು ಒಪ್ಪಿದ್ದೇನೆ ಎಂದು ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
I respect the mandate given by the electorate in the #KarnatakaBypolls. I expected people to teach @BJP4Karnataka leaders a great lesson for orchestrating #OpertionKamala.
I am taking the moral responsibility & resigning as Leader of CLP & Leader of Opposition. pic.twitter.com/AaG9Xl3SdP
— Siddaramaiah (@siddaramaiah) December 9, 2019
ನಾಯಕನಾಗಿ ಮುಂದುವರಿಯವ ಲಕ್ಷಣ ಇರಲಿಲ್ಲ.. ಅದ್ಕೇ ರಾಜೀನಾಮೆ -DVS ಸಿದ್ದರಾಮಯ್ಯಗೆ ಕೊನೆಗೂ ಬುದ್ದಿ ಬಂತಲ್ಲ. ನಾಯಕನಾಗಿ ಮುಂದುವರಿಯವ ಲಕ್ಷಣ ಅವರಲ್ಲಿ ಇಲ್ಲ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿರುವುದು ಅವರಿಗೆ ಗೌರವ ತಂದಿದೆ ಎಂದು ದೆಹಲಿಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.
Published On - 3:42 pm, Mon, 9 December 19